Gold Rate Update: ಆಭರಣ ಪ್ರಿಯರಿಗೆ ಖುಷಿ ಸುದ್ದಿ, ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ 150 ರೂ ಇಳಿಕೆ.
ಇಂದು ಕೂಡ ಇಳಿಕೆಯತ್ತ ಮುಖ ಮಾಡಿದ ಬಂಗಾರದ ಬೆಲೆ.
November 6th Gold Rate: ದೇಶಿಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಕಂಡು ಬರುತ್ತದೆ. ಪ್ರತಿನಿತ್ಯ ಚಿನ್ನದ ಬೆಲೆ ಏರಿಕೆ ಅಥವಾ ಇಳಿಕೆಯಾಗುತ್ತಲೇ ಇರುತ್ತದೆ. ಇತ್ತೀಚೆಗಂತೂ ಚಿನ್ನದ ಬೆಲೆ ಹೆಚ್ಚಾಗಿ ಏರಿಕೆ ಕಂಡಿದೆ ಎನ್ನಬಹುದು. October ನ ತಿಂಗಳ ಆರಂಭದಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ತಿಂಗಳ ಕೊನೆಯ ಎರಡು ದಿನದಲ್ಲಿ ಇಳಿಕೆ ಕಾಣುತ್ತ November ತಿಂಗಳ ಮೊದಲೆರಡು ದಿನ ಕೂಡ ಚಿನ್ನದ ಬೆಲೆ ಇಳಿಕೆಯಾಗಿತ್ತು.
ಇನ್ನು ಕಳೆದ ಎರಡು ದಿನದಿಂದ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಇನ್ನು ದೀಪಾವಳಿಯ ಹಬ್ಬದ ವಿಶೇಷಕ್ಕೆ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಜನರು ಚಿನ್ನ ಖರೀದಿಗೆ ಬೆಲೆ ಇಳಿಕೆಯನ್ನು ನಿರೀಕ್ಷಿಸುತ್ತಾರೆ. ಸದ್ಯ ನಿನ್ನೆ ಸ್ಥಗಿತಗೊಂಡಿದ್ದ ಚಿನ್ನದ ಬೆಲೆ ಇಂದು 150 ರೂ. ಇಳಿಕೆ ಕಾಣುವ ಮೂಲಕ ಆಭರಣ ಖರೀದಿದಾರರಿಗೆ ಸಿಹಿಸುದ್ದಿ ನೀಡಿದೆ. ಇಂದಿನ ಚಿನ್ನದ ಬೆಲೆ ಎಷ್ಟು ತಲುಪಿದೆ ಎನ್ನುವುದನ್ನು ನೋಡೋಣ.
22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
*ನಿನ್ನೆ 5,650 ರೂ. ಗೆ ಲಭ್ಯವಿದ್ದ ಒಂದು ಗ್ರಾಂ ಚಿನ್ನದಲ್ಲಿ ಇಂದು 15 ರೂ. ಇಳಿಕೆಯಾಗುವ ಮೂಲಕ 5,635 ರೂ. ತಲುಪಿದೆ.
*ನಿನ್ನೆ 45,200 ರೂ. ಗೆ ಲಭ್ಯವಿದ್ದ ಎಂಟು ಗ್ರಾಂ ಚಿನ್ನದಲ್ಲಿ ಇಂದು 120 ರೂ. ಇಳಿಕೆಯಾಗುವ ಮೂಲಕ 45,080 ರೂ. ತಲುಪಿದೆ.
*ನಿನ್ನೆ 56,500 ರೂ. ಗೆ ಲಭ್ಯವಿದ್ದ ಹತ್ತು ಗ್ರಾಂ ಚಿನ್ನದಲ್ಲಿ ಇಂದು 150 ರೂ. ಇಳಿಕೆಯಾಗುವ ಮೂಲಕ 5,63,500 ರೂ. ತಲುಪಿದೆ.
*ನಿನ್ನೆ 5,65,000 ರೂ. ಗೆ ಲಭ್ಯವಿದ್ದ ನೊರರು ಗ್ರಾಂ ಚಿನ್ನದಲ್ಲಿ ಇಂದು 1,500 ರೂ. ಇಳಿಕೆಯಾಗುವ ಮೂಲಕ 5,63,500 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
*ನಿನ್ನೆ 6,164 ರೂ. ಗೆ ಲಭ್ಯವಿದ್ದ ಒಂದು ಗ್ರಾಂ ಚಿನ್ನದಲ್ಲಿ ಇಂದು 17 ರೂ. ಇಳಿಕೆಯಾಗುವ ಮೂಲಕ 6,147 ರೂ. ತಲುಪಿದೆ.
*ನಿನ್ನೆ 49,312Cರೂ. ಗೆ ಲಭ್ಯವಿದ್ದ ಎಂಟು ಗ್ರಾಂ ಚಿನ್ನದಲ್ಲಿ ಇಂದು 136 ರೂ. ಇಳಿಕೆಯಾಗುವ ಮೂಲಕ 49,176 ರೂ. ತಲುಪಿದೆ.
*ನಿನ್ನೆ 61,640 ರೂ. ಗೆ ಲಭ್ಯವಿದ್ದ ಹತ್ತು ಗ್ರಾಂ ಚಿನ್ನದಲ್ಲಿ ಇಂದು 170 ರೂ. ಇಳಿಕೆಯಾಗುವ ಮೂಲಕ 61,470 ರೂ. ತಲುಪಿದೆ.
*ನಿನ್ನೆ 6,16,400 ರೂ. ಗೆ ಲಭ್ಯವಿದ್ದ ನೂರು ಗ್ರಾಂ ಚಿನ್ನದಲ್ಲಿ ಇಂದು 1,700 ರೂ. ಇಳಿಕೆಯಾಗುವ ಮೂಲಕ 61,4,700 ರೂ. ತಲುಪಿದೆ.