Nivedita Gowda: ಗಂಡ ಎಂದೂ ಕೂಡ ನೋಡದೆ ನಿವೇದಿತಾ ಗೌಡ ಮಾಡಿದ ಈ ಕೆಲಸ ವೈರಲ್
ಚಂದನ್ ಗೆ ಬೀಪ್ ಸೌಂಡ್ ನಲ್ಲಿ ಬೈದ ನಿವೇದಿತಾ, ವಿಡಿಯೋ ವೈರಲ್.
Nivedita Gowda Beep Words Video Viral: ಚಂದನವನದ ಕ್ಯೂಟ್ ಜೋಡಿಯಾಗಿರುವ ನಿವೇದಿತಾ ಗೌಡ (Nivedita Gowda) ಹಾಗೂ ಚಂದನ್ ಶೆಟ್ಟಿ (Chandan Shetty) ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುತ್ತಾರೆ. ಈ ಇಬ್ಬರು ಕೂಡ ಬಿಗ್ ಬೋಸ್ ಮೂಲಕ ಜನರಿಗೆ ಪರಿಚಯವಾಗಿದ್ದರು. ಇದೀಗ ಈ ಜೋಡಿ ಸಕ್ಕತ್ ಫಾಮ್ಸ್ ಆಗಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಇಬ್ಬರು ಸದಾ ಆಕ್ಟಿವ್ ಆಗಿರುತ್ತಾರೆ. ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ
ಚಂದನ್ ಶೆಟ್ಟಿ ಕನ್ನಡದಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿ ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಇನ್ನು ನಿವೇದಿತಾ ಗೌಡ ಅವರು ರಿಯಾಲಿಟಿ ಶೋ ಗಳಲ್ಲಿ ಸ್ಪರ್ದಿಸುವ ಮೂಲಕ ಅಭಿಮಾಗಳ ಗಮನ ಸೆಳೆಯುತ್ತಲೇ ಇರುತ್ತಾರೆ. ನಿವೇದಿತಾ ಗೌಡ ಬೇಬಿ ಡಾ ಎಂದೇ ಖ್ಯಾತಿಪಡೆದಿದ್ದಾರೆ. ಇನ್ನು ಚಂದನ್ ಹಾಗೂ ನಿವಿ ಜೋಡಿ ಎಲ್ಲರ ನೆಚ್ಚಿನ ಜೋಡಿಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಚಂದನ್ ನಿವಿ ವಿಡಿಯೋ
ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುದರ ಜೊತೆಗೆ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಹೈಲೈಟ್ ಆಗಿದ್ದಾರೆ. ಚಂದನ್ ನಿವಿ ಹೊಸ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ. ಚಂದನ್ ಹಾಗೂ ನಿವೇದಿತಾ ತಮಾಷೆಯ ವಿಡಿಯೋಗೆ ನೆಗಟಿವ್ ಕಮೆಂಟ್ ಗಳ ಜೊತೆ ವ್ಯಾಪಕ ಮೆಚ್ಚುಗೆ ಕೂಡ ಲಭಿಸುತ್ತಿದೆ.
ಚಂದನ್ ಗೆ ಬೀಪ್ ಸೌಂಡ್ ನಲ್ಲಿ ಬೈದ ನಿವೇದಿತಾ
ನಡೆದುಕೊಂಡು ಬರುತ್ತಿರುವ ನಿವೇದಿತಾಗೆ ಚಂದನ್ ತಮಾಷೆಗೆ ಹೆದರಿಸಿದ್ದಾರೆ. ಚಂದನ್ ಜೋರಾಗಿ ಕೂಗಿದ ಕಾರಣ ನಿವಿ ಹೆದರಿಕೊಂಡಿದ್ದಾರೆ. ಈ ವೇಳೆ ಚಂದನ್ ಗೆ ನಿವೇದಿತಾ ಬೈದಿದ್ದಾರೆ. ಇನ್ನೊಮ್ಮೆ ಚಂದನ್ ಡೋರ್ ಬೆಲ್ ಮಾಡಿ ಮತ್ತೆ ಜೋರಗಿ ಕೂಗಿದ್ದಾರೆ ಆ ಸಮಯದಲ್ಲಿ ಕೂಡ ನಿವಿ ಹೆದರಿಕೊಂಡಿದ್ದಾರೆ.
ನಂತರ ಚಂದನ್ ಲಿಫ್ಟ್ ನಲ್ಲಿ ಸೆಲ್ಫಿ ತೆಗೆಯುವಾಗ ಕೂಡ ಹೆದರಿಸಿದ್ದಾರೆ. ಈ ವೇಳೆ ಕೂಡ ನಿವಿ ಬೈದಿದ್ದಾರೆ. ಈ ವಿಡಿಯೋವನ್ನು ಚಂದನ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ನಿವೇದಿತಾ ಬೈದ ಪದಗಳಿಗೆ ಬೀಪ್ ಸೌಂಡ್ ಹಾಕಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹೈಲೆರ್ಟ್ ಆಗುವ ಈ ಜೋಡಿ ಆಗಾಗ ವಿದೇಶಕ್ಕೆ ಟ್ರಿಪ್ ಹೋಗುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ನಿವಿ ಹಾಗೂ ಚಂದನ್ ಸದಾ ಟ್ರೆಂಡ್ ನಲ್ಲಿರುತ್ತಾರೆ.