Ads By Google

Nokia C22: ಮಾರುಕಟ್ಟೆಗೆ ಬಿಡುಗಡೆ ಆಗಿದೆ ಅತೀ ಕಡಿಮೆ ಬೆಲೆಯ Nokia C22, ಜನರ ನೆಚ್ಚಿನ ಮೊಬೈಲ್.

Nokia C22 Smartphone

Image Source: Cashify

Ads By Google

Nokia C22 Smartphone: ನೋಕಿಯಾ (Nokia) ಕಂಪನಿಯ ಸ್ಮಾರ್ಟ್ ಫೋನುಗಳಿಗೆ ಭಾರತದಲ್ಲಿ ಹಿಂದಿನ ರೀತಿ ದೊಡ್ಡ ಮಟ್ಟದ ಬೇಡಿಕೆ ಇಲ್ಲ. ಒಂದು ಕಾಲದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಆಳುತ್ತಿದ್ದ ನೋಕಿಯಾ ಕಂಪನಿಗೆ ಈಗ ಹೆಸರಿಲ್ಲದಂತಾಗಿದೆ.

ಶಾವೊಮಿ, ಸ್ಯಾಮ್ ಸಂಗ್ ರಿಯಲ್ ಮೀ, ವಿವೊ ಬ್ರಾಂಡ್ ಗಳು ಬಂದ ಮೇಲೆ ನೋಕಿಯಾ ಮೊಬೈಲ್ ಗಾಲ ಬೇಡಿಕೆ ಕುಸಿಯುತ್ತಾ ಬಂದಿದೆ. ಆದರೂ ಸಹ ನೋಕಿಯಾ ಆಗಾಗ ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿರುತ್ತದೆ.

Image Source: India.com

ನೋಕಿಯಾ C22 ಸ್ಮಾರ್ಟ್ ಫೋನ್ ಬೆಲೆ
ಇದೀಗ ಭಾರತದಲ್ಲಿ ಬಜೆಟ್ ಬೆಲೆಗೆ ನೋಕಿಯಾ ಕಂಪನಿ ಹೊಸ ನೋಕಿಯಾ C22 ಫೋನನ್ನು ಅನಾವರಣ ಮಾಡಿದೆ. ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ನೋಕಿಯಾ c22 ಸ್ಮಾರ್ಟ್ ಫೋನ್ ರಿಲೀಸ್ ಆಗಿದೆ. ಇದರ 2GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 7,999 ರೂಪಾಯಿ ನಿಗದಿ ಮಾಡಲಾಗಿದೆ.

ಹಾಗೆಯೇ 4GB RAM ಮತ್ತು 64GB ಆಯ್ಕೆಗೆ 8499 ರೂಪಾಯಿ ಇದೆ. ಈ ಫೋನ್ ನೋಕಿಯಾ ಕಂಪನಿಯ ಅಧಿಕೃತ ವೆಬ್ ಸೈಟ್ ಸೇರಿದಂತೆ ಕೆಲವು ರಿಟೇಲ್ ಸ್ಟೋರ್ ಗಳಲ್ಲಿ ಇಂದಿನಿಂದಲೇ ಖರೀದಿಗೆ ಸಿಗುತ್ತಿದೆ.

Image Source: Gizbot

ನೋಕಿಯಾ C22 ಸ್ಮಾರ್ಟ್ ಫೋನ್ ನ ವಿಶೇಷತೆ
ನೋಕಿಯಾ C22 ಸ್ಮಾರ್ಟ್ ಫೋನ್ ಧೀರ್ಘ ಸಮಯ ಬಾಳಿಕೆ ಬರುವ 5000 mAH ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಹೀಗಾಗಿ ಪದೇ ಪದೇ ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. ಇದರೊಂದಿಗೆ 10W ಚಾರ್ಜಿನ್ಗ್ ಸೌಲಭ್ಯ ಇದೆ. ಪಿಂಗರ್ ಪ್ರಿಂಟ್ ಸೆನ್ಸಾರ್ ಆಯ್ಕೆ ಇದೆ. 5 ಜಿ ಬೆಂಬಲ ಪಡೆದುಕೊಂಡಿಲ್ಲ. 4 gLTE ವೈಫೈ, ಬ್ಲೂಟೂತ್ 3 .5 mm ಹೆಡ್ ಫೋನ್ ಜ್ಯಾಕ್ FM ರೇಡಿಯೋ ಸೇರಿದಂತೆ ಬೇಸಿಕ್ ಆಯ್ಕೆಗಳನ್ನು ನೀಡಲಾಗಿದೆ.

ನೋಕಿಯಾ C22 ಸ್ಮಾರ್ಟ್ ಫೋನ್ ನ ಕ್ಯಾಮೆರಾ ರಚನೆ
ನೋಕಿಯಾ C22 ಸ್ಮಾರ್ಟ್ ಫೋನ್ ನ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದ್ದು ಇದರಲ್ಲಿ 13 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗು 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್​ನೊಂದಿಗೆ ಹಲವಾರು ಫೀಚರ್​ಗಳನ್ನು ಹೊಂದಿದೆ.

Image Source Cashfy
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in