Niveditha Gowda Dance: ಟ್ರೆಂಡಿಂಗ್ ಸಾಂಗ್ ಗೆ ಹೆಜ್ಜೆ ಹಾಕಿದ ನಿವೇದಿತಾ ಗೌಡ, ವಿಡಿಯೋ ವೈರಲ್.
Nivedita Gowda Instagram Vidoes: ನಟಿ ನಿವೇದಿತಾ ಗೌಡ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಈ ನಡುವೆ ನಿವೇದಿತಾ ಗೌಡ (Niveditha Gowda) ತಮ್ಮ ಹೊಸ ಫೋಟೋಶೂಟ್ ನ ಮೂಳಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.
ಇದೀಗ ನಟಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಿವಿ ಮಾಡಿದ ಡಾನ್ಸ್ ಇದೀಗ ನೆಟ್ಟಿಗರನ್ನು ಮೋಡಿ ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರ ವಿಡಿಯೋ ಬಾರಿ ವೈರಲ್ ಆಗುತ್ತಿದೆ.
ಟ್ರೆಂಡ್ ಸಾಂಗ್ ಗೆ ಹೆಜ್ಜೆ ಹಾಕಿದ ನಟಿ ನಿವಿ
ನಿವೇದಿತಾ ಗೌಡ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿ ಗಿಲಿ (Gicchi Gili Gili Season 2) ಹಾಸ್ಯಮಯ ರಿಯಾಲಿಟಿ ಶೋ ನಲ್ಲಿ ಸಕ್ರಿಯರಾಗಿದ್ದಾರೆ. ಈ ನಡುವೆ ನಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಹೊಸ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ.
View this post on Instagram
ಇದೀಗ ನಿವಿ ಇನ್ಸ್ಟಾಗ್ರಾಮ್ ನಲ್ಲಿ ಟ್ರೆಂಡಿಂಗ್ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಡಾನ್ಸ್ ಮಾಡಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಬ್ರೌನ್ ಮಿಕ್ಸ್ ವೇಟ್ ಡಿಸೈನ್ ಇರುವಂತಹ ಸ್ಕರ್ಟ್ ಧರಿಸಿ ಅದಕ್ಕೆ ಬ್ಲಾಕ್ ಕಲರ್ ಶರ್ಟ್ ನಲ್ಲಿ ನಿವಿ ಟ್ರೆಂಡಿಂಗ್ ಸಾಂಗ್ ಗೆ ಡಾನ್ಸ್ ಮಾಡಿದ್ದಾರೆ. ನಿವಿಯ ಡಾನ್ಸ್ ವಿಡಿಯೋಗೆ ನೆಟ್ಟಿಗರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನು ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ನಿವೇದಿತಾ ವಿಭಿನ್ನ ರೀತಿಯ ಸ್ಕಿಟ್ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 5 ನಲ್ಲಿ ಸ್ಪರ್ದಿಸುವ ಮೂಲಕ ನಿವಿ ಕನ್ನಡಿಗರ ಮನ ಗೆದ್ದಿದ್ದರು. ನಂತರ ಗಿಚ್ಚಿ ಗಿಲಿ ಗಿಲಿ ಸೀಸನ್ 1 ರಲ್ಲಿ ಕೂಸ ಸ್ಪರ್ದಿಸಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದೀಗ ಮತ್ತೆ ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ಸ್ಪರ್ದಿಸುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.