Gold Rate: ಸತತ ಮೂರನೇ ದಿನ 150 ರೂ ಇಳಿಕೆ ಕಂಡ ಚಿನ್ನದ ಬೆಲೆ, ಹಬ್ಬಕ್ಕೆ ಚಿನ್ನ ಖರೀದಿಸಲು ಚಿನ್ನದ ಅಂಗಡಿಯತ್ತ ಜನರು.
ಇಂದು ಕೂಡ ಆಭರಣ ಚಿನ್ನದ ಬೆಲೆಯಲ್ಲಿ ಭರ್ಜರಿ 150 ರೂ ಇಳಿಕೆ ಕಂಡುಬಂದಿದೆ.
November 8th Gold Price: ಸದ್ಯ ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Rate) ದಿನ ಕಳೆಯುತ್ತಿದ್ದನಂತೆ ಬಾರಿ ವ್ಯತ್ಯಾಸ ಕಂಡು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಖರೀದಿ ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ ಎನ್ನಬಹುದು. ಇದಕ್ಕೆ ಕಾರಣ ಚಿನ್ನದ ಬೆಲೆಯಲ್ಲಿನ ಸತತ ಏರಿಕೆ. ಕಳೆದ ಹಲವು ತಿಂಗಳುಗಳನ್ನು ಚಿನ್ನದ ಬೆಲೆ ಗಣನೀಯ ಏರಿಕೆ ಕಾಣುತ್ತ ಬರುತ್ತಿದೆ. ಚಿನ್ನದ ಸತತ ಏರಿಕೆಯ ಕಾರಣ ಚಿನ್ನದ ಮಾರಾಟಕ್ಕೆ ಹೊಡೆತ ಬಿದ್ದಿದೆ ಎನ್ನಬಹುದು.
ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ
ಇನ್ನು November 12 ರಂದು ಬಹುನಿರೀಕ್ಷಿತ ದೀಪಾವಳಿ ಹಬ್ಬ ಬರಲಿದೆ. ಈ ಹಬ್ಬದ ಸಂಭ್ರಮಕ್ಕೆ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುತ್ತಾದೆ. ಹೀಗಾಗಿ ಚಿನ್ನದ ಖರೀದಿಗೆ ಜನರು ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ ಚಿನ್ನ ಖರೀದಿಸಲು ಬೆಲೆಯಲ್ಲಿ ಇಳಿಕೆ ಇದ್ದರೆ ಮಾತ್ರ ಜನರು ಚಿನ್ನ ಖರೀದಿಗೆ ಮನಸ್ಸು ಮಾಡುತ್ತಾರೆ ಎನ್ನಬಹುದು.
ಹೀಗಾಗಿ ಸತತ ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿರುವುದು ನಿಜಕ್ಕೂ ಖುಷಿಯ ವಿಷಯವಾಗಿದೆ. ಸದ್ಯ November ತಿಂಗಳಿನಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುತ್ತಿದು ಜನರನ್ನು ನಿರಾಳಗೊಳಿಸುತ್ತಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದು ವಿಶೇಷ.
ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ..?
*ನಿನ್ನೆ 5,625 ರೂ. ಗೆ ಲಭ್ಯವಿದ್ದ ಒಂದು ಗ್ರಾಂ ಚಿನ್ನದಲ್ಲಿ ಇಂದು 15 ರೂ. ಇಳಿಕೆಯಾಗುವ ಮೂಲಕ 5,610 ರೂ. ತಲುಪಿದೆ.
*ನಿನ್ನೆ 45,000 ರೂ. ಗೆ ಲಭ್ಯವಿದ್ದ ಎಂಟು ಗ್ರಾಂ ಚಿನ್ನದಲ್ಲಿ ಇಂದು 120 ರೂ. ಇಳಿಕೆಯಾಗುವ ಮೂಲಕ 48,880 ರೂ. ತಲುಪಿದೆ.
*ನಿನ್ನೆ 56,250 ರೂ. ಗೆ ಲಭ್ಯವಿದ್ದ ಹತ್ತು ಗ್ರಾಂ ಚಿನ್ನದಲ್ಲಿ ಇಂದು 150 ರೂ. ಇಳಿಕೆಯಾಗುವ ಮೂಲಕ 56 100 ರೂ. ತಲುಪಿದೆ.
*ನಿನ್ನೆ 5,62,500 ರೂ. ಗೆ ಲಭ್ಯವಿದ್ದ ನೂರು ಗ್ರಾಂ ಚಿನ್ನದಲ್ಲಿ ಇಂದು 1,500 ರೂ. ಇಳಿಕೆಯಾಗುವ ಮೂಲಕ 5,61,000 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಎಷ್ಟಿದೆ..?
*ನಿನ್ನೆ 6,136 ರೂ. ಗೆ ಲಭ್ಯವಿದ್ದ ಒಂದು ಗ್ರಾಂ ಚಿನ್ನದಲ್ಲಿ ಇಂದು 16 ರೂ. ಇಳಿಕೆಯಾಗುವ ಮೂಲಕ 6,120 ರೂ. ತಲುಪಿದೆ.
*ನಿನ್ನೆ 49,088 ರೂ. ಗೆ ಲಭ್ಯವಿದ್ದ ಎಂಟು ಗ್ರಾಂ ಚಿನ್ನದಲ್ಲಿ ಇಂದು 128 ರೂ. ಇಳಿಕೆಯಾಗುವ ಮೂಲಕ 48,960 ರೂ. ತಲುಪಿದೆ.
*ನಿನ್ನೆ 61,360 ರೂ. ಗೆ ಲಭ್ಯವಿದ್ದ ಹತ್ತು ಗ್ರಾಂ ಚಿನ್ನದಲ್ಲಿ ಇಂದು 160 ರೂ. ಇಳಿಕೆಯಾಗುವ ಮೂಲಕ 61,200 ರೂ. ತಲುಪಿದೆ.
*ನಿನ್ನೆ 6,13,600 ರೂ. ಗೆ ಲಭ್ಯವಿದ್ದ ನೂರು ಗ್ರಾಂ ಚಿನ್ನದಲ್ಲಿ ಇಂದು 1,600 ರೂ. ಇಳಿಕೆಯಾಗುವ ಮೂಲಕ 6,12,000 ರೂ. ತಲುಪಿದೆ.