Oben Rorr: 187km ಮೈಲೇಜ್ ನೀಡಲಿದೆ ಈ ಸ್ಪೋರ್ಟಿ EV ಬೈಕ್, ಕೇವಲ 5361 ರೂ. ಗಳ EMI ನಲ್ಲಿ ಖರೀದಿ ಮನೆಗೆ ತನ್ನಿ.
187 Km ಮೈಲೇಜ್ ಕೊಡುವ ಈ ಬೈಕ್ ಅನ್ನು ಕಡಿಮೆ EMI ನಲ್ಲಿ ಬುಕ್ ಮನೆಗೆ ತರಬಹುದು.
Oben Rorr Electric Bike: ಭಾರತದಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಲೇ ಇದೆ. ಇತ್ತೀಚಿಗಂತೂ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಗಳ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದೆ. ಗ್ರಾಹಕರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.
ಸದ್ಯ ಆಟೋ ವಲಯದಲ್ಲಿ ಒಬೆನ್ ರೋರ್ (Oben Rorr) ಎಲೆಕ್ಟ್ರಿಕ್ ಕಂಪನಿ ಇತ್ತೀಚಿಗೆ ತನ್ನ ಎಲೆಕ್ಟ್ರಿಕ್ ಬೈಕ್ ಒಬೆನ್ ರೋರ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವ ಮೂಲಕ ಇನ್ನಿತರ ಎಲೆಕ್ಟ್ರಿಕ್ ಮಾದರಿಗಳಿಗೆ ಬಾರಿ ಪೈಪೋಟಿ ನೀಡಿದೆ. ಈ ಬೈಕ್ ವಿಶೇಷವಾಗಿ ಪ್ರಭಾವಶಾಲಿ ಶ್ರೇಣಿಯ 187 ಕಿಲೋಮೀಟರ್ ಮತ್ತು ಗಂಟೆಗೆ 100 ಕಿಲೋಮೀಟರ್ ಗಳ ಗರಿಷ್ಠ ವೇಗದಿಂದಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಇದೀಗ ನಾವು Oben Rorr Electric Bike ನ ಸಂಪೂರ್ಣ ವಿವರ ತಿಳಿಯೋಣ.
Oben Rorr Electric Bike
ಶಕ್ತಿಯುತ ಮತ್ತು ಆಧುನಿಕ ವೈಶಿಷ್ಟ್ಯತೆಗಳನ್ನು Oben Rorr Electric Bike ಹೊಂದಿದ್ದು, ಎಲೆಕ್ಟ್ರಿಕ್ ಬೈಕ್ ಬಲವಾದ ಕಾರ್ಯಕ್ಷಮತೆಯ ಮೂಲಕ ಗ್ರಾಹಕರಿಗೆ ಇಷ್ಟವಾಗಲಿದೆ. ಈ ಬೈಕಿನ ಮೋಟಾರ್ ಮತ್ತು ಬ್ಯಾಟರಿಯು 3 ವರ್ಷಗಳ ಉಚಿತ ಸೇವಾ ವಾರಂಟಿಯಿಂದ ಕೂಡಿದೆ. ಒಬೆನ್ ರೋರ್ ಎಲೆಕ್ಟ್ರಿಕ್ ಬೈಕ್ ಅನ್ನು ಕೇವಲ 2 ಗಂಟೆಗಳಲ್ಲಿ ಅದನ್ನು ಚಾರ್ಜ್ ಮಾಡಬಹುದು. ಓಬೆನ್ ರೋರ್ 1,423 ಎಂಎಂ ಉದ್ದದ ಚಕ್ರವನ್ನು ಹೊಂದಿದೆ ಮತ್ತು 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.
187km ಮೈಲೇಜ್ ನೀಡಲಿದೆ ಈ ಸ್ಪೋರ್ಟಿ EV ಬೈಕ್
ಇನ್ನು 4 .4kWh ಬ್ಯಾಟರಿ ಪ್ಯಾಕ್ ನಿಂದ ಒಬೆನ್ ರೋರ್ ಎಲೆಕ್ಟ್ರಿಕ್ ಬೈಕ್ 187 ಕಿಮೀ ಗಳವರೆಗೆ ಪ್ರಭಾವಶಾಲಿ ದೂರವನ್ನು ಕ್ರಮಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ವಿಭಿನ್ನ ರೈಡಿಂಗ್ ಮೋಡ್ ಗಳೊಂದಿಗೆ ಇಕೋ, ಸಿಟಿ ಮತ್ತು ಹ್ಯವೋಕ್ ಆಯ್ಕೆಗಳನ್ನು ನೀಡುತ್ತದೆ. ಈ ಬೈಕ್ ಕ್ರಮವಾಗಿ 50 Kmph, 70kmph ಮತ್ತು 100 kmph ಅನ್ನು ತಲುಪುತ್ತದೆ. ಬೈಕ್ ನ ವೇಗವಾದ ವೇಗವರ್ಧನೆಯು ಬೈಕ್ ಕೇವಲ 3 ಸೆಕೆಂಡುಗಳಲ್ಲಿ 40 kmph ತಲುಪಲು ಅನುಮತಿಸುತ್ತದೆ.
ಕೇವಲ 5361 ರೂ. ಗಳ EMI ನಲ್ಲಿ ಖರೀದಿಸಬಹುದಾದ ಬೈಕ್
ಓಬೆನ್ ರೋರ್ 37 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಮತ್ತು ಸೀಟ್ ಟೈರ್ ಗಳೊಂದಿಗೆ 17-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿದ್ದು ಆಕರ್ಷಕ ಲುಕ್ ಹೊಂದಿದೆ. ಇನ್ನು Oben Rorr Electric ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 1.49 ರಿಂದ 1.84 ಲಕ್ಷ ರೂ. ಆಗಿದೆ. ಇನ್ನು ಕಂಪನಿಯು ಈ ಬೈಕ್ ಖರೀದಿಗೆ ಗ್ರಾಹಕರಿಗೆ ಖರೀದಿಗೆ ಸಹಾಯವಾಗಲು EMI ಆಯ್ಕೆಯನ್ನು ನೀಡಿದ್ದು ಮಾಸಿಕ ಕೇವಲ 5361 ರೂ. ಗಳ EMI ಪಾವತಿಸುವ ಮೂಲಕ ಈ ಸ್ಪೋರ್ಟಿ EV ಬೈಕ್ ನಿಮ್ಮದಾಗಿಸಿಕೊಳ್ಳಬಹುದು.