Niveditha Gowda Putlaksmi: ದಾವಣಿ ಹಾಕಿಕೊಂಡು ಚಂದನ್ ಜೊತೆ ಬೈಕ್ ಸವಾರಿ ಮಾಡಿದ ನಿವೇದಿತಾ ಗೌಡ.

Niveditha Gowda Putlaksmi: ಬಿಗ್ ಬಾಸ್ ಸೀಸನ್ 5 (Bigg Boss Session 5) ನ ವಿನ್ನರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇದೀಗ ಬಾರಿ ಸುದ್ದಿಯಲ್ಲಿದ್ದಾರೆ.

ಚಂದನ್ ಹಾಗು ನಿವೇದಿತಾ ಜೋಡಿ ಚಿತ್ರರಂಗದಲ್ಲಿ ಕ್ಯೂಟ್ ಜೋಡಿ ಆಗಿ ಮಿಂಚಿದ್ದಾರೆ. ಇನ್ನು ಚಂದನ್ ಶೆಟ್ಟಿ ಅನೇಕ ಹಿಟ್ ಸಾಂಗ್ ಗಳನ್ನೂ ಮಾಡುವ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಇದೀಗ ತನ್ನ ಪತ್ನಿ ನಿವೇಧಿತಾ ಜೊತೆ ಹೊಸ ಪುಟ್ಟಲಕ್ಷ್ಮಿ ಎನ್ನುವ ಶಾರ್ಟ್ ಮೂವಿ (Putlakshmi Short Movie) ಯಲ್ಲಿ ನಟಿಸಲಿದ್ದಾರೆ.

Nivedita Gowda wore a scarf and rode a bike with Chandan.
Image Credit: timesofindia.indiatimes

ಚಂದನ್ ನಿವೇದಿತಾ ಪುಟ್ಟಲಕ್ಷ್ಮಿ ಸಾಂಗ್
ಇದೀಗ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪುಟ್ಟಲಕ್ಷ್ಮಿ ಎನ್ನುವ ಸಾಂಗ್ ನಲ್ಲಿ ನಿವೇದಿತಾ ಗೌಡ ಹಳ್ಳಿ ಹುಡುಗಿ ಗೆಟ್ ಅಪ್ ನಲ್ಲಿ ಮಿಂಚಲಿದ್ದಾರೆ. ಇನ್ನು ನಿವೇದಿತಾ ಗೌಡ ಲಂಗ ದಾವಣಿ ಅಲ್ಲಿ ಸಕ್ಕತ್ ಆಗಿ ಮಿಂಚಿದ್ದಾರೆ. ನಿವೇದಿತಾ ಗೌಡ ಅಭಿಮಾನಿಗಳು ಇವರ ಹೊಸ ಲುಕ್ ಅನ್ನು ನೋಡಿ ಫಿದಾ ಆಗಿದ್ದಾರೆ.

ಪುಟ್ಟಲಕ್ಷ್ಮಿ ಹಾಡನ್ನು ಚಂದನ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚಂದನ್ ಹಾಗು ನಿವೇದಿತಾ ಗೌಡ ಹಂಚಿಕೊಂಡಿದ್ದಾರೆ.

Join Nadunudi News WhatsApp Group

ಲಂಗ ದಾವಣಿಯಲ್ಲಿ ಮಿಂಚಿದ ನಿವೇದಿತಾ ಗೌಡ
ನಿವೇದಿತಾಗೌಡ ಮರೂನ್ ಮತ್ತು ಬ್ಲೂ ಕಲರ್ ದಾವಣಿಯಲ್ಲಿ ಪಕ್ಕ ಹಳ್ಳಿ ಹುಡುಗಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಿವೇದಿತಾ ಗೌಡ ಹೊಸ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿವೇದಿತಾ ಗೌಡ ಯಾವಾಗಲು ಮಾಡೆರ್ನ್ ಡ್ರೆಸ್ ನಲ್ಲಿ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ನಿವೇದಿತಾ ಗೌಡ ಅವರ ಹೊಸ ಲುಕ್ ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

ಚಂದನ್ ಜೊತೆ ಬೈಕ್ ನಲ್ಲಿ ಸವಾರಿ ಮಾಡಿದ ನೀವಿ
ಇನ್ನು ಪುಟ್ಟಲಕ್ಷ್ಮಿ ಹಾಡಿನಲ್ಲಿ ಚಂದನ್ ಹಳ್ಳಿ ಸೊಗಡಿನಲ್ಲಿ ನಿವೇದಿತಾರನ್ನು ಪುಟ್ಟಲಕ್ಷ್ಮಿ ಎಂದು ಕರೆದು ನೀವಿ ಹೊರಗೆಬಂದು ಚಂದನ್ ಅವರ ಬೈಕ್ ನಲ್ಲಿ ಸವಾರಿ ಮಾಡುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಚಂದನ್ ಶೆಟ್ಟಿ (Chandan Shetty) ಇದೀಗ ತಮ್ಮ ಹೊಸ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಚಂದನ್ ಸಿನಿಮಾರಂಗದಲ್ಲೂ ಸಹ ಮಿಂಚುತ್ತಿದ್ದಾರೆ. ಚಂದನ್ ಶೆಟ್ಟಿ ಗಾಯಕನಾಗಿ, ನಿರ್ದೇಶಕನಾಗಿ ಜನರ ಮನಸ್ಸು ಗೆದ್ದಿದ್ದಾರೆ. ಇನ್ನು ಚಂದನ್ ಶೆಟ್ಟಿ ಸೂತ್ರಧಾರಿ ಚಿತ್ರದಲ್ಲಿ ನಟಿಸಲಿದ್ದಾರೆ.

ಚಂದನ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ಸೂತ್ರಧಾರಿ (Sootradari Movie) ಚಿತ್ರದ ಡ್ಯಾಶ್ ಸಾಂಗ್ ಬಿಡುಗಡೆಯಾಗಿದೆ. ಹೊಸ ವರ್ಷದ ಸಂಭ್ರಮಕ್ಕೆ ಈ ಸಾಂಗ್ ಅದ್ಬುತ ಗೀತೆಯಾಗಲಿದೆ. ಸೂತ್ರಧಾರಿ ಸಿನಿಮಾದ ಡ್ಯಾಶ್ ಹಾಡು ಇಂದು ಬಿಡುಗಡೆಯಾಗಿದೆ.

Actress Nivedita Gowda and Chandan Shetty shine in the short film
Image Credit: latestly

Join Nadunudi News WhatsApp Group