Toll Tax: ಪ್ರತಿನಿತ್ಯ ಟೋಲ್ ಕಟ್ಟುವ ವಾಹನ ಸವಾರರಿಗೆ ಶೀಘ್ರದಲ್ಲೇ ಹೊಸ ನಿಯಮ, ಕೇಂದ್ರ ಸರ್ಕಾರದ ನಿರ್ಧಾರ.
ಟೋಲ್ ಕಟ್ಟುವವರಿಗೆ ಹೊಸ ನಿಯಮ ಜಾರಿಗೆ ತಂದ ಸರ್ಕಾರ.
Nitin Gadkari About Toll Tax: ದೇಶದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿರುವ ಹಿನ್ನಲೆ ಟೋಲ್ ಸಂಗ್ರಹಣೆಯಲ್ಲಿ ಸಾಕಷ್ಟು ನಿಯಮಗಳನ್ನು ಬದಲಾಯಿಸಲಾಗಿದೆ. ಟೋಲ್ (Toll) ಸಂಗ್ರಹಣೆಯಲ್ಲಿ ಸಾಕಷ್ಟು ರೀತಿಯ ಸುಲಭ ವಿಧಾನವನ್ನು ಬಳಸಲಾಗುತ್ತದೆ. ಟೋಲ್ ಸಂಗ್ರಹಣೆಯಲ್ಲಿ ವಿಧಾನದಲ್ಲಿ ಹೊಸ ಹೊಸ ತಂತ್ರಜ್ಞಗಳನ್ನು ಬಳಸಿಕೊಳ್ಳಲಾಗುತ್ತದೆ.
ಇನ್ನು ಟೋಲ್ ಸಂಗ್ರಹಣೆಯಲ್ಲಿ ಫಾಸ್ಟ್ ಟ್ಯಾಗ್ (FASTag) ನ ಮೂಲಕ ಟೋಲ್ ಸಂಗ್ರಹಣೆ ಸುಲಭವಾಗಿದೆ. ಇದೀಗ ಟೋಲ್ ಸಂಗ್ರಹಣೆಯಲ್ಲಿ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಟೋಲ್ ತೆರಿಗೆಗೆ ಸಂಬಂಧಿಸಿಡನಂತೆ ಹಲವು ಬದಲಾವಣೆಯನ್ನು ಜಾರಿಗೊಳಿಸುವ ಬಗ್ಗೆ ಸೂಚನೆ ನೀಡಿದ್ದಾರೆ.
ಟೋಲ್ ಸಂಗ್ರಹಣೆಗೆ ಹೊಸ ತಂತ್ರಜ್ಞಾನ
ಫಾಸ್ಟ್ ಟ್ಯಾಗ್ ನ ನಂತರ ಸ್ವಯಂ ಚಾಲಿತ ನಂಬರ್ ಪ್ಲೇಟ್ ರೀಡರ್ ವ್ಯವಸ್ಥೆ ಕೂಡ ಜಾರಿಗೊಳಿಸಲಾಗಿದೆ. ಈ ಎಲ್ಲ ತಂತ್ರಜ್ಞಾನಗಳ ಮೂಲಕ ಟೋಲ್ ಸಂಗ್ರಹಣೆ ಸುಲಭವಾಗುತ್ತಿದೆ. ವಿವಿಧ ರೀತಿಯ ತಂತ್ರಜ್ಞಾನಗಳು ಜಾರಿಯಾಗಿದ್ದರು ಕೂಡ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬೀಳುತ್ತಿಲ್ಲ. ಸಂಚಾರಿ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಶೀಘ್ರದಲ್ಲೇ ಟೋಲ್ ಸಂಗ್ರಹಣೆಗೆ ಹೊಸ ತಂತ್ರಜ್ಞಾನ ಅಳವಡಿಸಲು ಸಿದ್ಧತೆ ನಡೆಸುತ್ತಿದೆ.
ತಡೆರಹಿತ ಟೋಲ್ ಸಂಗ್ರಹಣಾ ವ್ಯವಸ್ಥೆ
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಡೆರಹಿತ ಟೋಲ್ ಸಂಗ್ರಹಣಾ ವ್ಯವಸ್ಥೆ ಜಾರಿಗೊಳಿಸುದರ ಬಗ್ಗೆ ಮಾಹಿತಿ ನೀಡಿದ್ದಾರೆ. ತಡೆರಹಿತ ಟೋಲ್ ಸಂಗ್ರಹಣಾ ವ್ಯವಸ್ಥೆಯ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ಮುಗಿಯುತ್ತಿದ್ದಂತೆ ತಕ್ಷಣ ಈ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಪ್ರಯಾಣದ ಸಮಯದಲ್ಲಿ ಇದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ, ದೇಶದ ರಸ್ತೆಗಳಲ್ಲಿ ಕ್ರಮಿಸುವ ದೂರದ ಆಧಾರದ ಮೇಲೆ ಟೋಲ್ ಪಾವತಿ ವ್ಯವಸ್ಥೆಯನ್ನು ಸಹ ಜಾರಿಗೆ ತರಲಾಗುವುದು ಎಂದು ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಗ್ಲೋಬಲ್ ನ್ಯಾವಿಗೇಶನ್ ಸಿಸ್ಟಮ್
ಇನ್ನು ಫಾಸ್ಟ್ ಟ್ಯಾಗ್ ನ ಮೂಲಕ ಟೋಲ್ ಸಂಗ್ರಹಣೆ 47 ಸೆಕೆಂಡು ತೆಗೆದುಕೊಳ್ಳುತ್ತದೆ. ಇದನ್ನು 30 ಸೆಕೆಂಡುಗಳಿಗೆ ಕಡಿಮೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಸದ್ಯ ಫಾಸ್ಟ್ ಟ್ಯಾಗ್ ನಿಯಮದಲ್ಲಿ ಬದಲಾವಣೆಯನ್ನ ಮಾಡಲು ಕೇಂದ್ರ ಮುಂದಾಗಿದ್ದು ಫಾಸ್ಟ್ ಟ್ಯಾಗ್ ಬದಲಿದೆ ಹೊಸ ತಂತ್ರಜ್ಞಾನವನ್ನ ಅಳವಡಿಸಲು ಮುಂದಾಗಿದೆ.
ಇನ್ನುಮುಂದೆ ಈ ವ್ಯವಸ್ಥೆಗಳ ಬದಲಾಗಿ ಗ್ಲೋಬಲ್ ನ್ಯಾವಿಗೇಶನ್ ಸಿಸ್ಟಮ್ (GNSS ) ಗಳನ್ನೂ ಅಳವಡಿಸಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ. ಜಿಎನ್ ಎಸ್ ಎಸ್ ಆಧಾರಿತ ಗೇಟ್ ಮತ್ತು ಪ್ಲಾಜಾಗಳನ್ನು ದೇಶದಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ಸಚಿವರು ಮಾಹಿತಿ ನೀಡಿದ್ದಾರೆ.