Whatsapp Truecaller: ವಾಟ್ಸಾಪ್ ನಂಬರ್ ಸೇವ್ ಮಾಡದೆ ಹೆಸರು ತಿಳಿದುಕೊಳ್ಳಬಹುದು, ಹೊಸ ಫೀಚರ್ ಬಿಡುಗಡೆ.
WhatsApp Latest Update 2023: ಬಳಕೆದಾರರ ನೆಚ್ಚಿನ ಅಪ್ ಆದ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಯಾವಾಗಲೂ ಹೊಸ ಹೊಸ ಫೀಚರ್ಸ್ ಗಳನ್ನೂ ಪರಿಚಯಿಸುತ್ತಲೇ ಇರುತ್ತದೆ. ಇತ್ತೀಚಿಗೆ ಒಂದರ ಮೇಲೆ ಒಂದು ಫೀಚರ್ಸ್ ಗಳನ್ನೂ ವಾಟ್ಸಾಪ್ ತನ್ನ ಬಳಕೆದಾರರಿಗೆ ಪರಿಚಯಿಸಿದೆ.
ಇದೀಗ ವಾಟ್ಸಾಪ್ ಬಳಕೆದಾರರಿಗೆ ಹೊಸದೊಂದು ಫೀಚರ್ಸ್ ಅನ್ನು ಪರಿಚಯ ಮಾಡಿಕೊಟ್ಟಿದೆ. ಈಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ವಾಟ್ಸಾಪ್ ಬಿಡುಗಡೆ ಮಾಡಿರುವ ಹೊಸ ಇಹ್ರ ನಿಂದ ಬಳಕೆದಾರೈಗೆ ಇನ್ನಷ್ಟು ಲಾಭ ಆಗಲಿದೆ ಎನ್ನಬಹುದು.
ತನ್ನ ಬಳಕೆದಾರರಿಗೆ ವಾಟ್ಸಾಪ್ ಬಿಡುಗಡೆ ಮಾಡಿದೆ ಮತ್ತೊಂದು ಹೊಸ ಫೀಚರ್ಸ್
ವಾಟ್ಸಾಪ್ ಬಳಕೆದಾರರು ಹೊಸ ಹೊಸ ಫೀಚರ್ಸ್ ಗಳ ಬಿಡುಗಡೆಯಿಂದಾಗಿ ಸಮಾಧಾನಕರವಾಗಿ ಇದ್ದಾರೆ. ಇತ್ತೀಚಿಗೆ ವಾಟ್ಸಾಪ್ ಗ್ರೋಪ್ ನಲ್ಲಿರುವ ಅಡ್ಮಿನ್ ಗಳಿಗಾಗಿ ಹೊಸ ಫೀಚರ್ ಬಿಡುಗಡೆ ಮಾಡಿತ್ತು ವಾಟ್ಸಾಪ್ ಗ್ರೂಪ್ ಗೆ ಸೇರಲು ಅಡ್ಮಿನ್ ಗಳ ಪರ್ಮಿಶನ್ ಬೇಕು ಎಂಬ ಮಾಹಿತಿಯನ್ನು ಹೊರ ಹಾಕಿತ್ತು.
ಅಲ್ಲದೆ ಯಾರಾದರೂ ಅನೌನ್ ನಂಬರ್ ಇಂದ ಮೆಸೇಜ್ ಮಾಡಿದರೆ ಅವರ ಹೆಸರನ್ನು ತಿಳಿದುಕೊಳ್ಳಲು ಟ್ರೂ ಕಲರ್ ಅಥವಾ ಇನ್ನಿತರ ಅಪ್ ಗಳನ್ನೂ ಬಳಸದೆ ವಾಟ್ಸಾಪ್ ನಲ್ಲಿಯೇ ತಿಳಿದುಕೊಳ್ಳುವ ಫ್ಯೂಸ್ ನೇಮ್ ಫೀಚರ್ ಬಿಡುಗಡೆ ಮಾಡಿತ್ತು.
ವಾಟ್ಸಾಪ್ ಬಳಕೆದಾರರಿಗೆ ಹೊಸ ಸಿಹಿ ಸುದ್ದಿ
ಇದೀಗ ವಾಟ್ಸಾಪ್ ಗ್ರೂಪ್ ನಲ್ಲಿ ಸಂದೇಶ ಕಳುಹಿಸುವವರು ಯಾರೆಂದು ತಿಳಿದುಕೊಳ್ಳಲು ಅವರ ನಂಬರ್ ಸೇವ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ವಾಟ್ಸಾಪ್ ನಲ್ಲಿಯೇ ಇನ್ನು ಮುಂದೆ ನಂಬರ್ ನ ಸೇವ್ ಮಾಡದೆಯೇ ಅವರು ಯಾರೆಂದು ತಿಳಿದುಕೊಳ್ಳಬಹುದು.
ಸದ್ಯದ ವಾಟ್ಸಾಪ್ ಆಂಡ್ರ್ಯಾಡ್ ಬಳಕೆದಾರರಿಗೆ 2.23.5.12 ಫೀಚರ್ ನಲ್ಲಿ ಇದು ಲಭ್ಯವಾಗಲಿದೆ. ಐ ಓ ಎಸ್ ಬಳಕೆದಾರರಿಗೆ ವಾಟ್ಸಾಪ್ ನಲ್ಲಿ 23.5.0.73 ಅಪ್ಡೇಟ್ ಮೂಲಕ ಈ ಫೀಚರ್ ಲಭ್ಯಾವಾಗಲಿದೆ.