Dr. Chandrashekhar Pakhmode Heart Attack: ಇತ್ತೀಚಿನ ದಿನದಲ್ಲಿ ಹೃದಯಾಘಾತದಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ತಜ್ಞರ ಪ್ರಕಾರ, ಒತ್ತಡ, ಅನಾರೋಗ್ಯಕರ ಜೀವನಶೈಲಿ, ಮಧುಮೇಹ, ಅಧಿಕ ರಕ್ತದೊತ್ತಡ, ಮತ್ತು ಅನುವಂಶಿಕ ಕಾರಣಗಳು ಇದಕ್ಕೆ ಕಾರಣವಾಗುತ್ತದೆ. ಇದೀಗ ನಾಗಪುರದ ಪ್ರಸಿದ್ಧ Neurosurgeon Dr Chandrashekar ಅವರು ತಮ್ಮ 53 ವರ್ಷಕ್ಕೆ ತೀವ್ರ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಇದೀಗ ನಾವು Dr. N Chandrashekar ಅವರ ECG ಪರೀಕ್ಷೆಯಲ್ಲಿ ನಾರ್ಮಲ್ ಆಗಿದ್ದರು.. ಹೃದಯಾಘಾತ ಸಂಭವಿಸಿದ್ದು ಹೇಗೆ ಮತ್ತು ತಜ್ಞರು ಹೇಳುದೇನು..? ಅನ್ನುವ ಬಗ್ಗೆ ನಾವೀಗ ಸಂಪೂರ್ಣವಾಗಿ ಮಾಹಿತಿಯನ್ನ ತಿಳಿದುಕೊಳ್ಳೋಣ.
ಹೃದಯಾಘಾತಕ್ಕೆ ಬಲಿಯಾದ ನ್ಯೂರೋಸರ್ಜನ್ ಡಾ. ಚಂದ್ರಶೇಖರ್
53 ವರ್ಷದ Dr Chandrashekhar Pakhmode ಅವರು ಡಿಸೆಂಬರ್ 31 ರ ಬೆಳಗ್ಗೆ ಸುಮಾರು 6 ಗಂಟೆ ಸುಮಾರಿಗೆ ಹೃದಯಾಘಾತದಿಂದ ಕುಸಿದು ಬಿದ್ದರು. ತಕ್ಷಣ ಅವರನ್ನು ಅವರೇ ನೆಡೆಸುತಿದ್ದ, ನ್ಯೂರಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಎಷ್ಟೇ ಪ್ರಯತ್ನ ಮಾಡಿದರು ಡಾ. ಚಂದ್ರಶೇಖರ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮರಣ ಹೊಂದುವ 3 ದಿನಗಳ ಹಿಂದೆ ಅಷ್ಟೇ ಅವರ ECG ಸಂಪೂರ್ಣ ನಾರ್ಮಲ್ ಆಗಿತ್ತು. ECG ನಾರ್ಮಲ್ ಆಗಿದ್ದರು ಕೂಡ ಈ ದುರ್ಘಟನೆ ಸಂಭವಿಸಿದೆ. ನಾಗಪುರದ ನ್ಯೂರಾನ್ ಹಾಸ್ಪಿಟಲ್ ನ ಪ್ರಸಿದ್ಧ ನ್ಯೂರೋಸರ್ಜನ್ ಡಾ. ಚಂದ್ರಶೇಖರ್ ಪಾಖಮೋಡೆ ಸಾವು ವೈದ್ಯಕೀಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಪತ್ನಿ ಡಾ. ಮನೀಷಾ, ಮಗ ಡಾ. ಅದ್ವೈತ್ ಮತ್ತು ಮಗಳು ಅನನ್ಯಾ ಅವರಿಗೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ. ಮುಖ್ಯಮಂತ್ರಿ Devendra Fadnavis, ಕೇಂದ್ರ ಸಚಿವ Nitin Gadkari ಸೇರಿದಂತೆ ಹಲವು ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.
ECG ನಾರ್ಮಲ್ ಆಗಿದ್ದರು, ಹೃದಯಾಘಾತ ಸಂಭವಿಸಿದ್ದು ಹೇಗೆ?
ECG ಹೃದಯದ ವಿದ್ಯುತ್ ಚಟುವಟಿಕೆಯನ್ನು ಮಾತ್ರ ದಾಖಲಿಸುತ್ತದೆ. ಆದರೆ ಅದು ಕರೋನರಿ ಧಮನಿಗಳಲ್ಲಿ ಇರುವ ಬ್ಲಾಕೇಜ್ ಅಥವಾ ಅಸ್ಥಿರ ಪ್ಲೇಕ್‌ಗಳನ್ನು ತೋರಿಸುದಿಲ್ಲ. ವಿಶೇಷವಾಗಿ ಲೆಫ್ಟ್ ಮೇನ್ ಅಥವಾ LAD ಧಮನಿಯಲ್ಲಿ ತೀವ್ರ ಬ್ಲಾಕೇಜ್ ಇದ್ದರೆ, ರಕ್ತ ಪೂರೈಕೆ ಕಡಿಮೆಯಾಗಿ ಸಡನ್ ಕಾರ್ಡಿಯಾಕ್ ಅರೆಸ್ಟ್ ಸಂಭವಿಸುತ್ತದೆ. ಹೆಚ್ಚು ಒತ್ತಡ ಇರುವ ವೃತ್ತಿ, ಕಡಿಮೆ ನಿದ್ರೆ ಮತ್ತು ದೀರ್ಘಕಾಲದ ಸ್ಟ್ರೆಸ್ ಇರುವುದು ಇದಕ್ಕೆ ಮುಖ್ಯ ಕಾರಣ ಆಗಿದೆ. ಒತ್ತಡದಿಂದ Adrenaline ಮತ್ತು Cortisol Hormones ಗಳು ಹೆಚ್ಚಾಗಿ ಹೃದಯದ ವೇಗ ಮತ್ತು ರಕ್ತದೊತ್ತಡ ಏರಿಕೆ ಮಾಡುತ್ತವೆ. ಬೆಳಗ್ಗೆ 3 ರಿಂದ 6 ಗಂಟೆಯ ನಡುವೆ ಈ Hormones ಗಳು ಉಲ್ಬಣಗೊಳ್ಳುವುದರಿಂದ ಅಪಾಯ ಹೆಚ್ಚಾಗಿ ಸಂಭವಿಸುತ್ತದೆ.
ಜನರಿಗೆ ಸಲಹೆ
- ಆಯಾಸ, ಸ್ವಲ್ಪ ಎದೆನೋವು ಅಥವಾ ಉಸಿರಾಟದ ತೊಂದರೆಯನ್ನು ನಿರ್ಲಕ್ಷಿಸಬಾರದು
- ನಿಯಮಿತ Troponin ಪರೀಕ್ಷೆ ಮಾಡಿಸಬೇಕು
- Stress ಟೆಸ್ಟ್ ಮಾಡಿಸಬೇಕು
- ದಿನಕ್ಕೆ 7 ರಿಂದ 8 ಗಂಟೆ ನಿದ್ರೆ ಮಾಡಿ
- ಬೆಳಿಗ್ಗೆ ಎದ್ದು ಯೋಗ ಅಥವಾ ಧ್ಯಾನ ಮಾಡಿ
- ಆರೋಗ್ಯಕರ ಆಹಾರವನ್ನು ಸೇವನೆ ಮಾಡಿ
Disclaimer: This information is provided for awareness purposes only. For personalised legal advice, consult a qualified professional and refer to official government notifications.

