ನಿಮಗೆಲ್ಲ ತಿಳಿದಿರುವ ಹಾಗೆ ಈಗ ನಾವೇ ಯಾವ ಕೆಲಸವನ್ನ ಮಾಡಿದರೂ ಕೂಡ ಸಕತ್ ವೈರಲ್ ಆಗುತ್ತದೆ ಎಂದು ಹೇಳಬಹುದು. ಹೌದು ಸಾಮಾಜಿಕ ಮಾಧ್ಯಮಗಳ ಕಾರಣ ನಾವು ಯಾವುದೇ ಕೆಲಸವನ್ನ ಮಾಡಿದರು ಅದರ ವಿಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತದೆ. ಇನ್ನು ಸಾಮಾಜಿಕ ಜಾಲತಾಣ ಬಳಸುತ್ತಿದ್ದರೆ ನೀವು ಸಾಮಾನ್ಯವಾಗಿ ನಾವು ತೋರಿಸುತ್ತಿರುವ ಈ ಮಹಿಳೆಯರ ಫೋಟೋ ನೋಡೇ ಇರುತ್ತೀರಿ ಎಂದು ಹೇಳಬಹುದು. ತಮ್ಮ ಹಾಡಿನ ಮೂಲಕ ಈ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದರು ಮತ್ತು ಇವರಿಬ್ಬರ ಹಾಡನ್ನ ಸಕತ್ ಟ್ರೊಲ್ ಕೂಡ ಮಾಡಲಾಗಿತ್ತು.
ಇವರು ಹಾಡನ್ನ ಹಾಡುವಾಗ ಚೀರಾಡುತ್ತಾರೆ ಮತ್ತು ಇದು ಕೂಡ ಹಾಡುವ ಒಂದು ಪದ್ದತಿನ ಎಂದು ಅದೆಷ್ಟೋ ಜನರು ತಲೆಬಿಸಿ ಮಾಡಿಕೊಂಡಿದ್ದರು ಎಂದು ಹೇಳಬಹುದು. ಇನ್ನು ಕೆಲವು ಟ್ರೊಲ್ ಮತ್ತು ಮಿಮ್ಸ್ ಪೇಜ್ ಗಳಿಗೆ ಇವರು ಆಹಾರವಾಗಿದ್ದರು ಎಂದು ಹೇಳಬಹುದು. ಸ್ನೇಹಿತರೆ ಇಷ್ಟು ಚೀರುತ್ತಾ ಹಾಡನ್ನ ಹಾಡುವ ಈ ಮಹಿಳೆಯರ ಹಿನ್ನಲೆ ಸಾಮಾನ್ಯಗಾಗಿ ಯಾರಿಗೂ ತಿಳಿದಿಲ್ಲ ಮತ್ತು ಇವರ ಹಿನ್ನಲೆಯನ್ನ ಕೇಳಿದರೆ ನೀವು ಒಮ್ಮೆ ಶಾಕ್ ಆಗುತ್ತೀರಿ. ಹಾಗಾದರೆ ಹಾಡಿನ ಮೂಲಕ ಫೇಮಸ್ ಆಗಿರುವ ಈ ಮಹಿಳೆಯರು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಹಿಳೆಯರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಸ್ನೇಹಿತರೆ ಈ ಗಾಯಕಿಯರನ್ನ ನೂರನ್ ಗಾಯಕಿಯರು ಎಂದು ಮತ್ತು ನೂರನ್ ಸಿಸ್ಟರ್ಸ್ ಎಂದು ಕರೆಯಲಾಗುತ್ತದೆ. ಸ್ನೇಹಿತರೆ ಈ ಇಬ್ಬರು ಗಾಯಕಿಯರಲ್ಲಿ ಒಬ್ಬರ ಹೆಸರು ಜ್ಯೋತಿ ಮತ್ತು ಇನ್ನೊಬ್ಬರ ಹೆಸರು ಸುಲ್ತಾನ ಮತ್ತು ನೂರನ್ ಅನ್ನುವುದು ಇವರ ಮನೆತನದ ಹೆಸರು. ಮೂಲತಃ ಪಂಜಾಬ್ ನವರು ಆದ ಇವರು ಉತ್ತರ ಭಾರತದ ಸುಪ್ರಸಿದ್ದ ಸೂಫಿ ಹಾಗು ಕರಾನಾ ಶೈಲಿಯ ಹಾಡುಗಳ ಗಾಯಕಿಯರು ಆಗಿದ್ದಾರೆ. ಇನ್ನು ಈ ಮಹಿಳೆಯರ ಇಡೀ ಕುಟುಂಬದ ಸಂಗೀತ ಪರಂಪರೆಯನ್ನ ಹೊಂದಿರುವ ಕುಟುಂಬ ಆಗಿದೆ. ಈ ಇಬ್ಬರು ಸಹೋದರಿಯರು ತಮ್ಮ ಚಿಕ್ಕ ವಯಸ್ಸಿಯಲ್ಲಿಯೇ ತಂದೆಯ ಹಾಡನ್ನ ಹಾಡಲು ಹೋಗುತ್ತಿದ್ದರು ಮತ್ತು ತಂದೆಯ ಜೊತೆ ಸೂಫಿ ಮತ್ತು ಕರಾನಾ ಶೈಲಿಯ ಹಾಡನ್ನ ಕಲಿತುಕೊಂಡರು ಎಂದು ಹೇಳಬಹುದು.
ಕೆಲವು ಸಣ್ಣ ಸಭೆ ಸಮಾರಂಭಗಳಲ್ಲಿ ತಂದೆಯ ಜೊತೆ ಹೋಗಿ ಹಾಡನ್ನ ಹಾಡುತ್ತಿದ್ದರು ಇಬ್ಬರು ಸಹೋದರಿಯರು. 2010 ರಲ್ಲಿ ಇಕ್ಬಾಲ್ ಮಹಲ್ ಅನ್ನುವ ಕೆನಡಿಯನ್ ಮೂಲದ ಮ್ಯೂಸಿಕ್ ಪ್ರೊಮೋಟರ್ ಕಣ್ಣಿಗೆ ಇವರಿಬ್ಬರು ಬೀಳುತ್ತಾರೆ. ಇವರ ಹಾಡಿಗೆ ಮನಸೋದ ಅವರು ಇವರಿಗೆ ಒಳ್ಳೆಯ ತರಬೇತಿ ಕೊಟ್ಟು ಅವರನ್ನ ಫೇಮಸ್ ಮಾಡುತ್ತಾರೆ. 2013 ರಲ್ಲಿ ದರ್ಗಾದಲ್ಲಿ ನಡೆದ ಒಂದು ಕಾರ್ಯಕ್ರಮಕ್ಕೆ ಇವರನ್ನ ಕರೆಯಲಾಗುತ್ತದೆ ಮತ್ತು ಈ ಕಾರ್ಯಕ್ರಮ ಇವರ ಜೀವನವನ್ನೇ ಬದಲಾಯಿಸುತ್ತದೆ. ಇನ್ನು ಇವರು ಅಲ್ಲಿ ಹಾಡಿದ ಅಲ್ಲಾಹು ಅನ್ನುವ ಹಾಡು ಸಾಕರ್ ಫೇಮಸ್ ಆಗುತ್ತದೆ ಮತ್ತು ಯು ಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗುತ್ತದೆ. ಇದರಿಂದ ಫೇಮಸ್ ಇವರಿಗೆ ತಕ್ಷಣ ಎಲ್ಲಾ ಹಿಂದಿ ಮಾಧ್ಯಮಗಳು ಹಾಡನ್ನ ಹಾಡಲು ಕರೆದರು ಮತ್ತು ಇವರು ಇದಾದ ನಂತರ ಕೆಲವು ಟ್ಯಾಲೆಂಟ್ ಶೋ ಗೂ ಕೂಡ ಆಯ್ಕೆಯಲ್ಲಿ ಅಲ್ಲಿ ಪ್ರಶಸ್ತಿಯನ್ನ ಪಡೆದುಕೊಳ್ಳುತ್ತಾರೆ.
ಇವರ ಕೆಲವು ಬೇಸ್ ವಾಯ್ಸ್ ಹಾಡು ಸಕತ್ ಫೇಮಸ್ ಆದ ನಂತರ ಹಿಂದಿಯ ಕೆಲವು ಚಿತ್ರಗಳಲ್ಲಿ ಕೂಡ ಹಾಡನ್ನ ಹಾಡಿ ಸಕತ್ ಫೇಮಸ್ ಆದರು. ಈಗಾಗಲೇ ನೂರಕ್ಕೂ ಅಧಿಕ ಚಿತ್ರಗಳಿಗೆ ಹಾಡನ್ನ ಹಾಡಿರುವ ಇವರು ಸೂಫಿ ಹಾಡನ್ನ ಪ್ರಸಿದ್ದಿ ಮಾಡಿದವರಲ್ಲಿ ಅಗ್ರ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಬಹುದು. ಈ ಸೂಫಿ ಹಾಡು ಸಾವಿರಾರು ವರ್ಷಳ ಹಿರಿಮೆಯನ್ನ ಹೊಂದಿದೆ ಮತ್ತು ಈ ಸಹೋದರಿಯರ ಹಾಡನ್ನ ಕೇಳಲು ಲಕ್ಷಾಂತರ ಜನರು ಕಾದು ಕುಳಿತಿರುತ್ತಾರೆ. ಸ್ನೇಹಿತರೆ ಇವರ ಸಾಧನೆಯನ್ನ ಗೌರವಿಸುವುದು ನಮ್ಮ ಕರ್ತವ್ಯ. ಸ್ನೇಹಿತರೆ ಈ ಇಬ್ಬರು ಸಹೋದರಿಯರ ಸಾಧನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.