Nothing Phone 2: ಸಕತ್ ಆಗಿದೆ ಗುರು ನಥಿಂಗ್ ಫೋನ್ 2, ಐಫೋನ್ ಗೆ ಠಕ್ಕರ್ ಕೊಟ್ಟು ಕಡಿಮೆ ಬೆಲೆಗೆ ಖರೀದಿಸಿ.
ಇಂದು ತನ್ನ ಎರಡನೇ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿರುವ ನಥಿಂಗ್ ಕಂಪನಿ.
Nothing Phone 2 Features: ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗಿ ಗ್ರಾಹಕರ ಗಮನ ಸೆಳೆಯುತ್ತಿವೆ. ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಆಫರ್ ಗಳಲ್ಲಿ ಸಿಗುತ್ತಿವೆ. ಇದೀಗ ಇಂದು ಮಾರುಕಟ್ಟೆಗೆ ನಥಿಂಗ್ ಫೋನ್ 2 ಬಿಡುಗಡೆಯಾಗಲಿದೆ. ಇಂದು ರಾತ್ರಿ 8:30 ಕ್ಕೆ ನಥಿಂಗ್ ಫೋನ್ 2 ಸ್ಮಾರ್ಟ್ ಫೋನ್ ಬಿಡುಗಡೆಯಾಗಲಿದೆಯಂತೆ.
ಕಳೆದ ವರ್ಷ ನಥಿಂಗ್ ಕಂಪನಿ ತನ್ನ ಮೊದಲ ಸ್ಮಾರ್ಟ್ ಫೋನ್ ನಥಿಂಗ್ 1 ಅನ್ನ ಬಿಡುಗಡೆ ಮಾಡಿತ್ತು. ಈ ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಸೇಲ್ ಕಂಡಿದ್ದು ಜನರಿಂದ ಉತ್ತಮ ಪತಿಕ್ರಿಯೆ ಸಹ ಪಡೆದುಕೊಂಡಿತ್ತು. ಇದೀಗ ನಥಿಂಗ್ ಕಂಪನಿ ಇಂದು ತನ್ನ ಎರಡನೇ ಸ್ಮಾರ್ಟ್ ಫೋನ್ ನನ್ನು ಬಿಡುಗಡೆ ಮಾಡಲಿದೆ.
ನಥಿಂಗ್ ಫೋನ್ 2 ನ ಬೆಲೆ
ನಥಿಂಗ್ ಫೋನ್ 2 ಬೆಲೆ 40,000 ರೂಪಾಯಿ ಆಸುಪಾಸಿನಲ್ಲಿ ಇರುತ್ತದೆ ಎನ್ನಲಾಗುತ್ತಿದೆ. ನಥಿಂಗ್ ಫೋನ್ 1 ಗೆ 30,000 ರೂಪಾಯಿ ಆಗಿತ್ತು. ನಥಿಂಗ್ ಫೋನ್ 2 ಸ್ಮಾರ್ಟ್‌ಫೋನ್ 6.67 ಇಂಚಿನ OLED ಡಿಸ್ ಪ್ಲೇ ಹೊಂದಿದೆ, ಇದು 120Hz ರಿಫ್ರೆಶ್ ರೇಟ್ ನೀಡಲಿದೆ ಎಂದು ತಿಳಿದುಬಂದಿದೆ.
ಈ ಸ್ಮಾರ್ಟ್ ಫೋನ್ ಬಲಿಷ್ಠವಾದ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸತ್ತದೆ ಎನ್ನಲಾಗಿದೆ.
ನಥಿಂಗ್ ಫೋನ್ 2 ವಿಶೇಷತೆ
ನಥಿಂಗ್ ಫೋನ್ 2 ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದೆ. ಈ ಫೋನಿನ ಹಿಂಭಾಗದಲ್ಲಿ ಮೂರೂ ಕ್ಯಾಮೆರಾಗಲಿವೆ. 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಈ ಸ್ಮಾರ್ಟ್ ಫೋನ್ ಇದೆಯಂತೆ.
ಅದರಂತೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿದೆ ಎನ್ನಲಾಗುತ್ತಿದೆ. ನಥಿಂಗ್ ಫೋನ್ 2 4700mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿರಲಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ ಎಂದು ತಿಳಿದುಬಂದಿದೆ.