NPS Rules: ಈ ಕೆಲಸ ಮಾಡದಿದ್ದರೆ ಇನ್ನುಮುಂದೆ Pension ಹಣ ತಗೆಯಲು ಸಾಧ್ಯವಿಲ್ಲ, ಕೇಂದ್ರದಿಂದ ಹೊಸ ನಿಯಮ.

ಯೋಜನೆಯಿಂದ ನಿರ್ಗಮಿಸಲು ಅಥವಾ ಹಣ ಹಿಂಪಡೆಯಲು ಹೊಸ ನಿಯಮ.

NPS Exit And Withdrawal Rules 2023: ಉದ್ಯೋಗಿಗಳು ತಮ್ಮ ನಿವೃತ್ತಿಯ ನಂತರ ಆರಾಮದಾಯಕ ಜೀವನ ನಿರ್ವಹಿಸಲು Pension Scheme ಸಹಾಯವಾಗುತ್ತದೆ. ಇದೀಗ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ನಡೆಸುವ ಸಂಸ್ಥೆಯಾದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮೂಲಕ ಯೋಜನೆಯಿಂದ ನಿರ್ಗಮಿಸುವ ಅಥವಾ ಹಿಂತೆಗೆದುಕೊಳ್ಳುವ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು ಇನ್ನುಮುಂದೆ ಪಿಂಚಣಿ ಹಣ ಪಡೆಯುವ ಎಲ್ಲರಿಗೂ ಈ ನಿಯಮವನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು.

ಜಮಾ ಮಾಡಲು ತ್ವರಿತ ಬ್ಯಾಂಕ್ ಖಾತೆ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ. ಪೆನ್ನಿ ಡ್ರಾಪ್ ವಿಧಾನದ ಪ್ರಕಾರ ಬ್ಯಾಂಕ್ ಖಾತೆ ಪರಿಶೀಲನೆಯನ್ನು ಮಾಡಲಾಗುತ್ತದೆ. ಸದ್ಯ ಪಿಂಚಣಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು ಈ ನಿಯಮ ಎಲ್ಲರಿಗೂ ಅನ್ವಯ ಆಗಲಿದೆ ಎಂದು ಹೇಳಬಹುದು.

NPS Rules
Image Credit: Rightsofemployees

CRA ಪೆನ್ನಿ ಡ್ರಾಪ್ ಪರಿಶೀಲನೆ ಕಡ್ಡಾಯ
NPS ಯೋಜನೆಯಿಂದ ನಿರ್ಗಮಿಸಲು ಅಥವಾ ಹಿಂತೆಗೆದುಕೊಳ್ಳಲು ವಿನಂತಿಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಚಂದಾದಾರರ ಬ್ಯಾಂಕ್ ಖಾತೆ ವಿವರಗಳಲ್ಲಿ ತಿದ್ದುಪಡಿಗಳನ್ನು ಮಾಡಲು ಪೆನ್ನಿ ಡ್ರಾಪ್ ವಿಧಾನದ ಪ್ರಕಾರ ಪರಿಶೀಲನೆ ಅಗತ್ಯವಿದೆ ಎಂದು PFRDA ಅಧಿಸೂಚನೆ ಹೊರಡಿಸಿದೆ. ಪರಿಶೀಲನೆ ಇಲ್ಲದೆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.

ಪರಿಶೀಲನೆ ಇಲ್ಲದೆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ
CRA ಪೆನ್ನಿ ಡ್ರಾಪ್ ಪರಿಶೀಲನೆಯನ್ನು ಮಾಡಲು ವಿಫಲವಾದರೆ NPS ಯೋಜನೆಯಿಂದ ನಿರ್ಗಮಿಸಲು ಅಥವಾ ಹಿಂತೆಗೆದುಕೊಳ್ಳಲು ಸಾಧ್ಯವಾಗುದಿಲ್ಲ. ಪೆನ್ನಿ-ಡ್ರಾಪ್ ಪರಿಶೀಲನೆ ವಿಫಲವಾದಲ್ಲಿ, CRA ಚಂದಾದಾರರ Mobile Number ಮತ್ತು Email ID ಗೆ ಮಾಹಿತಿಯನ್ನು ಕಳುಹಿಸಬೇಕಾಗುತ್ತದೆ ಮತ್ತು ಅದಕ್ಕಾಗಿ ಅವರ ನೋಡಲ್ ಅಧಿಕಾರಿ ಮತ್ತು POP ಅನ್ನು ಸಂಪರ್ಕಿಸಲು ಅವರಿಗೆ ಸಲಹೆ ನೀಡುತ್ತದೆ. ಚಂದಾದಾರರ ಪೆನ್ನಿ ಡ್ರಾಪ್ ಪರಿಶೀಲನೆಯು ವಿಫಲವಾದಾಗ CRA ಹೆಚ್ಚುವರಿ ಪರಿಶೀಲನೆಯನ್ನು ಮಾಡುತ್ತದೆ.

NPS Exit And Withdrawal Rules 2023
Image Credit: Wintwealth

ಪೆನ್ನಿ ಡ್ರಾಪ್ ಪರಿಶೀಲನೆ ವಿಫಲತೆಗೆ ಕಾರಣಗಳು
*ಅಮಾನ್ಯ ಖಾತೆ ಸಂಖ್ಯೆ
*ತಪ್ಪಾದ IFSC ಕೋಡ್
*ಹೆಸರು ಸರಿಯಾಗಿಲ್ಲ
*ಖಾತೆ ನಿಷ್ಕ್ರಿಯವಾಗಿದೆ
*ಖಾತೆ ಮುಚ್ಚುವಿಕೆ
*ಖಾತೆ ವರ್ಗಾವಣೆ
*ಕ್ರೆಡಿಟ್ ಫ್ರೀಜ್
*ಖಾತೆ ಪ್ರಕಾರ ಹೊಂದಿಕೆಯಾಗುತ್ತಿಲ್ಲ

Join Nadunudi News WhatsApp Group

Join Nadunudi News WhatsApp Group