Nokia: 34 ದಿನ ಬ್ಯಾಟರಿ ಬಾಳಿಕೆ ಬರುವ ನೋಕಿಯಾದ ಹೊಸ ಫೋನ್ ಬಿಡುಗಡೆ, ಅತ್ಯಂತ ಅಗ್ಗದ ಬೆಲೆಗೆ
34 ದಿನ ಬ್ಯಾಟರಿ ಬಾಳಿಕೆ ಬರುವ ಮೊಬೈಲ್ ಬಿಡುಗಡೆ.
Nokia Phones: ಒಂದು ಕಾಲದಲ್ಲಿ ಕೀಪ್ಯಾಡ್ ಫೋನುಗಳ ರಾಜನಾಗಿ ಮಿಂಚಿದ್ದ ನೋಕಿಯಾ ಸಂಸ್ಥೆ(Nokia Phones) ಈಗಲೂ ಕೂಡ ಸ್ಮಾರ್ಟ್ ಫೋನ್ ಗಳ ವಿಚಾರದಲ್ಲಿ ಕೂಡ ತನ್ನ ಗ್ರಾಹಕರನ್ನು ಮತ್ತೆ ವಾಪಸ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದೆ.
ಇವತ್ತಿನ ಆರ್ಟಿಕಲ್ ನಲ್ಲಿ ನಾವು ಮಾತನಾಡಲು ಹೊರಟಿರೋದು ನೋಕಿಯಾ ಸಂಸ್ಥೆ ಸೈಲೆಂಟ್ ಆಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವಂತಹ ಎರಡು ಫೋನ್ ಗಳ ಬಗ್ಗೆ. HMD GLOBAL ಹೇಳಿರುವ ಪ್ರಕಾರ ನೋಕಿಯಾ Nokia 130Music ಹಾಗೂ Nokia 150 ಫೋನ್ಗಳನ್ನು ಅಧಿಕೃತವಾಗಿ ಲಾಂಚ್ ಮಾಡಿದೆ.
Nokia 130 ಬಗ್ಗೆ ಮಾತನಾಡುವುದಾದರೆ ಫೋನು ಮ್ಯೂಸಿಕ್ ವಿಚಾರಕ್ಕೆ ಬಂದ್ರೆ ಪರ್ಫೆಕ್ಟ್ ಆಯ್ಕೆ ಆಗಿದೆ. MP3 Player ಅನ್ನು ನೀವು ಇದರ ಜೊತೆಗೆ ಕಾಣಬಹುದಾಗಿದೆ. MicroSD ಮೂಲಕ ನಿಮಗೆ ಇಷ್ಟ ಆಗಿರುವಂತಹ ಹಾಡುಗಳನ್ನು ಹಾಕಿಕೊಂಡು ಈ ಮೊಬೈಲ್ ನಲ್ಲಿ ಕೇಳಬಹುದಾಗಿದೆ. ರೇಡಿಯೋ ವಯರ್ ಹಾಗೂ ವಯರ್ಲೆಸ್ ಎರಡು ವಿಧಾನಗಳನ್ನು ಕೂಡ ನಿಮಗೆ ಸಿಗುವಂತೆ ಮಾಡುತ್ತದೆ. ಈ ಫೋನ್ ಜೊತೆಗೆ ನಿಮಗೆ 2.4 ಇಂಚಿನ ಡಿಸ್ಪ್ಲೇ ಕೂಡ ಸಿಗುತ್ತದೆ.
GSM 900/1800 ನೆಟ್ವರ್ಕ್ ಕೂಡ ಇದರಲ್ಲಿದೆ. 32gb ವರೆಗೂ ಕೂಡ ಮೆಮೊರಿ ಕಾರ್ಡ್ ಇದರಲ್ಲಿ ಸಪೋರ್ಟ್ ಆಗುತ್ತದೆ. 1450Mah ಬ್ಯಾಟರಿ ಬ್ಯಾಕಪ್ ಅನ್ನು ಕೂಡ ಈ ಫೋನ್ ಹೊಂದಿದೆ. ಒಂದು ಸಲ ಚಾರ್ಜ್ ಮಾಡಿದರೆ ಸಾಕು 35 ದಿನಗಳ ಕಾಲ ಇದು ನಿಮಗೆ ಬ್ಯಾಟರಿ ಸ್ಟ್ಯಾಂಡ್ ಬೈ ಅನ್ನು ನೀಡುತ್ತದೆ. 2000 ಕಾಂಟಾಕ್ಟ್ ಗಳನ್ನು ಹಾಗೂ 500 ಮೆಸೇಜ್ ಗಳನ್ನು ಸ್ಟೋರೇಜ್ ಮಾಡುವಂತಹ ಶಕ್ತಿ ಇದರಲ್ಲಿದೆ.
ಕೀಪ್ಯಾಡ್ ಮೊಬೈಲ್ ಅನ್ನು ಬಳಸುವವರಿಗೆ ಖಂಡಿತವಾಗಿ ಇದು ಅತ್ಯಂತ ಉತ್ತಮವಾದ ಆಯ್ಕೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಮತ್ತೆ ಜನರಲ್ಲಿ ಕೀಪ್ಯಾಡ್ ಫೋನ್ ಅನ್ನು ಬಳಸುವಂತಹ ಕ್ರೇಜ್ ಹೆಚ್ಚಾಗಿದ್ದು ಅದಕ್ಕೆ ತಕ್ಕನಾಗಿ ನೋಕಿಯಾ ಸಂಸ್ಥೆ ಈ ಫೋನ್ ಅನ್ನು ಡಿಸೈನ್ ಮಾಡಿದೆ ಎಂದು ಹೇಳಬಹುದಾಗಿದೆ. ಇನ್ನು ಈ ಫೋನಿನ ಬೆಲೆ 1849 ರೂಪಾಯಿಯಾಗಿದೆ.
Nokia 150 ಕೀಪ್ಯಾಡ್ ಫೋನ್ ಗಳಲ್ಲಿ ಇದು ಪ್ರೀಮಿಯಂ ಸ್ಟೈಲಿಶ್ ಲುಕ್ ಅನ್ನು ಹೊಂದಿರುವಂತಹ ಫೋನ್ ಆಗಿದೆ. 1450Mah ಬ್ಯಾಟರಿ ಬ್ಯಾಕಪ್ ಅನ್ನು ಇದು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ ನೀವು 20 ಗಂಟೆಗಳ ಕಾಲ ಅವಿರತವಾಗಿ ಟಾಪ್ ಟೈಮ್ ಗಾಗಿ ಬಳಸಬಹುದಾಗಿದೆ. MP3 PLAYER 30 ಗಂಟೆಗಳ ಕಾಲ ನಿಮಗೆ ನಾನ್ ಸ್ಟಾಪ್ ಮ್ಯೂಸಿಕ್ ಅನ್ನು ನೀಡುವಂತಹ ಸಾಮರ್ಥ್ಯವನ್ನು ಕೂಡ ಹೊಂದಿವೆ. ಈ ಮೊಬೈಲ್ ನಲ್ಲಿ ಕೂಡ 2.4 ಇಂಚಿನ ಡಿಸ್ಪ್ಲೇ ಯನ್ನು ಕಾಣಬಹುದಾಗಿದೆ.
ಇದರ ಬ್ಯಾಟರಿ ಬ್ಯಾಕಪ್ ನಿಮಗೆ 34 ದಿನಗಳ ಸ್ಟ್ಯಾಂಡ್ ಬೈ ನೀಡುತ್ತದೆ. ಪವರ್ಫುಲ್ ಲೌಡ್ ಸ್ಪೀಕರ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ.
ಇನ್ನು ನಿಮಗೆ Nokia 150 2699 ರೂಪಾಯಿಗಳ ಬೆಲೆಯಲ್ಲಿ ದೊರೆಯುತ್ತದೆ. ದೀರ್ಘಕಾಲಿಕ ಬಾಳಿಕೆಯ ವಿಚಾರದಲ್ಲಿ ಈ ಎರಡು ಫೋನ್ ಗಳು ಕೂಡ ಖಂಡಿತವಾಗಿ ನಿಮಗೆ ಸಾಕಷ್ಟು ಸಮಯಗಳ ಕಾಲ ಸುರಕ್ಷಿತವಾಗಿ ಫೀಚರ್ ಗಳ ಲಾಭವನ್ನು ನಿಮಗೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಹೀಗಾಗಿ ನೀವು ರಫ್ ಬಳಕೆಗಾಗಿ ಈ ಫೋನ್ ಗಳನ್ನು ಮುಕ್ತವಾಗಿ ಬಳಕೆ ಮಾಡಬಹುದಾಗಿದೆ.