Nokia Clasic: ಜಿಯೋಗೆ ಠಕ್ಕರ್ ಕೊಡಲು 999 ರೂ ಗೆ ಹೊಸ ನೋಕಿಯಾ ಮೊಬೈಲ್ ಲಾಂಚ್, UPI ಪೇಮೆಂಟ್ ಕೂಡ ಮಾಡಬಹುದು.
UPI ಫೀಚರ್ ಹೊಂದಿರುವ ಹೊಸ Nokia 105 Classic ಫೋನ್ ಬಿಡುಗಡೆ.
Nokia 105 Classic Phone: ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚು ಸ್ಮಾರ್ಟ್ ಫೋನ್ ಗಳು ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿವೆ. ಇನ್ನು ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಹೆಚ್ಚು ಬಿಡುಗಡೆಯಾಗುತ್ತಿದ್ದರು ಕೂಡ Keypad Phone ಗಳ ಮೇಲಿನ ಬೇಡಿಕೆ ಕಡಿಮೆಯಾಗುತ್ತಿಲ್ಲ ಎನ್ನಬಹುದು.
ಹೆಚ್ಚಿನ ಜನರು ಸ್ಮಾರ್ಟ್ ಫೋನ್ ಗಳ ಜೊತೆಗೆ ಕೀ ಪ್ಯಾಡ್ ಫೋನ್ ಗಳನ್ನೂ ಸಹ ಬಳಸುತ್ತಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ Jio ಫೋನ್ ಹೆಚ್ಚು ಜನಪ್ರಿಯವಾಗಿದೆ ಎನ್ನಬಹುದು. ಸದ್ಯ ಜಿಒ ಫೀಚರ್ ಫೋನ್ ಗೆ ನೇರ ಸ್ಪರ್ಧೆ ನೀಡಲು ಇದೀಗ NOKIA ಭರ್ಜರಿ ವೈಶಿಷ್ಟ್ಯದೊಂದಿಗೆ ಹೊಸ ಫೀಚರ್ ಫೋನ್ ಅನ್ನು ಪರಿಚಯಿಸಿದೆ. ಈ ನೂತನ ನೌಕಿಯ ಫೀಚರ್ ಫೋನ್ ಮಾರುಕಟ್ಟೆ ಬೆಲೆ ಎಷ್ಟು? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
UPI ಫೀಚರ್ ಹೊಂದಿರುವ ಹೊಸ Nokia 105 Classic ಫೋನ್ ಬಿಡುಗಡೆ
ಇನ್ನು ಮಾರುಕಟ್ಟೆಯಲ್ಲಿ ಈಗಾಗಲೇ Nokia ಬ್ರಾಂಡ್ ಫೋನ್ ಗಳು ಸಾಕಷ್ಟಿವೆ. ಹೊಸ ಹೊಸ ಮಾದರಿಯ ಫೋನ್ ಗಳನ್ನೂ ನೋಕಿಯಾ ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದೆ. Nokia ಕೀಪ್ಯಾಡ್ ಫೋನ್ ಗಳಿಗೆ ಹೆಸರುವಾಸಿಯಾಗಿದೆ. ವಿಭಿನ್ನ ಮಾದರಿಯ ಸ್ಮಾರ್ಟ್ ಫೋನ್ ಗಳ ಜೊತೆ ನೌಕಿಯ ಫೀಚರ್ ಫೋನ್ ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ.
ಸದ್ಯ ದೇಶದಲ್ಲಿ UPI ಪಾವತಿ ಹೆಚ್ಚಿರುವ ಈ ಹಿನ್ನಲೆ ಕಂಪನಿಯು ತನ್ನ ಫೀಚರ್ ಫೋನ್ ನಲ್ಲಿ ಈ ವೈಶಿಷ್ಟ್ಯವನ್ನು ತರುವಲ್ಲಿ ಯಶಸ್ವಿಯಾಗಿದೆ. ಇದೀಗ ನೋಕಿಯಾ ಡಿಜಿಟಲ್ ಪಾವತಿಗೆ ಸಹಾಯವಾಗಲು Nokia 105 Classic ಫೋನ್ ನಲ್ಲಿ UPI Scan ಮತ್ತು ಪೇ ವೈಶಿಷ್ಟ್ಯವನ್ನು ನೀಡಲು ಮುಂದಾಗಿದೆ. ಈ ವೈಶಿಷ್ಟ್ಯವು ಮೊಬೈಲ್ ಬಳಕೆದಾರರಿಗೆ ಡಿಜಿಟಲ್ ವಹಿವಾಟಿನ ಸೌಲಭ್ಯವನ್ನು ಸಹ ಒದಗಿಸುತ್ತದೆ. ಫೋನ್ ನಲ್ಲಿರುವ ಬಟನ್ ಅನ್ನು ಒತ್ತುವ ಮೂಲಕ UPI ಪಾವತಿಯನ್ನು ಮಾಡಬಹುದು.
Nokia 105 Classic ಫೋನ್ ಬೆಲೆ ಮತ್ತು ವಿಶೇಷತೆ
Nokia 105 Classic ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 999 ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದನ್ನು ಆನ್ ಲೈನ್ ಮತ್ತು ಆಫ್ ಲೈನ್ ಪ್ಲಾಟ್ ಫಾರ್ಮ್ಗಳಿಂದ ಖರೀದಿಸಬಹುದು. ಈ ನೋಕಿಯಾ ಫೀಚರ್ ಫೋನ್ ಅನ್ನು ಚಾರ್ಕೋಲ್ ಮತ್ತು ಬ್ಲೂ ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ನೂತನ ಫೀಚರ್ ನ್ ಫೋನ್ 800mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವುದು ವಿಶೇಷವಾಗಿದೆ.