Nothing Phone: ಐಫೋನ್ ಗೆ ಪೈಪೋಟಿ ಕೊಡಲು ಬಂತು ನಥಿಂಗ್ ಫೋನ್ 2 , ಭರ್ಜರಿ ಡಿಸ್ಕೌಂಟ್ ಬುಕಿಂಗ್ ಆರಂಭ.
4700mAh ಬ್ಯಾಟರಿ ಸಾಮರ್ಥ್ಯದ ಜೊತೆಗೆ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದ Nothing Phone 2 ಬಿಡುಗಡೆಯಾಗಲಿದೆ.
Nothing Phone 2 Release: ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ನಥಿಂಗ್ ಫೋನ್ 1 ಬಿಡುಗಡೆಗೊಂಡು ಬಾರಿ ಸಂಚಲನ ಸ್ರಷ್ಟಿಸಿದೆ. ಇದೀಗ ನಥಿಂಗ್ ಫೋನ್ 2 ನ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು ಸದ್ಯದಲ್ಲೇ ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.
ಇನ್ನು ನಥಿಂಗ್ ಫೋನ್ 2 (Nothing Phone 2) ಬಿಡುಗಡೆಗೆ ತಯಾರಾಗುತ್ತಿದ್ದಂತೆ ನಥಿಂಗ್ ಫೋನ್ 1 ಗೆ ಬಾರಿ ರಿಯಾಯಿತಿ ಲಭ್ಯವಾಗಿದ್ದು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ.
ಜುಲೈ 11 ರಂದು ನಥಿಂಗ್ ಫೋನ್ 2 ಬಿಡುಗಡೆ
ಈ ಹಿಂದೆ ಸಾಕಷ್ಟು ಬಾರಿ ನಥಿಂಗ್ ಫೋನ್ 2 ಬಿಡುಗಡೆಯ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಇದೀಗ ಜುಲೈ 11 ರಂದು ನಥಿಂಗ್ ಫೋನ್ 2 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ. ಈ ನಥಿಂಗ್ ಫೋನ್ 2 8GB RAM ಹಾಗೂ 128GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಲಿದೆ. ಬಿಡುಗಡೆಗೊಳ್ಳಲಿರುವ ಈ ಫೋನ್ ನ ವೈಶಿಷ್ಟ್ಯಗಳ ಬಗ್ಗೆ ವಿವರ ತಿಳಿಯೋಣ.
ನಥಿಂಗ್ ಫೋನ್ 2 ವಿಶೇಷತೆ
ನಥಿಂಗ್ ಫೋನ್ 2 ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿರಲಿದೆ. ಈ ಫೋನಿನ ಹಿಂಭಾಗದಲ್ಲಿ ಮೂರೂ ಕ್ಯಾಮೆರಾಗಲಿವೆ. 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಪ್ರಾಥಮಿಕ ಕ್ಯಾಮರಾವನ್ನು ಹೊಂದಿದೆ. ಇನ್ನು ಉತ್ತಮ ಗುಣಮಟ್ಟದ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದುಕೊಳ್ಳಲಿದೆ. ನಥಿಂಗ್ ಫೋನ್ 2 4700mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆಯಲಿದೆ.
ನಥಿಂಗ್ ಫೋನ್ 2 ನ ಬೆಲೆ
ನಥಿಂಗ್ ಫೋನ್ ನ ಬಗ್ಗೆ ಅಧಿಕೃತವಾದ ಮಾಹಿತಿ ಇನ್ನು ಹೊರ ಬಿದ್ದಿಲ್ಲ. ಮೂಲಗಳ ಪ್ರಕಾರ ನಥಿಂಗ್ ಫೋನ್ 2 ಬೆಲೆ 49,999 ರೂಪಾಯಿ ಎಂದು ಅಂದಾಜಿಸಲಾಗಿದೆ. ನಥಿಂಗ್ ಫೋನ್ 1 ಗೆ 30,499 ರೂಪಾಯಿ ಆಗಿದೆ. ನಥಿಂಗ್ ಫೋನ್ 2 ನಲ್ಲಿ ವಿಶೇಷ ಫೀಚರ್ ಅನ್ನು ನೀಡಲಾಗಿದ್ದು ಇದು ಹಳೆಯ ಮಾದರಿಗಿಂತ ಬೆಲೆಯಲ್ಲಿ ಸ್ವಲ್ಪ ಅಧಿಕವಾಗಿರುತ್ತದೆ.
ಇನ್ನು ನಥಿಂಗ್ ಫೋನ್ 2 ಸ್ಮಾರ್ಟ್‌ಫೋನ್ 6.67 ಇಂಚಿನ OLED ಡಿಸ್ ಪ್ಲೇ ಹೊಂದಿರಲಿದ್ದು, ಇದು 120Hz ರಿಫ್ರೆಶ್ ರೇಟ್ ನೀಡಲಿದೆ. ಬಲಿಷ್ಠವಾದ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.