ಇನ್ನು ಯಂಗ್ ಆಗಿದ್ದಾರೆ, ನಿವೇದಿತಾ ಗೌಡ ಅವರ ತಾಯಿ , ವೈರಲ್ ಆಗುತ್ತಿದೆ ಅವರ ವಯಸ್ಸು.

ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಮುಗ್ದತೆಯ ಮೂಲಕ ಟಿಕ್ ಟಾಕ್ ಹಾಗೂ ಬಿಗ್ ಬಾಸ್ ಮೂಲಕ ಹಲ್ ಚಲ್ ಎಬ್ಬಿಸಿ  ಕನ್ನಡಿಗರ ಮನೆಮಾತಾದ ನಿವೇದಿತಾ ಗೌಡ ರವರು ಚಂದನವನದಲ್ಲಿ ಗೊಂಬೆ ಎಂದೇ ಖ್ಯಾತ ಪಡೆದಿದ್ದಾರೆ.  ಬಿಗ್ ಬಾಸ್ 5ನೇ ಸೀಸನ್ ನ ಸ್ಪರ್ದಿಯಾಗಿ ಮಿಂಚಿದ ಬಿಗ್ ಬಾಸ್ ಮನೆಯಲ್ಲಿ ಗಾಯಕ ಚಂದನ್ ಶೆಟ್ಟಿ ರವರು ನಿವೇದಿತಾ ಗೌಡ ರವರಿಗೆ ಹಾಡೊಂದನ್ನು ಸಿದ್ದಪಡಿಸಿ.
ಕಂಪೋಸ್ ಮಾಡಿದ್ದು ಬಿಗ್ ಬಾಸ್ ಮನೆಯಲ್ಲಿ ಅವರಿಬ್ಬರ ನಡುವೆ ಮೂಡಿದ ಆತ್ಮೀಯತೆ ಮುಂದೆ ಪ್ರೀತಿಯಾಗಿ ಬೆಳೆದಿದ್ದು ಚಂದನ್ ಶೆಟ್ಟಿ 2019 ರ ಮೈಸೂರಿನಲ್ಲಿ ನಡೆದತಂಹ ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ರವರಿಗೆ ಚಂದನ್ ಶೆಟ್ಟಿ ವೇದಿಕೆಯ ಮೇಲೆ ನಿವೇದಿತಾ ಗೆ ಪ್ರೊಪೋಸ್ ಮಾಡಿದರು.
ಸದ್ಯ ಇಂದು ನಾವು ನಿಮಗೆ ನಿವೇದಿತಾ ಗೌಡ ಹಾಗೂ ಅವರ ತಾಯಿಯ ನಡುವೆ ಇರುವ ವ್ಯತ್ಯಾಸ ತಿಳಿಸುತ್ತೆವೆ ಬನ್ನಿ. ಇನ್ನು  ಇವರಿಬ್ಬರೂ ನಡೆದುಕೊಂಡು ಹೋಗುತ್ತಿದ್ದರೆ ದಾರಿಯಲ್ಲಿ ಇವರನ್ನ ನೋಡಿದ ಇಬ್ಬರು ನೀವಿಬ್ಬರು ಅಕ್ಕ-ತಂಗಿನ ಅಂತ ಕೇಳಿದ್ದು ಇದೆ. ನಿಮಗೂ ಸಾಕಷ್ಟು ಬಾರಿ ಹಾಗೆ ಅನ್ನಿಸಿರಬಹುದು ಅಲ್ಲವೇ? ಯಾಕೆಂದರೆ ಇವರಿಬ್ಬರು ಸೇರಿ ಹಲವು ರೀಲ್ಸ್ ಗಳನ್ನ ಕೂಡ ಮಾಡುತ್ತಾರೆ.
ಅವರು ಬೇರೆ ಯಾರು ಅಲ್ಲ ನಿವೇದಿತಾ ಗೌಡ ಹಾಗೂ ಅವರ ತಾಯಿ.  ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಹಾಗೂ ಅವರ ತಾಯಿ ಸಾಕಷ್ಟು ವಿಡಿಯೋಗಳನ್ನು ಮಾಡಿ ರೀಲ್ಸ್ ಗಳಲ್ಲಿ ಹರಿಬಿಡುತ್ತಾರೆ. ಇವರಿಬ್ಬರನ್ನ ನೋಡಿದರೆ ಜನ  ಬೆರಗಾಗುತ್ತಾರೆ. ಹೌದು ಯಾಕೆಂದರೆ ಇವರಿಬ್ಬರೂ ಅಮ್ಮ ಮಗಳು ಎನ್ನುವುದಕ್ಕಿಂತ ಅಕ್ಕ ತಂಗಿ ಎನ್ನುವಂತೆ ಕಾಣಿಸುತ್ತಿದ್ದು ನಿವೇದಿತಾ ಗೌಡ ಅವರ ತಾಯಿ ಅಷ್ಟು ಯಂಗ್ ಆಗಿದ್ದಾರೆ.
ಇನ್ನು ನಿವೇದಿತಾ ಗೌಡ ಒಬ್ಬಳು ಇನ್ಫ್ಲುಎನ್ಸರ್.ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಸಾಕಷ್ಟು ಫಾಲೋವರ್ಸ್ ಗಳನ್ನು ಹೊಂದಿದ್ದು ಸದ್ಯ ಇದೀಗ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಕೂಡ ನಡೆಸುತ್ತಿರುವ ನಿವೇದಿತಾ ಗೌಡ ಸದಾ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ. ಜೊತೆಗೆ ಪತಿ ಚಂದನ್ ಗೌಡ ಅವರ ಜೊತೆಗೂ ಡಾನ್ಸ್ ಮಾಡುವ ವಿಡಿಯೋಗಳನ್ನು ಕೂಡ ನಿವೇದಿತಾ ಗೌಡ ಪೋಸ್ಟ್ ಮಾಡುತ್ತಾರೆ.
ಇನ್ನು ನಿವೇದಿತಾ ಗೌಡ ಅವರ ಡ್ಯಾನ್ಸ್ ಅವರ ಮಾತು ಅವರ ಡ್ರೆಸ್ಸಿಂಗ್ ಮೊದಲದ ವಿಷಯಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಟ್ರೋಲ್ ಗಳು ಕೂಡ ಆಗುತ್ತಿರುತ್ತವೆ. ಆದರೆ ಜನರು ಹೇಳುವ ಮಾತುಗಳಿಗೆ ತಲೆ ಕೆಡಿಸಿಕೊಳ್ಳದ ನಿವೇದಿತ ಗೌಡ ರವರು ತಾವು ಏನು ಮಾಡಬೇಕು ಎಂದಿದ್ದಾರೋ ಅದನ್ನು ಮಾಡುತ್ತಲೇ ಇರುತ್ತಾರೆ. ಹೌದು ಇನ್ನೊಂದು ಕಡೆ ನಿವೇದಿತಾ ಗೌಡ ಅವರನ್ನು ಇಷ್ಟಪಡುವ ಕನ್ನಡಿಗರು ಸಾಕಷ್ಟು ಜನ ಇದ್ದು ಈಗಾಗಲೇ ಇತರ ಭಾಷೆಯ ಸಿನಿಪ್ರಿಯರು ಕೂಡ ನಿವೇದಿತಾ ಗೌಡ ಅವರಿಗೆ ಬಿಗ್ ಫ್ಯಾನ್ ಆಗಿದ್ದಾರೆ ಎನ್ನಬಹುದು.
ಸದ್ಯ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ಬಿಗ್ ಬಾಸ್ ನಲ್ಲಿ ಭೇಟಿಯಾದವರು.  ಸ್ನೇಹಕ್ಕೆ ತಿರುಗಿ ತದನಂತರ ಪ್ರೇಮವಾಗಿ ಇದೀಗ ಇಬ್ಬರು ಕರುನಾಡಿನ ಕ್ಯೂಟ್ ಕಪಲ್ ಅನಿಸಿಕೊಂಡಿದ್ದಾರೆ. ಹೌದು ಚಂದನ್ ಶೆಟ್ಟಿ ಅತ್ಯುತ್ತಮ ರಾಪರ್. ಇದೀಗ ಸಿನಿಮಾ ಅಭಿನಯಕ್ಕೂ ಕಾಲಿಟ್ಟಿರುವ ಚಂದನ್ ಶೆಟ್ಟಿ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಿಗೆ ಹಾಡುಗಳನ್ನ ಬರೆದಿದ್ದು ಜೊತೆಗೆ ರ್ಯಾಪರ್ ಕೂಡ ಹಾಡಿದ್ದಾರೆ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಜರಾಣಿ ಶೋನಲ್ಲಿಯೂ ಕೂಡ ಭಾಗವಹಿಸಿದ್ದು ಸದ್ಯ ಇದೀಗ ನಿವೇದಿತಾ ಗೌಡ ಅವರು ಗಿಚ್ಚಿ ಗಿಲಿ ಗಿಲಿ ಎನ್ನುವ ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಅಷ್ಟೇ ಅಲ್ಲ ನಿವೇದಿತಾ ಗೌಡ ಅವರು ಜೀವನದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ ಅದೇನು ಗೊತ್ತಾ?  ಹೌದು ನಿವೇದಿತಾ ಗೌಡ ಅವರು ಮಿಸ್ಸಸ್ ಇಂಡಿಯಾ ಕಾಂಪಿಟೇಶನ್ ನಲ್ಲಿ ಕರ್ನಾಟಕದ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದು ಇದಕ್ಕಾಗಿ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿರುವ ನಿವೇದಿತಾ ಗೌಡ ಆಗಾಗ ಕೆಲವು ವಿಡಿಯೋ ತುಣುಕುಗಳನ್ನು ಇನ್ಸ್ಟಾಗ್ರಾಮ್ ನ ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.
 ಸದ್ಯ ಮಿಸಸ್ ಇಂಡಿಯಾ ಕಿರೀಟವನ್ನು ಗೆಲ್ಲುವುದಕ್ಕಾಗಿ ನಿವೇದಿತಾ ಗೌಡ ಅವರು ಸಾಕಷ್ಟು ಪ್ರಯತ್ನವನ್ನ ಮಾಡುತ್ತಿದ್ದಾರೆ. ಇನ್ನು ನಿವೇದಿತಾ ಗೌಡ ಅವರ ತಾಯಿ ತುಂಬಾನೇ ಯಂಗ್ ಆಗಿದ್ದು ಇವರ ವಯಸ್ಸು ಕೇವಲ 35 ರಿಂದ 36 ವರ್ಷ ಇರಬಹುದು. ಆದರೂ ಇನ್ನೂ ತುಂಬಾ ಚಿಕ್ಕವರಂತೆ ಕಾಣಿಸುವ ನಿವೇದಿತಾ ಗೌಡ ಅವರ ತಾಯಿ ಮಗಳಂತೆ ಅವರು ಕೂಡ ಫೇಮಸ್ ಆಗಿದ್ದು ಇನ್ನು ನೋಡುವುದಕ್ಕೆ ಮಾತ್ರವಲ್ಲದೆ ನಿಜವಾಗಿಯೂ ನಿವೇದಿತಾ ಗೌಡ ಹಾಗು ಅವರ ತಾಯಿ ಸ್ನೇಹಿತರಂತೆ ಅಕ್ಕ-ತಂಗಿಯರಂತೆ ಇರುತ್ತಾರೆ ಎಂದು ನಿವೇದಿತಾ ಗೌಡ ಒಮ್ಮೆ ಹೇಳಿಕೊಂಡಿದ್ದರು. ಸದ್ಯ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದ ಸ್ಟಾರ್ ಎನಿಸಿಕೊಂಡಿದ್ದು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್  ಮೂಲಕ ತಿಳಿಸಿ.

Join Nadunudi News WhatsApp Group