NPS Rule: ಸರ್ಕಾರೀ ನೌಕರರಿಗೆ ಫೆಬ್ರವರಿ 1 ರಿಂದ ಹೊಸ ರೂಲ್ಸ್, ಪಿಂಚಣಿ ನಿಯಮ ಬದಲಿಸಿದ ಕೇಂದ್ರ.

ಫೆಬ್ರವರಿ 1 ರಿಂದ ಸರ್ಕಾರೀ ನೌಕರರ ಪಿಚಣಿಯಲ್ಲಿ ಬಹುದೊಡ್ಡ ಬದಲಾವಣೆ

NPS Withdrawal Rule: ಸದ್ಯ ದೇಶದಲ್ಲಿ ಅನೇಕ ಹೊಸ ಹೊಸ ನಿಯಮಗಳು ತಲೆ ಎತ್ತಿಕೊಳ್ಳುತ್ತಿದೆ. ಈಗಾಗಲೇ ಸಾಕಷ್ಟು ನಿಯಮಗಳು ಜಾರಿಯಾಗಿವೆ. 2024 ಹಣಕಾಸಿನ ವಹಿವಾಟಿನಲ್ಲಿ ಸಾಕಷ್ಟು ಬದಲಾವನ್ನೆಯನ್ನು ಜಾರಿಗೊಳಿಸಿದೆ. ಸದ್ಯ ಕೇಂದ್ರದಿಂದ ಸರ್ಕಾರೀ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಾಗಿದೆ. ಇನ್ನುಮುಂದೆ ಸರ್ಕಾರೀ ನೌಕರರ ಪಿಂಚಣಿಯಲ್ಲಿ ದೊಡ್ಡ ಬದಲಾವಣೆ ಆಗಲಿದೆ.

NPS Withdrawal Rules
Image Credit: Zee News

ಸರ್ಕಾರೀ ನೌಕರರಿಗೆ ಫೆಬ್ರವರಿ 1 ರಿಂದ ಹೊಸ ರೂಲ್ಸ್
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಹಣ ಹಿಂಪಡೆಯಲು ಹೊಸ ನಿಯಮಗಳನ್ನು ಪರಿಚಯಿಸಿದೆ. ಇದು ಫೆಬ್ರವರಿ 1 2024 ರಿಂದ ಜಾರಿಗೆ ಬರಲಿದೆ. PFRDA ಪ್ರಕಾರ NPS ನ ಹೊಸ ನಿಯಮಗಳ ಪ್ರಕಾರ, ಈಗ ಯಾರೂ NPS ಖಾತೆಯಿಂದ 25 ಪ್ರತಿಶತಕ್ಕಿಂತ ಹೆಚ್ಚು ಹಣವನ್ನು ಹಿಂಪಡೆಯುವಂತಿಲ್ಲ. ಈ ಮೊತ್ತವು ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರಹಣವನ್ನು ಒಳಗೊಂಡಿರುತ್ತದೆ.

NPS ಚಂದಾದಾರರು ಹೂಡಿಕೆಯ ಅವಧಿಯಲ್ಲಿ ಮೂರು ಬಾರಿ ಮಾತ್ರ ಭಾಗಶಃ ಹಿಂಪಡೆಯಬಹುದು. ಭಾಗಶಃ ಹಿಂಪಡೆಯುವಿಕೆಯ ಸಂದರ್ಭದಲ್ಲಿ, ಗ್ರಾಹಕರು ಕನಿಷ್ಠ ಮೂರು ವರ್ಷಗಳವರೆಗೆ ಅದರಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಇದರರ್ಥ 25 ಪ್ರತಿಶತ ಮೊತ್ತವನ್ನು ಮೂರು ವರ್ಷಗಳ ನಂತರ ಯಾವಾಗ ಬೇಕಾದರೂ ಹಿಂಪಡೆಯಬಹುದು. ಇದೀಗ ನಾವು ಈ ಲೇಖನದಲ್ಲಿ ಮೊತ್ತವನ್ನು ಯಾವ ಸಂದರ್ಭದಲ್ಲಿ ಹಿಂಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

NPS Latest News Updates
Image Credit: News 18

ಈ ಸಂದರ್ಭಗಳಲ್ಲಿ ಮಾತ್ರ ಮೊತ್ತವನ್ನು ಹಿಂಪಡೆಯಲು ಸಾಧ್ಯ
•ಗ್ರಾಹಕರು ಮಕ್ಕಳ ಉನ್ನತ ಶಿಕ್ಷಣಕ್ಕೆ ಖರ್ಚು ಮಾಡಲು ಬಯಸಿದರೆ ಮೊತ್ತವನ್ನು ಹಿಂಪಡೆಯಬಹುದು.

•ಮಕ್ಕಳ ಮದುವೆಗೆ ಈ ಮೊತ್ತವನ್ನು ಹಿಂಪಡೆಯಬಹುದು.

Join Nadunudi News WhatsApp Group

•ನೀವು ಮನೆ ಖರೀದಿ, ಗೃಹ ಸಾಲ ಮರುಪಾವತಿ ಮತ್ತು ಇತರಕ್ಕಾಗಿ ಹಣವನ್ನು ಹಿಂಪಡೆಯಬಹುದು.

•ಗಂಭೀರ ಕಾಯಿಲೆ, ಚಿಕಿತ್ಸೆ ಮತ್ತು ಇತರ ವೈದ್ಯಕೀಯ ವೆಚ್ಚಗಳಿಗಾಗಿ ಈ ಮೊತ್ತವನ್ನು ಹಿಂಪಡೆಯಬಹುದು.

•ಯಾವುದೇ ತುರ್ತು ಸಂದರ್ಭದಲ್ಲೂ ಶೇ 25ರಷ್ಟು ಮೊತ್ತವನ್ನು ಹಿಂಪಡೆಯಬಹುದು.

•ಈ ಮೊತ್ತವನ್ನು ಯಾವುದೇ ರೀತಿಯ ವ್ಯಾಪಾರ ಅಥವಾ ಸ್ಟಾರ್ಟ್ ಅಪ್ ಪ್ರಾರಂಭಿಸಲು ಬಳಸಬಹುದು.

Join Nadunudi News WhatsApp Group