ಮಾವಿನ ಹಣ್ಣುಗಳನ್ನ ಯಾರು ತಾನೇ ತಿನ್ನಲ್ಲ ಹೇಳಿ. ಪ್ರತಿಯೊಬ್ಬರಿಗೂ ಕೂಡ ಮಾವಿನ ಹಣ್ಣು ಅಂದರೆ ಇಷ್ಟವೆಂದು ಹೇಳಬಹುದು. ಸಮಯವಾಗಿ ಮಾವಿನ ಹಣ್ಣು ಎಲ್ಲಾ ಪ್ರದೇಶಗಳಲ್ಲಿ ಸಿಗುವ ಕಾರಣ ಮಾವಿನ ಹಣ್ಣುಗಳನ್ನ ಎಲ್ಲರೂ ಕೂಡ ತಿನ್ನುತ್ತಾರೆ ಎಂದು ಹೇಳಬಹುದು. ಇನ್ನು ಈ ಭೂಮಿಯ ಮೇಲೆ ಸಿಗುವ ಅತೀ ಸಿಹಿ ಮತ್ತು ರುಚಿಕರ ಹಣ್ಣುಗಳಲ್ಲಿ ಮಾವಿನ ಹಣ್ಣು ಕೂಡ ಒಂದು ಎಂದು ಹೇಳಬಹುದು. ವಿವಿಧ ತಳಿಯ ಮಾವಿನ ಹಣ್ಣುಗಳು ಈ ಭೂಮಿಯ ಸಿಗಲಿದ್ದು ಒಂದೊಂದಕ್ಕೆ ಒಂದೊಂದು ಬೆಲೆ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕೆಲವರು ರೈತರು ಮಾವಿನ ತೋಟವನ್ನೇ ಮಾಡಿಕೊಂಡಿದ್ದು ವರ್ಷದಲ್ಲಿ ಲಕ್ಷ ಲಕ್ಷ ಹಣವನ್ನ ದುಡಿಯುತ್ತಿದ್ದಾರೆ ಎಂದು ಹೇಳಬಹುದು.
ಸ್ನೇಹಿತರೆ ನಿಮಗೆ ತಿಳಿದಿರುವ ದೇಶದಲ್ಲಿ ಒಂದು ಕೆಜಿ ಮಾವಿನ ಹಣ್ಣಿನ ಬೆಲೆ 100 ರಿಂದ 150 ರೂಪಾಯಿ ಆಗಿದೆ ಎಂದು ಹೇಳಬಹುದು, ಆದರೆ ಸ್ನೇಹಿತರೆ ನೀವು ನಾವು ಹೇಳುವ ಮಾವಿನ ಹಣ್ಣಿನ ಬೆಲೆಯನ್ನ ಕೇಳಿದರೆ ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ನಾವು ಹೇಳುವ ಈ ಹಣ್ಣಿನ ಬೆಲೆ ಎಷ್ಟು ಮತ್ತು ಇದರ ಬೆಲೆ ಇಷ್ಟಿರಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾವಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಮಾವಿನ ಹಣ್ಣಿನ ಸೀಸನ್ ಮುಗಿಯುತ್ತಾ ಬಂತು ಹೀಗಿರುವಾಗ ಮಧ್ಯಪ್ರದೇಶದಲ್ಲಿನ ವಿಶಿಷ್ಟ ತಳಿಯ ಮಾವಿನ ಮರ ಈಗ ಫಸಲು ನೀಡಲು ಆರಂಭಿಸಿದೆ. ಆದರೆ ಒಂದು ಮಾವಿನಹಣ್ಣಿ ಬೆಲೆಯನ್ನು ಕೇಳಿದರೆ ಖಂಡಿತ ಆಶರ್ಯವಾಗಲಿದೆ.
ಹೌದು ಸ್ನೇಹಿತರೆ ಗುಜರಾತ್ ನ ಗಡಿಯಲ್ಲಿ ಇರುವ ಅಲಿರಜ್‍ಪುರ ಜಿಲ್ಲೆಯ ಕಥ್ಥಿವಾಡ ಪ್ರದೇಶದಲ್ಲಿ ಮಾತ್ರ ಬೆಳೆಯವ ಈ ಫಸಲು ನೂರ್ ಜಹಾನ್ ಮಾವಿನಕಾಯಿ ಎಂದೇ ಪ್ರಸಿದ್ಧವಾಗಿದೆ. ಸ್ನೇಹಿತರೆ ನಾವು ಒಂದು ಡಜನ್ ಮಾವಿನ ಹಣ್ಣನ್ನ ಖರೀದಿ ಮಾಡುವ ದರದಲ್ಲಿ ಒಂದೇ ನೂರ್ ಜಹಾನ್ ಹಣ್ಣು ಮಾರಾಟವಾಗುತ್ತಿದೆ. ಸ್ನೇಹಿತರೆ ಈ ಮಾವಿನ ಹಣ್ಣಿನ ಬೆಲೆ 500 ರೂಪಾಯಿಯಿಂದ 1000 ರೂಪಾಯಿ ಆಗಿದೆ ಎಂದು ಹೇಳಬಹುದು. ಸ್ನೇಹಿತರೆ ಈ ಮಾವಿನ ಹಣ್ಣಿನ ಗಾತ್ರ ಉಳಿದ ಮಾವಿನ ಹಣ್ಣುಗಳಿಗೆ ಹೋಲಿಕೆ ಮಾಡಿದರೆ ಸ್ವಲ್ಪ ದೊಡ್ಡದು ಎಂದು ಹೇಳಬಹುದು. ಒಂದು ಅಡಿಗೂ ಹೆಚ್ಚು ಉದ್ದ ಬೆಳೆಯುವ ಈ ಮಾವಿನ ಹಣ್ಣು 2 ರಿಂದ 3 ಕೆಜಿ ತೂಕವನ್ನ ಹೊಂದಿರುತ್ತದೆ. ನನ್ನ ತೋಟದಲ್ಲಿರುವ ಮೂರು ನೂರ್ ಜಹಾನ್ ಮಾವಿನಮರಗಳಲ್ಲಿ 250 ಹಣ್ಣುಗಳು ಬೆಳದಿವೆ, ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರುವರಿಯಲ್ಲಿ ಹೂವು ಬಿಡಲು ಆರಂಭಿಸಿ ಜೂನ್ ತಿಂಗಳು ಶುರುವಾದಂತೆ ಹಣ್ಣು ನೀಡುತ್ತವೆ. ಈ ಹಣ್ಣುಗಳಿಗಾಗಿ ಮುಂಗಡ ಬುಕಿಂಗ್ ಆಗಲೇ ಆರಂಭವಾಗಿದೆ.
ಮಧ್ಯಪ್ರದೇಶ ಮತ್ತು ಗುಜರಾತ್ ಜನರೇ ಈ ಹಣ್ಣಿಗೆ ಬೇಡಿಕೆ ಇದೆ ಎಂದು ಕತ್ಥಿವಾಡದ ರೈತ ಶುವರಾಜ್ ಸಿಂಗ್ ಜಾಧವ್ ಹೇಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಫಸಲು ಬಹಳ ಚನ್ನಾಗಿ ಬೆಳೆದಿದೆ, ಆದರೆ ಕರೋನದಿಂದ ವ್ಯಾಪಾರಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 2019 ರಲ್ಲಿ ನಮ್ಮ ತೋಟದಲ್ಲಿ ಒಂದೊಂದು ನೂರ್ ಜಹಾನ್ ಮಾವಿನಹಣ್ಣು ಸರಿಸುಮಾರು 2.75 ಕೆಜಿ ಬೆಳೆದಿದ್ದವು ಮತ್ತು ಒಂದು ಮಾವಿನ ಹಣ್ಣಿಗೆ 1,200 ರೂಪಾಯಿಗೆ ಮಾರಾಟ ಮಾಡಿದ್ದೇನೆ ಎಂದು ಮತ್ತೊಬ್ಬ ನೂರ್ ಜಹಾನ್ ಹಣ್ಣಿನ ಬೆಳೆಗಾರರು ಹೇಳಿದ್ದಾರೆ.