Niveditha Gowda Cooking: ಕಣ್ಣು ಮುಚ್ಚಿಕೊಂಡು ಬಿರಿಯಾನಿ ಮಾಡಿದ ನಿವೇದಿತಾ ಗೌಡ.

Actress Niveditha Gowda Making Biryani: ಕಿರುತೆರೆ ನಟಿ ನಿವೇದಿತಾ ಗೌಡ (Niveditha Gowda) ಸದಾ ಯಾವುದಾದರೊಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಚಂದನ್ ಶೆಟ್ಟಿ (Chandan Shetty) ಪತ್ನಿ ನಿವೇದಿತಾ ಗೌಡ ಅವರಿಗೆ ಅಡುಗೆ ಮಾಡಲು ಬರುವುದಿಲ್ಲ ಎಂದು ತುಂಬಾ ಜನ ಹೇಳಿದ್ದಾರಂತೆ.

ಈ ಕಾರಣದಿಂದ ನಟಿ ನಿವೇದಿತಾ ಇದೀಗ ಅಡುಗೆ ಕಲಿಯಲು ಹೊರಟಿದ್ದಾರೆ. ಅಲ್ಲದೆ ನಟಿ ನಿವೇದಿತಾ ಗೌಡ ಕಣ್ಣು ಮುಚ್ಚಿಕೊಂಡು ಬಿರಿಯಾನಿ ಮಾಡಿದ್ದಾರೆ. ಇದೀಗ ಈ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದೆ.

Nivedita Gowda shared a video of making biryani
Image credit: instagram

ನಿವೇದಿತಾ ಗೌಡ ಮಾಡಿದ ಬಿರಿಯಾನಿಗೆ ಕಣ್ ಕಟ್ ಬಿರಿಯಾನಿ ಎಂದು ಹೆಸರಿಟ್ಟ ಚಂದನ್ ಶೆಟ್ಟಿ
ನಟಿ ನಿವೇದಿತಾ ಗೌಡ ಯೂಟ್ಯೂಬ್ ಚಾನಲ್ ನೋಡುತ್ತಾ ಅಡುಗೆ ಮಾಡಲು ಕಲಿಯುತ್ತಿದ್ದಾರೆ. ನಿವೇದಿತಾ ತನ್ನ ಪತಿ ಚಂದನ್ ಶೆಟ್ಟಿ ಅವರಿಗೆ ನಾನು ಕಣ್ಣು ಕಟ್ಟಿಕೊಂಡು ಬಿರಿಯಾನಿ ಮಾಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ.

ಅದೇ ರೀತಿ ನಟಿ ನಿವೇದಿತಾ ಗೌಡ ಕಣ್ಣು ಕಟ್ಟಿಕೊಂಡು ಬಿರಿಯಾನಿ ಮಾಡಿದ್ದಾರೆ. ಬಿರಿಯಾನಿ ಟೆಸ್ಟ್ ಮಾಡಿದ ಚಂದನ್ ಶೆಟ್ಟಿ ಸೂಪರ್ ಆಗಿದೆ, ಆದರೆ ಉಪ್ಪೇ ಹಾಕಿಲ್ಲ ಅಂದಿದ್ದಾರೆ. ಚಂದನ್ ಶೆಟ್ಟಿ ನಿವೇದಿತಾ ಮಾಡಿರುವ ಬಿರಿಯಾನಿಗೆ ಕಣ್ ಕಟ್ ಬಿರಿಯಾನಿ ಅಂತ ಹೆಸರಿಟ್ಟಿದ್ದಾರೆ.

Nivedita Gowda made Biryani without adding salt
Image credit: yooutube

ಕಣ್ಣು ಮುಚ್ಚಿಕೊಂಡು ಬಿರಿಯಾನಿ ಮಾಡಿದ ನಿವೇದಿತಾ ಗೌಡ
ನಿವೇದಿತಾ ಗೌಡ ಕಣ್ಣು ಬಿಟ್ಟುಕೊಂಡು ಅಡುಗೆ ಮಾಡಿದರೆ ಸರಿಯಾಗಲ್ಲ. ಇನ್ನು ಕಣ್ಣು ಮುಚ್ಚಿಕೊಂಡು ಈ ಅಡುಗೆ ಹೇಗೆ ಮಾಡಿದ್ದಾರೊ ಅಂತ ನಿವೇದಿತಾ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group

Nivedita Gowda made biryani with her eyes closed
Image credit: instagram

ಕಣ್ಣು ಮುಚ್ಚಿಕೊಂಡು ಬಿರಿಯಾನಿ ಮಾಡಿದ ನಿವೇದಿತಾ ಗೌಡ ಅವರ ವಿಡಿಯೋ ಈಗಾಗಲೇ ವೈರಲ್ ಆಗಿದೆ. ಕಣ್ ಕಟ್ ಬಿರಿಯಾನಿ ವಿಡಿಯೋ ಅನ್ನು ಈಗಾಗಲೇ ಸಾಕಷ್ಟು ಜನರು ವೀಕ್ಷಿಸಿ ಹಲವಾರು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group