Flipkart Diwali Sale: ಅರ್ಧ ಬೆಲೆಗೆ ಖರೀದಿಸಿ Nothing Phone 2 , ಫ್ಲಿಪ್ಕಾರ್ಟ್ ನಲ್ಲಿ ದೀಪಾವಳಿ ಹಬ್ಬದ ಭರ್ಜರಿ ಆಫರ್.
ದೀಪಾವಳಿ ಹಬ್ಬಕೆ ನಥಿಂಗ್ ಫೋನ್ 2 ಮೇಲೆ ಭರ್ಜರಿ ರಿಯಾಯಿತಿ ಘೋಷಣೆಯಾಗಿದೆ.
Nothing Phone 2 In Flipkart Diwali Offer: ಸದ್ಯ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ಮಾರುಕಟ್ಟೆಯಲ್ಲಿ iPhone 15 ರ ಮಾದರಿ ಪರಿಚಯವಾದ ಬೆನ್ನಲ್ಲೇ ಐಫೋನ್ ಜೊತೆ ಸ್ಪರ್ದಿಸಲು ಹಲವಾರು ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಮರುಕಟ್ಟೆಯಲ್ಲಿ ಲಾಂಚ್ ಆಗಿವೆ.
ಇನ್ನು ಸದ್ಯ ಹಬ್ಬದ ಸೀಸನ್ ಆರಂಭಗೊಂಡ ಹಿನ್ನಲೆ ಎಲ್ಲೆಡೆ ಬಾರಿ ರಿಯಾಯಿತಿಯಲ್ಲಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಅದರಲ್ಲೂ ದೀಪಾವಳಿ ಹಬ್ಬದ ವಿಶೇಷಕ್ಕೆ ಬಂಪರ್ ಆಫರ್ ಗಳನ್ನು ವಿವಿಧ ಕಂಪನಿಗಳು ಇ ಕಾಮರ್ಸ್ ತಾಣಗಳು ನೀಡುತ್ತಿವೆ.
Flipkart Diwali Sale 2023
ಇದೀಗ ದಿವಾಲಿ ಸೇಲ್ ನಲ್ಲಿ ಜನಪ್ರಿಯ ಇ ಕಾಮರ್ಸ್ ವೆಬ್ ಸೈಟ್ ಆಗಿರುವ Flipkart , Nothing 2 ಫೋನ್ ಗೆ ಬಂಪರ್ ಆಫರ್ ಅನ್ನು ಘೋಷಣೆ ಮಾಡಿದೆ. ಹೆಚ್ಚಿನ ಬೇಡಿಕೆ ಇರುವ Nothing 2 ಫೋನ್ ಅನ್ನು ನೀವು ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ. ದೇಶದಲ್ಲಿ ಜನಪ್ರಿಯ ಮೊಬೈಲ್ ತಯಾರಕ ಕಂಪನಿಗಳಲ್ಲಿ ಒಂದಾದ Nothing ಕಂಪನಿ ಕಳೆದ ಬಾರಿ ಮಾರುಕಟ್ಟೆಯಲ್ಲಿ Nothing 2 ಫೋನ್ ಅನ್ನು ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ವಿಭಿನ್ನ ವೈಶಿಷ್ಟ್ಯಗಳಿರುವ Nothing 2 ಫೋನ್ ಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದೆ ಎನ್ನಬಹುದು.
Nothing Phone 2
Nothing Phone 2 ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿರಲಿದೆ. ಈ ಫೋನಿನ ಹಿಂಭಾಗದಲ್ಲಿ ಮೂರೂ ಕ್ಯಾಮೆರಾಗಲಿವೆ. 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಪ್ರಾಥಮಿಕ ಕ್ಯಾಮರಾವನ್ನು ಹೊಂದಿದೆ. ಇನ್ನು ಉತ್ತಮ ಗುಣಮಟ್ಟದ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದುಕೊಳ್ಳಲಿದೆ.
ನಥಿಂಗ್ ಫೋನ್ 2 4700mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆಯಲಿದೆ. ಇನ್ನು ನಥಿಂಗ್ ಫೋನ್ 2 ಸ್ಮಾರ್ಟ್ಫೋನ್ 6.67 ಇಂಚಿನ OLED ಡಿಸ್ ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ನೀಡಲಿದೆ. ಬಲಿಷ್ಠವಾದ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 8+ ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ.
Nothing Phone 2 ಖರೀದಿಗೆ 10000 ರಿಯಾಯಿತಿ
ಇನ್ನು 8GB +128GB ಸ್ಟೋರೇಜ್ ಆಯ್ಕೆಯನ್ನು ಹೊಂದಿರುವ Nothing Phone 2 ರ ಬೆಲೆ 49,999 ರೂ. ಆಗಿದೆ. ಇನ್ನು Flipkart ದಿವಾಳಿ ಸೇಲ್ ನಲ್ಲಿ ನಿಮಗಾಗಿ ಶೇ. 20 ರಷ್ಟು ಡಿಸ್ಕೌಂಟ್ ಅನ್ನು ನೀಡುತ್ತಿದೆ. ನೀವು ಫ್ಲಿಪ್ಕಾರ್ಟ್ ನ 10,000 ರಿಯಾಯಿತಿಯ ಆದಾರದ ಮೇಲೆ Nothing Phone 2 ಅನ್ನು ಕೇವಲ 39,999 ರೂ. ಖರೀದಿಸಬಹುದು. ಹಾಗೆಯೇ ಈ ಸ್ಮಾರ್ಟ್ ಫೋನ್ ಖರೀದಿಗೆ ICICI , Kotak ಮತ್ತು HDFC ಬ್ಯಾಂಕ್ ಆಕರ್ಷಕ ಆಫರ್ ಅನ್ನು ನೀಡುತ್ತಿದೆ. ನೀವು ಬ್ಯಾಂಕ್ ಆಫರ್ ಅನ್ನು ಬಳಸಿಕೊಂಡು ಇನ್ನು ಅಗ್ಗದ ಬೆಲೆಯಲ್ಲಿ Nothing Phone 2 ಅನ್ನು ಖರೀದಿಸಬಹುದು.