Nokia 2660: ಈ ಮೊಬೈಲ್ ನಲ್ಲಿ UPI ಕೂಡ ಮಾಡಬಹುದು, ಅಗ್ಗದ ಬೆಲೆಗೆ ಆಕರ್ಷಕ ನೋಕಿಯಾ ಫ್ಲಿಪ್ ಫೋನ್ ಲಾಂಚ್.
ವಿಭಿನ್ನ ವಿನ್ಯಾಸದ Keypad Phone ಪರಿಚಯಿಸಿದ Nokia.
Nokia 2660 Flip Phone: ಸದ್ಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸ ಮಾದರಿಯ Smartphone ಗಳು ಲಗ್ಗೆ ಇಡುತ್ತಿವೆ. ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಪರಿಚಯವಾಗುತ್ತಿದ್ದಂತೆ ಹೆಚ್ಚಿನ ಬೇಡಿಕೆ ಪಡೆಯುತ್ತದೆ ಎನ್ನಬಹುದು. ಗ್ರಾಹಕರು ಹೆಚ್ಚು ಸ್ಟೋರೇಜ್ ನೀಡುವ ಹಾಗು ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್ ಫೋನ್ ಖರೀದಿಯತ್ತ ಗಮನ ಹರಿಸುತ್ತಾರೆ.
ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚು ಸ್ಮಾರ್ಟ್ ಫೋನ್ ಗಳು ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿವೆ. ಇನ್ನು ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಹೆಚ್ಚು ಬಿಡುಗಡೆಯಾಗುತ್ತಿದ್ದರು ಕೂಡ Keypad Phone ಗಳ ಮೇಲಿನ ಬೇಡಿಕೆ ಕಡಿಮೆಯಾಗುತ್ತಿಲ್ಲ ಎನ್ನಬಹುದು ಹೀಗಾಗಿ ದೇಶದ ಜನಪ್ರಿಯ ಬ್ರಾಂಡ್ ಆಗಿರುವ Nikia ಆಗಾಗ ಹೊಸ ಹೊಸ Keypad ಫೋನ್ ಅನ್ನು ಬಿಡುಗಡೆ ಮಾಡುತ್ತಾ ಇರುತ್ತದೆ.
ವಿಭಿನ್ನ ವಿನ್ಯಾಸದ Keypad Phone ಪರಿಚಯಿಸಿದ Nokia
ಇನ್ನು ಮಾರುಕಟ್ಟೆಯಲ್ಲಿ ಈಗಾಗಲೇ Nokia ಬ್ರಾಂಡ್ ಫೋನ್ ಗಳು ಸಾಕಷ್ಟಿವೆ. ಹೊಸ ಹೊಸ ಮಾದರಿಯ ಫೋನ್ ಗಳನ್ನೂ ನೋಕಿಯಾ ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದೆ. Nokia ಕೀಪ್ಯಾಡ್ ಫೋನ್ ಗಳಿಗೆ ಹೆಸರುವಾಸಿಯಾಗಿದೆ. ವಿಭಿನ್ನ ಮಾದರಿಯ ಸ್ಮಾರ್ಟ್ ಫೋನ್ ಗಳ ಜೊತೆ ನೌಕಿಯ ಫೀಚರ್ ಫೋನ್ ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ. Nokia ಕೀಪ್ಯಾಡ್ ಫೋನ್ ಗಳಿಗೆ ಹೆಸರುವಾಸಿಯಾಗಿದೆ.
UPI ಪಾವತಿ ವೈಶಿಷ್ಟ್ಯವಿರುವ ಹೊಸ ಫ್ಲಿಪ್ ಫೋನ್ ಬಿಡುಗಡೆ
ಸದ್ಯ ದೇಶದಲ್ಲಿ UPI ಪಾವತಿ ಹೆಚ್ಚುತ್ತಿರುವ ಹಿನ್ನಲೆ ಇದೀಗ ನೋಕಿಯಾ ಡಿಜಿಟಲ್ ಪಾವತಿಗೆ ಸಹಾಯವಾಗಲು ನೋಕಿಯಾ 2660 ಫ್ಲಿಪ್ ಫೋನ್ ನಲ್ಲಿ UPI Scan ಮತ್ತು ಪೇ ವೈಶಿಷ್ಟ್ಯವನ್ನು ನೀಡಲು ಮುಂದಾಗಿದೆ. ಈ ವೈಶಿಷ್ಟ್ಯವು ಮೊಬೈಲ್ ಬಳಕೆದಾರರಿಗೆ ಡಿಜಿಟಲ್ ವಹಿವಾಟಿನ ಸೌಲಭ್ಯವನ್ನು ಸಹ ಒದಗಿಸುತ್ತದೆ. ಫೋನ್ ನಲ್ಲಿರುವ ಬಟನ್ ಅನ್ನು ಒತ್ತುವ ಮೂಲಕ UPI ಪಾವತಿಯನ್ನು ಮಾಡಬಹುದು.
Nokia 2660 Flip Price
Nokia 2660 ಫ್ಲಿಪ್ ಫೋನ್ ಭಾರತದಲ್ಲಿ 4,499 ರೂ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ, ಇದನ್ನು ಆನ್ ಲೈನ್ ಮತ್ತು ಆಫ್ ಲೈನ್ ಪ್ಲಾಟ್ ಫಾರ್ಮ್‌ಗಳಿಂದ ಖರೀದಿಸಬಹುದು. ಈ ನೋಕಿಯಾ ಫೀಚರ್ ಫೋನ್ ಅನ್ನು ಪಾಪ್ ಪಿಂಕ್ ಮತ್ತು ಲಶ್ ಗ್ರೀನ್ ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಈ ಫೋನ್ 2.8 ಇಂಚಿನ QVGA ಪ್ರಾಥಮಿಕ ಡಿಸ್ಪ್ಲೇಯನ್ನು 240 x 320 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದ್ದು, 1.77 ಇಂಚಿನ QQVGA ಸೆಕೆಂಡರಿ ಸ್ಕ್ರೀನ್ ಅನ್ನು ಕಾಣಬಹುದಾಗಿದೆ. ಇನ್ನು 48MB RAM ನೊಂದಿಗೆ 128MB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ.