Credit Card Number: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಇನ್ನೊಂದು ಹೊಸ ಸೇವೆ, ಇನ್ನುಮುಂದೆ ಬಳಸಿ ನಂಬರ್ ಇಲ್ಲದ ಕ್ರೆಡಿಟ್ ಕಾರ್ಡ್.

ನಂಬರ್ ಇಲ್ಲದ Credit Card ಅನ್ನು ಬಳಕೆಗೆ ತರಲು ಸಿದ್ದತೆ ನಡೆಯುತ್ತಿದೆ.

Numberless Credit Card: ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಸೌಲಭ್ಯವನ್ನು ನೀಡುತ್ತದೆ. ಕ್ರೆಡಿಟ್ ಕಾರ್ಡ್ ಬಳಕೆದಾರರು ವಿವಿಧ ಪಾವತಿಯ ಸೌಲಭ್ಯವನ್ನು ಪಡೆಯುತ್ತಾರೆ. ಇತ್ತೀಚಿಗೆ ಬ್ಯಾಂಕ್ Credit Card  ನಿಯಮಗಳನ್ನು ಬದಲಾಯಿಸುತ್ತಿವೆ. ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಯಾವುದೇ ರೀತಿಯಲ್ಲಿ ತಪ್ಪು ಕಂಡು ಬಂದರು ಕೂಡ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅನೇಕ ರೀತಿಯ ರಿಯಾಯಿತಿಗಳನ್ನು ನೀಡಲಾಗುತ್ತಾದೆ. ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ವಿತರಣಾ ಕಂಪನಿಗಳು ಹಾಗೂ ಇನ್ನಿತರ ಬ್ರಾಂಡ್ ಗಳ ಬಳಕೆಯ ಮೇಲೆ ರಿಯಾಯಿತಿಯನ್ನು ನೀಡಲಾಗುತ್ತದೆ. ಹೀಗಾಗಿ ಹೆಚ್ಚಿನ ಜನರು ಕ್ರೆಡಿಟ್ ಕಾರ್ಡ್ ಗಳನ್ನೂ ಬಳಸುತ್ತಾರೆ. ಇದೀಗ Credit Card ಹೊಸ ರೂಪದಲ್ಲಿ ಬಳಕೆಗೆ ಸಿಗಲಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Numberless Credit Card Latest
Image Credit: Housing

ಬಳಕೆಗೆ ಸಿಗಲಿದೆ ನಂಬರ್ ಇಲ್ಲದ ಕ್ರೆಡಿಟ್ ಕಾರ್ಡ್
ದೇಶದ ಜನಪ್ರಿಯ ಖಾಸಗಿ ಬ್ಯಾಂಕ್ ಆದ Axis Bank ಹಾಗೂ Fibe Fintech ಜೊತೆಯಾಗಿ ಇದೀಗ Credit Card ಅನ್ನು ವಿಶೇಷ ರೂಪದಲ್ಲಿ ಪರಿಚಯಿಸಲು ಸಿದ್ದತೆ ನಡೆಸುತ್ತಿದೆ. ಯಾವುದೇ ನಂಬರ್ ಇಲ್ಲದ Credit Card ಅನ್ನು ಬಳಕೆಗೆ ತರಲು ಈ ಎರಡು ಸಂಸ್ಥೆ ಪಣ ತೊಟ್ಟಿದೆ. ಈ ಬಳಕೆಗೆ ಬಂದರೆ ಭಾರತದ ಮೊದಲ ಸಂಖ್ಯಾರಹಿತ ಕ್ರೆಡಿಟ್ ಕಾರ್ ಎಂದು ಗುರುತಿಸಲ್ಪಡುತ್ತದೆ. ಸಂಖ್ಯಾ ರಹಿತ ಕ್ರೆಡಿಟ್ ಕಾರ್ಡ್ ನಲ್ಲಿ ಈ ಎಲ್ಲಾ ಮಾಹಿತಿ ಇರುವುದಿಲ್ಲ.

Numberless Credit Card
*ಈ ಕಾರ್ಡ್ RuPay ನಿಂದ ಚಾಲಿತವಾಗಿದೆ.

*ಇದು ಗ್ರಾಹಕರು ಈ ಕ್ರೆಡಿಟ್ ಕಾರ್ಡ್ ಅನ್ನು UPI ಗೆ ಲಿಂಕ್ ಮಾಡಲು ಅನುಮತಿಸುತ್ತದೆ.

Join Nadunudi News WhatsApp Group

*ಎಲ್ಲಾ ಡಿಜಿಟಲ್ ಪ್ಲಾಟ್‌ ಫಾರ್ಮ್‌ ಗಳು ಮತ್ತು ಎಲ್ಲಾ ಆಫ್‌ ಲೈನ್ ಸ್ಟೋರ್‌ ಗಳಲ್ಲಿ ಕಾರ್ಡ್ ಅನ್ನು ಸ್ವೀಕರಿಸಲಾಗುತ್ತದೆ.

Numberless Credit Card
Image Credit: Entrepreneur

*ಇದು ಹೆಚ್ಚುವರಿ ಅನುಕೂಲಕ್ಕಾಗಿ ಟ್ಯಾಪ್ ಮತ್ತು ಪೇ ವೈಶಿಷ್ಟ್ಯವನ್ನು ಸಹ ನೀಡುತ್ತದೆ.

*ಈ ಕಾರ್ಡ್ ಶೂನ್ಯ ಆರಂಭಿಕ ಶುಲ್ಕ ಮತ್ತು ಶೂನ್ಯ ವಾರ್ಷಿಕ ಶುಲ್ಕವನ್ನು ಹೊಂದಿದೆ.

*Card Number, CVV Number, Cardholder Name, Card Due Date ನ ಮಾಹಿತಿ ಕಾರ್ಡ್ ನಲ್ಲಿ ಲಭ್ಯವಾಗುವುದಿಲ್ಲ.

*ಕಾರ್ಡ್ ಕಳುವಾದರೆ ಕಾರ್ಡ್ ನಲ್ಲಿ ಯಾವುದೇ ಮಾಹಿತಿ ಇಲ್ಲದಿರುವ ಕಾರಣ ಹೆಚ್ಚಿನ ತೊಂದರೆಯನ್ನು ಕಡಿಮೆ ಮಾಡುತ್ತದೆ.

Join Nadunudi News WhatsApp Group