NPS: ಪಿಂಚಣಿ ನಿಯಮದಲ್ಲಿ ಜಾರಿಗೆ ಬಂತು ಬಹುದೊಡ್ಡ ಬದಲಾವಣೆ, ಈಗ 60% ಹಣ ಪಡೆದುಕೊಳ್ಳಿ.
NPS ಖಾತೆಯಿಂದ ಹಣ ಹಿಂಪಡೆಯಲು ಹೊಸ ವಿಧಾನ.
NPS Money Withdraw: ಉದ್ಯೋಗಿಗಳು ತಮ್ಮ ನಿವೃತ್ತಿಯ ನಂತರ ಆರಾಮದಾಯಕ ಜೀವನ ನಿರ್ವಹಿಸಲು Pension Scheme ಸಹಾಯವಾಗುತ್ತದೆ. ಇದೀಗ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ನಡೆಸುವ ಸಂಸ್ಥೆಯಾದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹೊಸ ಬದಲಾವಣೆಯನ್ನು ಜಾರಿಗೆ ತಂದಿದೆ. ಇದರಿಂದ NPS ವ್ಯಾಪ್ತಿಯಲ್ಲಿ ಬರುವ ಉದ್ಯೋಗಿಗಳಿಗೆ ಹಣವನ್ನು ಹಿಂಪಡೆಯುವುದು ತುಂಬಾ ಸುಲಭ ಮತ್ತು ಪ್ರಯೋಜನಕಾರಿ ಯಾಗುತ್ತದೆ.
NPS ಖಾತೆಯಿಂದ ಹಣ ಹಿಂಪಡೆಯಲು ಹೊಸ ವಿಧಾನ
PFRDA ತನ್ನ ಪಿಂಚಣಿದಾರರಿಗೆ ವ್ಯವಸ್ಥಿತ ಒಟ್ಟು ಮೊತ್ತವನ್ನು ಹಿಂತೆಗೆದುಕೊಳ್ಳುವ (SLW) ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ. ಇದನ್ನು ಅಕ್ಟೋಬರ್ 27, 2023 ರಂದು ಹೊರಡಿಸಿದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ. ಇದರ ಅಡಿಯಲ್ಲಿ ಖಾತೆದಾರರು ಪಿಂಚಣಿ ನಿಧಿಯಲ್ಲಿ ಠೇವಣಿ ಮಾಡಿದ ಮೊತ್ತದ 60 ಪ್ರತಿಶತದವರೆಗೆ ಹಿಂಪಡೆಯಲು ಸಾಧ್ಯವಾಗುತ್ತದೆ. SLW ನಲ್ಲಿ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ 75 ವರ್ಷ ವಯಸ್ಸಿನ ವರೆಗೆ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ಆಧಾರದ ಮೇಲೆ ಹಣವನ್ನು ಹಿಂಪಡೆಯುವ ಹಕ್ಕಿದೆ.
SLW ಎಂದರೇ…?
ಇದನ್ನು ಸರಳ ಪದಗಳಲ್ಲಿ ಹೇಳುದಾದರೆ ಮ್ಯೂಚುವಲ್ ಫಂಡ್ ಗಳ ಅಡಿಯಲ್ಲಿ ಲಭ್ಯವಿರುವ ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆ ಆಗಿದೆ. ಇದರಿಂದ ಜನರು ಮಧ್ಯಂತರದಲ್ಲಿ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಇದು ನಿವೃತ್ತಿಯ ನಂತರ ಅವರಿಗೆ ನಿಶ್ಚಿತ ಆದಾಯವನ್ನು ಹೊಂದುವುದನ್ನು ಖಚಿತಪಡಿಸುತ್ತದೆ ಹಾಗೆ ವೆಚ್ಚಗಳ ಹೊರೆಯಾಗುವುದಿಲ್ಲ.
SLW ನಿಂದ ಯಾರು ಪ್ರಯೋಜನ ಪಡೆದುಕೊಳ್ಳಬಹುದು..?
ನಿವೃತ್ತಿಯ ನಂತರವೂ ಸ್ಥಿರ ಆದಾಯವನ್ನು ಬಯಸುವವರು ಈ ಯೋಜನೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ನಿವೃತ್ತಿಯ ಸಮಯದಲ್ಲಿ ಈ ಪ್ರಯೋಜನವನ್ನು ಪಡೆಯಬಹುದು.
NPS ಕಾರ್ಯಾಚರಣೆ
NPS ಭಾರತ ಸರ್ಕಾರದಿಂದ ನಡೆಸಲ್ಪಡುವ ಒಂದು ಕಾರ್ಯಕ್ರಮವಾಗಿದೆ. ಇದು PFRDA ಯ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಈಕ್ವಿಟಿಗಳು, ಸರ್ಕಾರಿ ಭದ್ರತೆಗಳು ಮತ್ತು ಕಾರ್ಪೊರೇಟ್ ಬಾಂಡ್ ಗಳು ಸೇರಿದಂತೆ ಅನೇಕ ಸ್ಥಳಗಳಲ್ಲಿ NPS ಹಣವನ್ನು ಹೂಡಿಕೆ ಮಾಡುತ್ತದೆ. ಈ ರೀತಿಯಾಗಿ NPS ತನ್ನ ನಿವೃತ್ತಿ ನಿಧಿಯನ್ನು ಬಲಪಡಿಸುತ್ತದೆ.