Nokia: 1849 ರೂಪಾಯಿಗೆ ಎರಡು ಮೊಬೈಲ್ ಲಾಂಚ್ ಮಾಡಿದ ನೋಕಿಯಾ, ಫೀಚರ್ ಕಂಡು ಮೊಬೈಲ್ ಗೆ ಜನರು ಫಿದಾ.
ಸಂಗೀತ ಪ್ರಿಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ನೋಕಿಯಾದ ಹೊಸ ಫೋನ್ ಬಿಡುಗಡೆ.
Nokia 130 Music Phone: ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡುತ್ತಿವೆ. ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಪರಿಚಯವಾಗುತ್ತಿದ್ದಂತೆ ಹೆಚ್ಚಿನ ಬೇಡಿಕೆ ಪಡೆಯುತ್ತದೆ. ಗ್ರಾಹಕರು ಹೆಚ್ಚು ಸ್ಟೋರೇಜ್ ನೀಡುವ ಹಾಗು ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್ ಫೋನ್ ಖರೀದಿಯತ್ತ ಗಮನ ಹರಿಸುತ್ತಾರೆ.
ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚು ಸ್ಮಾರ್ಟ್ ಫೋನ್ ಗಳು ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿವೆ. ಇನ್ನು ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಹೆಚ್ಚು ಬಿಡುಗಡೆಯಾಗುತ್ತಿದ್ದರು ಕೂಡ ಕೀಪ್ಯಾಡ್ ಫೋನ್ ಗಳ ಮೇಲಿನ ಬೇಡಿಕೆ ಕಡಿಮೆಯಾಗುತ್ತಿಲ್ಲ. ಹೀಗಾಗಿ ನೋಕಿಯಾ (Nokia) ಹೊಸ ಫೀಚರ್ ಫೋನ್ ಅನ್ನು ಬಿಡುಗಡೆ ಮಾಡಿದೆ.
ನೋಕಿಯಾ ಕಂಪನಿಯ ಹೊಸ ಫೋನ್ ಬಿಡುಗಡೆ
ಇನ್ನು ಮಾರುಕಟ್ಟೆಯಲ್ಲಿ ಈಗಾಗಲೇ ನೌಕಿಯ ಬ್ರಾಂಡ್ ಫೋನ್ ಗಳು ಸಾಕಷ್ಟಿವೆ. ಹೊಸ ಹೊಸ ಮಾದರಿಯ ಫೋನ್ ಗಳನ್ನೂ ನೋಕಿಯಾ ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು ನೋಕಿಯಾ ಕಂಪನಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಸೆಲ್ ಕಾಣುತ್ತಿದೆ. ವಿಭಿನ್ನ ಮಾದರಿಯ ಸ್ಮಾರ್ಟ್ ಫೋನ್ ಗಳ ಜೊತೆ ನೌಕಿಯ ಫೀಚರ್ ಫೋನ್ ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ.
ಎರಡು ಮಾದರಿಯ ಹೊಸ ಫೋನ್ ಲಾಂಚ್
ಇದೀಗ ನೋಕಿಯಾ ತನ್ನ ಹೊಸ ಎರಡು ಮಾದರಿಯ ಫೋನ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಫೋನ್ ಗಳು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ. ನೌಕಿಯ ಇದೀಗ ಎರಡು ಹೊಸ ಮಾದರಿಯ ಫೋನ್ ಅನ್ನು ಬಿಡುಗಡೆ ಮಾಡಿದೆ. ನೋಕಿಯಾ 130 ಮ್ಯೂಸಿಕ್ ಮತ್ತು ನೋಕಿಯಾ 150 ಎಂಬ ಎರಡು ಮಾದರಿಯ ಹೊಸ ಫೋನ್ ಲಾಂಚ್ ಆಗಲಿದೆ. ನೋಕಿಯಾ 130 ಮ್ಯೂಸಿಕ್ ಫೋನ್ ಹೆಸರಿಗೆ ಅನುಗುಣವಾಗಿ ಸಂಗೀತ ಪ್ರಿಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ನೋಕಿಯಾ 130 ಮ್ಯೂಸಿಕ್ ಫೋನ್ ಫೀಚರ್
ಈ ನೋಕಿಯಾ 130 ಮ್ಯೂಸಿಕ್ ಫೋನ್ 2 .4 ಇಂಚಿನ HD ಡಿಸ್ ಪ್ಲೇ ಹೊಂದಿದ್ದು, ಪವರ್ ಫುಲ್ ಲೌಡ್ ಸ್ಪೀಕರ್ ಒಳಗೊಂಡ MP3 ಪ್ಲೇಯರ್ ಅನ್ನು ಒಳಗೊಂಡಿದೆ. 32GB ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಹೆಚ್ಚಿನ ಹಾಡುಗಳನ್ನು ಸ್ಟೋರೇಜ್ ಮಾಡಬಹುದಾಗಿದೆ.
ಇನ್ನು ವಿಶೇಷವೆಂದರೆ ಇದರಲ್ಲಿ ವೈರ್ ಲೆಸ್ FM ರೇಡಿಯೋ ಫೀಚರ್ ಅನ್ನು ಅಳವಡಿಸಲಾಗಿದೆ. ಇನ್ನು ಈ ನೌಕಿಯ 130 ಮ್ಯೂಸಿಕ್ 1450 mAh ಬ್ಯಾಟರಿ ಪ್ಯಾಕ್ ಸಾಮರ್ಥ್ಯವನ್ನು ಹೊಂದಿದೆ. ನೋಕಿಯಾ 130 ಮ್ಯೂಸಿಕ್ ಫೋನ್ ಡಾರ್ಕ್ ಬ್ಲೂ ಮತ್ತು ಪರ್ಪಲ್ ಬಣ್ಣದ ಆಯ್ಕೆ ಹೊಂದಿದ್ದು ಈ ಆಯ್ಕೆಗೆ 1849 ರೂ. ನಿಗದಿಪಡಿಸಲಾಗಿದೆ. ಇನ್ನು ಲೈಟ್ ಗೋಲ್ಡ್ ಬಣ್ಣದ ಆಯ್ಕೆಗೆ 1949 ರೂ. ನಿಗದಿಪಡಿಸಲಾಗಿದೆ.
ನೋಕಿಯಾ 150 ಫೋನ್ ಫೀಚರ್
ಈ ನೋಕಿಯಾ 150 ಫೋನ್ 2 .4 ಇಂಚಿನ HD ಡಿಸ್ ಪ್ಲೇ ಹೊಂದಿದ್ದು, 1450 mAh ಬ್ಯಾಟರಿ ಪ್ಯಾಕ್ ಸಾಮರ್ಥ್ಯವನ್ನು ಹೊಂದಿದೆ. 32GB ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಹೆಚ್ಚಿನ ಹಾಡುಗಳನ್ನು ಸ್ಟೋರೇಜ್ ಮಾಡಬಹುದಾಗಿದೆ. ಈ ಫೋನ್ 20 ಗಂಟೆಗಳ ಟಾಕ್ ಟೈಮ್ ಮತ್ತು 34 ದಿನಗಳ ಬ್ಯಾಟರಿ ಪಾಕ್ ಅನ್ನು ಹೊಂದಿದೆ. ಇನ್ನು ನೋಕಿಯಾ 150 ಫೀಚರ್ ಫೋನ್ ಗೆ 2699 ರೂ. ನಿಗದಿಪಡಿಸಲಾಗಿದೆ.