Nripendra Misra: ಈ ಒಂದು ಕಾರಣಕ್ಕೆ ಅಂದು 2000 ರೂ ನೋಟು ಪ್ರಿಂಟ್ ಮಾಡಿದ್ದರಂತೆ ಮೋದಿ, ಇದು ಮೋದಿ ಟ್ರಿಕ್.
ನರೇಂದ್ರ ಮೋದಿಯವರು ಯಾವ ಕಾರಣಕ್ಕೆ ಎರಡು ಸಾವಿರ ರೂಪಾಯಿ ನೋಟುಗಳನ್ನ ಬ್ಯಾನ್ ಮಾಡಿದರು ಎಂದು ತಿಳಿಸಿದ್ದಾರೆ ನ್ರಿಪೇಂದ್ರ ಮಿಶ್ರ.
Note Ban Reason Of Narendra Modi: ಇದೀಗ ದೇಶದೆಲ್ಲೆಡೆ 2000 ನೋಟ್ ಬ್ಯಾನ್ ಆಗುವ ಸುದ್ದಿ ವೈರಲ್ ಆಗುತ್ತಿದೆ. ಕೇಂದ್ರದ ಆದೇಶದ ಮೇರೆಗೆ 2000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಲು ಆರ್ ಬಿಐ ಘೋಷಣೆ ಹೊರಡಿಸಿದೆ.
ಇನ್ನು 2000 ನೋಟುಗಳನ್ನು ಹೊಂದಿರುವ ಜನರಿಗೆ ಸೆಪ್ಟೆಂಬರ್ 30 2023 ರ ತನಕ ವಿನಿಮಯ ಪ್ರಕ್ರಿಯೆಗೆ ಸಮಯಾವಕಾಶ ನೀಡಲಾಗಿದೆ. ಇನ್ನು ಮೋದಿ ಅವರ ನೋಟ್ ಬ್ಯಾನ್ ಪ್ರಕ್ರಿಯೆಯನ್ನು ದೇಶದ ಕೆಲ ನಾಗರಿಕರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಟೀಕಿಸುತ್ತಿದ್ದಾರೆ.
ಮೋದಿ ಅವರು 2000 ನೋಟು ಬ್ಯಾನ್ ಮಾಡಲು ಕಾರಣವೇನು
ಮಾಜಿ ಪ್ರದಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರ ಅವರು ನರೇಂದ್ರ ಮೋದಿ (Narendra Modi) ಅವರು ಯಾವ ಕಾರಣಕ್ಕೆ 2000 ನೋಟುಗಳನ್ನು ಬ್ಯಾನ್ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
‘2000 ನೋಟುಗಳು ಪ್ರಧಾನಿ ಅವರಿಗೆ ಇಷ್ಟವಾಗಿಲ್ಲದ ಕಾರಣ 2000 ರೂ. ನೋಟುಗಳನ್ನು ಬ್ಯಾನ್ ಮಾಡಿದ್ದಾರೆ’ ಎನ್ನುವ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.
2000 ನೋಟುಗಳು ವಿಶೇಷ ಸಂದರ್ಭಗಳಲ್ಲಿ ತತ್ಕಾಲಿಕ ವ್ಯವಸ್ಥೆ ಎಂಬುವುದು ಪ್ರಧಾನಿ ಮೋದಿಯವರ ಚಿಂತನೆ ಮೊದಲಿನಿಂದಲೂ ಇತ್ತು. 2000 ನೋಟುಗಳು ವಿಶೇಷವಾಗಿ ಬಡವರಿಗೆ ವ್ಯವಹಾರ ಮಾಡಲು ಪ್ರಯೋಗಿಕವಾಗಿಲ್ಲ. 2000 ರೂ. ನೋಟುಗಳನ್ನು ದೀರ್ಘಕಾಲದವರೆಗೆ ಚಲಾವಣೆಯಲ್ಲಿ ಇಡುವುದರಿಂದ ಕಪ್ಪು ಹಣ ಹೆಚ್ಚಾಗುತ್ತದೆ.
ಹಾಗೆಯೆ ತೆರಿಗೆ ವಂಚನೆ ಆಮಿಷ ಒಡ್ಡುತ್ತದೆ. ಈ ಕಾರಣಕ್ಕಾಗಿ ಸಾರ್ವಜನಿಕ ಹಿತಾಸಕ್ತಿಯಿಂದ 2000 ರೂ. ನೋಟು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಜಿ ಪ್ರದಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರ ಅವರು ಹೇಳಿದ್ದಾರೆ.