Cars Rules: ಹೊಸ ಕಾರ್ ಖರೀದಿ ಮಾಡುವ ಜನರಿಗೆ ಕೇಂದ್ರದಿಂದ ಹೊಸ ನಿಯಮ, ನಿತಿನ್ ಗಡ್ಕರಿ ಮಹತ್ವದ ಆದೇಶ.

ಭಾರತೀಯ ಕಾರು ತಯಾರಕ ಕಂಪನಿಗಳಿಗೆ ಕೇಂದ್ರ ಸರ್ಕಾರದ ಖಡಕ್ ಎಚ್ಚರಿಕೆ,

Nitin Gadkari About Diesel Vehicle: ಕೇಂದ್ರ ರಸ್ತೆ ಸಾರಿಗೆ ಸಚಿವ Nitin Gadkari ಅವರು ರಸ್ತೆ ಸಂಚಾರಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ Traffic ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. Traffic ನಿಯಂತ್ರಣದ ಜೊತೆಗೆ ಕೇಂದ್ರ ಸರ್ಕಾರ ದೇಶದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಕೂಡ ತಡೆಗಟ್ಟುವ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ Nitin Gadkari ಅವರು ದೇಶದಲ್ಲಿ Ethanal ಚಾಲಿತ ವಾಹನಗಳನ್ನು ಜಾರಿಗೊಳಿಸಲು ನಿರ್ಧರಿಸಿದ್ದಾರೆ.

ಈಗಾಗಲೇ Toyota ಎಥನಾಲ್ ಚಾಲಿತ ಕಾರ್ ತಯಾರಿಕೆಯನ್ನು ಪ್ರಾರಂಭಗೊಳಿಸಿದೆ. ಈ ಬಗ್ಗೆ ಈಗಾಗಲೇ ಸುದ್ದಿಗಳು ವೈರಲ್ ಆಗಿದ್ದು, ಸದ್ಯದಲ್ಲೇ Ethanal ಚಾಲಿತ Toyota ಕಾರ್ ಗಳು ರಸ್ತೆಗಿಳಿಯಲಿದೆ. ಇದೀಗ ದೇಶದ ಕಾರು ತಯಾರಕ ಕಂಪನಿಗಳಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ Nitin Gadkari ಅವರು ಭಾರತೀಯ ಕಾರು ತಯಾರಕ ಕಂಪನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Road Transport Minister Nitin Gadkari
Image Credit: Mypunepulse

ಕೇಂದ್ರ ರಸ್ತೆ ಸಾರಿಗೆ ಸಚಿವ Nitin Gadkari
ದೇಶದಲ್ಲಿ 2070 ರ ವೇಳೆಯಲ್ಲಿ ಕಾರ್ಬನ್ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, Diesel ನಂತಹ ಅಪಾಯಕಾರಿ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಅನೇಕ ನಿಯಮವನ್ನು ಕೇಂದ್ರ ಸರಕಾರ ಜಾರಿ ಮಾಡುತ್ತಿದೆ.

ವಾಹನ ಮಾರಾಟದಲ್ಲಿನ ತ್ವರಿತ ಬೆಳವಣಿಗೆಗೆ ಅನುಗುಣವಾಗಿ, ಸ್ವಚ್ಛ ಮತ್ತು ಹಸಿರು ಪಾರ್ಯಾಯ ಇಂಧನಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ಇಂಧನಗಳು ಆಮದು ಬದಲಿಗಳಾಗಿರಬೇಕು, ವೆಚ್ಚ ಪರಿಣಾಮಕಾರಿ, ಸ್ಥಳೀಯ ಮತ್ತು ಮಾಲಿನ್ಯ ಮುಕ್ತವಾಗಿರಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ Nitin Gadkari ಅವರು Twitter ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Join Nadunudi News WhatsApp Group

Nitin Gadkari About Diesel Vehicle
Image Credit: Economictimes

ಭಾರತೀಯ ಕಾರು ತಯಾರಕ ಕಂಪನಿಗಳಿಗೆ ಕೇಂದ್ರ ಸರ್ಕಾರದ ಖಡಕ್ ಎಚ್ಚರಿಕೆ
ಇತ್ತೀಚಿನ ಸಮಾವೇಶದಲ್ಲಿ ಮಾತನಾಡಿದ ನಿತಿನ್ ಗಡ್ಕರಿ ಅವರು ಭಾರತೀಯ ಕಾರು ತಯಾರಕ ಕಂಪನಿಗಳಿಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಡೀಸೆಲ್ ಅಪಾಯಕಾರಿ ಇಂಧನವೆಂದು ಸಚಿವರು ಪರಿಗಣಿಸಿದ್ದಾರೆ. ‘ಡೀಸೆಲ್ ಗೆ ವಿದಾಯ ಹೇಳಿ. ಡೀಸೆಲ್ ಚಾಲಿತ ವಾಹನಗಳ ತಯಾರಿಕೆಯನ್ನು ನಿಲ್ಲಿಸಿಬಿಡಿ. ಡೀಸೆಲ್ ಚಾಲಿತ ವಾಹನಗಳ ತಯಾರಿಕೆ ನಿಲ್ಲದಿದ್ದರೆ ಕಾರುಗಳ ಮಾರಾಟ ಕಷ್ಟವಾಗುವಷ್ಟು ತೆರಿಗೆಯನ್ನು ಹೆಚ್ಚಿಸುತ್ತೇವೆ’ ಎಂದಿದ್ದಾರೆ. ಈ ಮೂಲಕ ಕಾರು ತಯಾರಕ ಕಂಪನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Join Nadunudi News WhatsApp Group