Gold News: ನವರಾತ್ರಿ ಕೊನೆಯ ದಿನವೂ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ನವರಾತ್ರಿಗೆ ಚಿನ್ನದ ವಹಿವಾಟು ಕುಸಿತ.
ನವರಾತ್ರಿ ಕೊನೆಯ ದಿನ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.
October 24th Gold Price: ಮಾರುಕಟ್ಟೆಯಲ್ಲಿ ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ (Gold Price) ಹೆಚ್ಚಿನ ವ್ಯತ್ಯಾಸ ಕಂಡು ಬರುತ್ತಿದೆ. ದೇಶದಲ್ಲಿ ಹಬ್ಬದ ಸಂಭ್ರಮ ಹೆಚ್ಚಿದ್ದರೂ ಈ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ.
ಜನರು ಹೆಚ್ಚಾಗಿ ಹಬ್ಬದ ಸೀಸನ್ ನಲ್ಲಿ ಚಿನ್ನವನ್ನು ಖರೀದಿಸಲು ಇಷ್ಟಪಡುತ್ತಾರೆ. ಅದರಲ್ಲೂ ಮಹಿಳೆಯರು ಹಬ್ಬದ ಕಾರ್ಯಕ್ರಮಗಳಿಗೆ ಒಡವೆಗಳನ್ನು ಧರಿಸಿ ಹೋಗುವುದೆಂದರೆ ಅವರಿಗೆ ಏನೋ ಖುಷಿ. ಹೀಗಾಗಿ ದಸರಾ ಹಾಗೂ ದೀಪಾವಳಿಯ ಸಮಯದಲ್ಲಿ ಚಿನ್ನದ ಬೇಡಿಕೆ ಹೆಚ್ಚಿರುತ್ತದೆ.
ಸತತ ನಾಲ್ಕನೇ ವಾರದಲ್ಲೂ ಚಿನ್ನದ ಬೆಲೆಯ್ಲಲಿ ಏರಿಕೆ
ಸದ್ಯ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುವ ಕಾರಣ ಚಿನ್ನದ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನಬಹುದು. ಸತತ ಎರಡು ವಾರಗಳಿಂದ ಚಿನ್ನದ ಬೆಲೆ ಹೆಚ್ಚುತ್ತಿದೆ. ಇದೀಗ ತಿಂಗಳ ನಾಲ್ಕನೇ ವಾರವೂ ಕೂಡ ಚಿನ್ನದ ಬೆಲೆ ಏರಿಕೆಯತ್ತ ಸಾಗುತ್ತಿದೆ. ಸತತ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಮತ್ತೆ 6,000 ಗಡಿ ದಾಟಲು ಹತ್ತಿರವಾಗುತ್ತಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯನ್ನು ಈಗಾಗಲೇ 6,000 ಗಡಿ ದಾಟಿದೆ. ಇಂದು ಕೊಡ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 200 ರೂ. ಏರಿಕೆಯಾಗಿದೆ.
ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ..?
*ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,635 ರೂ. ಇದ್ದು, ಇಂದು 20 ರೂ. ಏರಿಕೆಯ ಮೂಲಕ 5665 ರೂ. ತಲುಪಿದೆ.
*ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 45,080 ರೂ. ಇದ್ದು, ಇಂದು 160 ರೂ. ಏರಿಕೆಯ ಮೂಲಕ 45,240 ರೂ. ತಲುಪಿದೆ.
*ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 56,350 ರೂ. ಇದ್ದು, ಇಂದು 200 ರೂ. ಏರಿಕೆಯ ಮೂಲಕ 56,650 ರೂ. ತಲುಪಿದೆ.
*ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,63,500 ರೂ. ಇದ್ದು, ಇಂದು 2,000 ರೂ. ಏರಿಕೆಯ ಮೂಲಕ 5,66,500 ರೂ. ತಲುಪಿದೆ.
ಇಂದು 24 ಕ್ಯಾರೆಟ್ ಚಿನ್ನ 6000 ಗಡಿ ದಾಟಿದೆ
*ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 6,145 ರೂ. ಇದ್ದು, ಇಂದು 24 ರೂ. ಏರಿಕೆಯ ಮೂಲಕ 6,169 ರೂ. ತಲುಪಿದೆ.
*ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 48,160 ರೂ. ಇದ್ದು, ಇಂದು 192 ರೂ. ಏರಿಕೆಯ ಮೂಲಕ 49,352 ರೂ. ತಲುಪಿದೆ.
*ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 61,450 ರೂ. ಇದ್ದು, ಇಂದು 240 ರೂ. ಏರಿಕೆಯ ಮೂಲಕ 61,690 ರೂ. ತಲುಪಿದೆ.
*ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 6,14,500 ರೂ. ಇದ್ದು, ಇಂದು 2,400 ರೂ. ಏರಿಕೆಯ ಮೂಲಕ 6,16,900 ರೂ. ತಲುಪಿದೆ.