Electric Bikes: KTM ಗಿಂತ ಅರ್ಧಬೆಲೆಯ ಈ ಬೈಕ್ ಖರೀದಿಸುತ್ತಿದ್ದಾರೆ ಜನ, 187Km ಮೈಲೇಜ್ ಗ್ಯಾರಂಟಿ
ಒಂದೇ ಚಾರ್ಜ್ ನಲ್ಲಿ 187 ಕಿಲೋಮೀಟರ್ ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಕ್ ಬಿಡುಗಡೆ.
Oben Rorr Electric Bike: ಮಾರುಕಟ್ಟೆಯಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳ ಹಾವಳಿ ಹೆಚ್ಚುತ್ತಿದೆ. ವಿವಿಧ ಪ್ರತಿಷ್ಠಿತ ಕಂಪನಿಗಳು ಹಲವು ಮಾದರಿಯ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುತ್ತಿವೆ. ಓಲಾ, ಟಿವಿಎಸ್, ಬಜಾಜ್ ಸೇರಿದಾಂತೆ ಇನ್ನಿತರ ಕಂಪನಿಗಳು ವಿಭಿನ್ನ ವಿನ್ಯಾಸದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.ಇದೀಗ ಬೆಂಗಳೂರು ಮೂಲದ ಹೊಸ ಕಂಪನಿ ಓಬೆನ್ ರೋರ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ.
ಓಬೆನ್ ರೋರ್ ಎಲೆಕ್ಟ್ರಿಕ್ ಸ್ಕೂಟರ್
ಇದೀಗ ಓಬೆನ್ ರೋರ್ (Oben Rorr Electric) ಕಂಪನಿಯು ವಿಭಿನ್ನ ವಿನ್ಯಾಸದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಇನ್ನು ಈ ಬೈಕ್ ಜುಲೈ ಅಂತ್ಯದಲ್ಲಿ ಖರೀದಿಗೆ ಲಭ್ಯವಿದೆ ಎನ್ನುವ ವರದಿಯಾಗಿದೆ. ಈ ಬೈಕ್ ನಲ್ಲಿ ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದ್ದು, ಒಂದೇ ಚಾರ್ಜ್ ನಲ್ಲಿ 187 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ಕೇವಲ 2 ರಿಂದ 3 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಇನ್ನು 80 ಪ್ರತಿಶತ ಚಾರ್ಜ್ ಕೇವಲ 2 ಗಂಟೆಗಳಲ್ಲಿ ಆಗಲಿದೆ.
ಓಬೆನ್ ರೋರ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ
ಈ ಓಬೆನ್ ರೋರ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಲಿಥಿಯಂ ಪ್ಯಾಸ್ಟೆಟ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇನ್ನು 12 .3 bhp ಪವರ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಬೈಕ್ 100 ಕಿಲೋಮೀಟರ್ ಗರಿಷ್ಟ ವೇಗವನ್ನು ಹೊಂದಿದೆ. ಇನ್ನು ಈ ಬೈಕ್ ನಲ್ಲಿ ಚಾಲಕರ ಸುರಕ್ಷತೆಗಾಗಿ ಉತ್ತಮ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಮೊಬೈಲ್‌ಗೆ ಸಂಪರ್ಕಿಸಬಹುದಾದ ಮತ್ತು ಜಿಯೋ ಫೇಸಿಂಗ್ ಮತ್ತು ಡ್ರೈವರ್ ಅಲರ್ಟ್ ಸಿಸ್ಟಮ್ ನಂತಹ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಕೇವಲ 5500 ರೂ. ಖರೀದಿಸಬಹುದಾದ ಎಲೆಕ್ಟ್ರಿಕ್ ಸ್ಕೂಟರ್
ಇನ್ನು ಈ ಬೈಕ್ ನ ಎರಡು ಚಕ್ರದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಓಬೆನ್ ರೋರ್ ಎಲೆಕ್ಟ್ರಿಕ್ ಸ್ಕೂಟರ್ ನ ಎಕ್ಸ್ ಶೋ ರೂಮ್ ಬೆಲೆ 1 .49 ಲಕ್ಷ ರೂ. ಆಗಿದೆ. ಇನ್ನು ಈ ಬೆಲೆಯೂ ನಿಮಗೆ ಅಧಿಕವೆನಿಸಿದರೆ ಕಂಪನಿಯು ಹಣಕಾಸಿನ ಯೋಜನೆಯನ್ನು ನೀಡುತ್ತಿದೆ. ಕೇವಲ 30000 ರೂ. ಮುಂಗಡ ಪಾವತಿಸುವ ಮೂಲಕ ಈ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇನ್ನು ಈ ಬೈಕ್ ಖರೀದಿಯ ಮೇಲೆ EMI ಆಯ್ಕೆ ಕೂಡ ಲಭ್ಯವಿದ್ದು, ಮಾಸಿಕ 5500 ರೂ.ಪಾವತಿಸುವ ಮೂಲಕ ಈ ಬೈಕ್ ಅನ್ನು ಖರೀದಿಸಬಹುದಾಗಿದೆ.