Nithya Menen: ಕೊನೆಗೂ ಫಿಕ್ಸ್ ಆಯಿತು ನಟಿ ನಿತ್ಯ ಮೆನನ್ ಮದುವೆ, ನಿತ್ಯ ಮೆನನ್ ವರಿಸುವ ಹುಡುಗ ಯಾರು ಗೊತ್ತಾ..?
ಇದೀಗ ನಟಿ ನಿತ್ಯಾ ಮೆನನ್ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
Nithya Menen Marriage Update: ದೇಶದ ಖ್ಯಾತ ನಟಿ ನಿತ್ಯಾ ಮೆನನ್ (Nithya Menen) ಸಾಕಷ್ಟು ಬಾರಿ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಾಗುತ್ತಾರೆ. ಸಾಮಾನ್ಯವಾಗಿ ಮದುವೆ ಆಗದ ಸೆಲೆಬ್ರೆಟಿಗಳು ಯಾವುದೇ ಕಾರ್ಯಕ್ರಮಗಳಿಗೆ ಭೇಟಿ ನೀಡಿದಾಗ ಅವರು ಮದುವೆಯ ವಿಚಾರವಾಗಿ ಹೈಲೈಟ್ ಆಗುತ್ತಾರೆ. ಮದುವೆಯ ಬಗ್ಗೆ ಸಕಷ್ಟು ಮಾತುಕತೆ ನಡೆಯುತ್ತದೆ. ಇನ್ನು ನಟ ನಟಿಯರ ಮದುವೆಯ ಗಾಸಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ.
ಇನ್ನು ಕನ್ನಡ ಚಿತ್ರರಂಗದ ಮೈನ ಚಿತ್ರದ ನಾಯಕಿ ನಿತ್ಯಾ ಮೆನನ್ ಅವರ ಮದುವೆಯ ಸುದ್ದಿಗಳು ವೈರಲ್ ಆಗುತ್ತವೆ. ನಿತ್ಯಾ ಮೆನನ್ ಅವರ ಡೇಟಿಂಗ್ ವಿಚಾರ ಈಗಾಗಲೇ ಸಾಕಷ್ಟು ಬಾರಿ ಸುದ್ದಿಯಾಗಿದೆ. ನಟಿ ಮದುವೆಯಾಗುತ್ತಿರುವ ಹುಡುಗನ ಬಗ್ಗೆ ಕೆಲವು ಮಾಹಿತಿ ಹರಡುತ್ತಾ ಇರುತ್ತದೆ. ಇದೀಗ ನಟಿ ನಿತ್ಯಾ ಮೆನನ್ ಮದುವೆಗೆ ಸಿದ್ದರಾಗಿದ್ದಾರೆ ಎನ್ನುವ ಬಗ್ಗೆ ಅವರ ಆಪ್ತ ಮೂಲಗಳಿಂದ ಮಾಹಿತಿ ಲಭಿಸಿದೆ. ಅಷ್ಟಕ್ಕೂ ನಟಿ ಮದುವೆ ಆಗುವ ಹುಡುಗ ಯಾರು ಎನ್ನುವ ಬಗ್ಗೆ ಎಲ್ಲರು ಕುತೂಹಲರಾಗಿದ್ದಾರೆ.
ಕನ್ನಡ ಟಾಪ್ ನಟಿ ನಿತ್ಯಾ ಮೆನನ್
ನಟಿ ನಿತ್ಯ ಮೆನನ್ ಅವರು ಕನ್ನಡ ಸೇರಿದಂತೆ ತಲೆಗೂ, ಮಲಯಾಳಂ ಹಿಂದಿ ಚಲನ ಚಿತ್ರಗಳಲ್ಲೂ ನಟಿಸಿದ್ದಾರೆ. ಇನ್ನು ನಟಿ 7 ಓ ಕ್ಲೋಕ್ ಚಿತ್ರದಲ್ಲಿ ಪೋಷಕ ಪಾತ್ರ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದ ಬಳಿಕ ನಟಿ ಜೋಶ ಚಿತ್ರದಲ್ಲಿ ಮಿಂಚಿದ್ದರು. ಈ ಚಿತ್ರದಲ್ಲೂ ನಟಿ ಪೋಷಕ ಪಾತ್ರದಲ್ಲೇ ನಟಿಸಿದ್ದಾರೆ.
ಇನ್ನು ನಟ ಚೇತನ್ ಅಹಿಂಸಾ ಅಭಿನಯದ ಮೈನಾ ಚಿತ್ರದಲ್ಲಿ ನಟಿಸುವ ಮೂಲಕ ನಿತ್ಯಾ ಮೆನನ್ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ಈ ಚಿತ್ರದ ಬಳಿಕ ಒಂದರ ಹಿಂದೆ ಮತ್ತೊಂದು ಹಿಟ್ ಚಿತ್ರಗಳನ್ನು ನಟಿ ನೀಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಕೂಡ ನಟಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಇನ್ನು ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ನಟಿ ಆಗಾಗ ಮದುವೇ ಕುರಿತು ಹೈಲೈಟ್ ಆಗುತ್ತಾರೆ. ಇದೀಗ ನಟಿ ನಿತ್ಯಾ ಮೆನನ್ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಬಗ್ಗೆ ನಟಿಯ ಆಪ್ತ ಮೂಲಗಳಿಂದ ಮಾಹಿತಿ ಲಭಿಸಿದೆ.
ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ನಿತ್ಯಾ ಮೆನನ್
ಹಲವು ವರ್ಷಗಳಿಂದ ಮದುವೆಯ ಮಾತನ್ನು ದೂರತಳ್ಳುತ್ತಿದ್ದ ನಟಿ ನಿತ್ಯಾ ಮೆನನ್ ಇದೀಗ ಮದುವೆಗೆ ಒಪ್ಪಿಗೆ ನೀಡಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ನಟಿಯ ಆಪ್ತ ಸ್ನೇಹಿತ ಮತ್ತು ಉದ್ಯಮಿಯ ಜೊತೆ ನಿತ್ಯಾ ಮೆನನ್ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ.
ಇನ್ನು ನಟಿ ಮದುವೆಯಾಗುತ್ತಿರುವ ವರನ ಬಗ್ಗೆ ಮಾಹಿತಿ ಲಭಿಸಿಲ್ಲವಾದರೂ ಸದ್ಯದಲ್ಲೇ ನಟಿ ಹಸೆಮಣೆ ಏರುವುದು ಖಚಿತವಾಗಿದೆ. ಇನ್ನು ನಟಿ ತಮ್ಮ ಮದುವೆಯ ಸುದ್ದಿಗೆ ಯಾವ ರೀತಿ ಪ್ರತಿಕ್ರಿಯೆ ಕೊಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.