ದೇಶದಲ್ಲಿ ಕರೋನ ಮಹಾಮಾರಿ ಬಿಟ್ಟರೆ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಅದೂ ಕಳೆದ ಮೂರೂ ದಿನಗಳಿಂದ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಚಿನ್ನದ ಬೆಲೆ ಕಳೆದ ಮೂರೂ ದಿನಗಳಿಂದ ಭರ್ಜರಿ ಏರಿಕೆ ಕಂಡಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಬಹುದು. ಕಳೆದ ತಿಂಗಳ ಅಂತ್ಯದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಾಣುವುದರ ಮೂಲಕ ಜನರ ಖುಷಿಗೆ ಕಾರಣವಾಗಿದ್ದ ಚಿನ್ನದ ಬೆಲೆ ಈಗ ಮೂರೂ ದಿನಗಳಿಂದ ಭಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಂಡಿದ್ದು ಜನರು ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಹಾಗಾದರೆ ದೇಶದಲ್ಲಿ ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿನ್ನದ ಬೆಲೆಯಲ್ಲಿ ಈ ಭಾರಿ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ಕಳೆದ ಮೂರೂ ದಿನಗಳಲ್ಲಿ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 95 ರೂಪಾಯಿ ಏರಿಕೆ ಆಗಿದ್ದು ಪ್ರಸ್ತುತ ಚಿನ್ನದ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 4395 ರೂಪಾಯಿ ಆಗಿದೆ. ಕಳೆದ ತಿಂಗಳ ಅಂತ್ಯದಲ್ಲಿ 4300 ರೂಪಾಯಿ ಇದ್ದ ಚಿನ್ನದ ಬೆಲೆ ಇಂದು 4395 ಆಗಿದ್ದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 95 ರೂಪಾಯಿ ಏರಿಕೆ ಆಗಿದೆ ಎಂದು ಹೇಳಬಹುದು.
ಕೆಲವು ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಆಗುವ ಎಲ್ಲಾ ಲಕ್ಷಣಗಳು ಇದ್ದು ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆ 4500 ರೂಪಾಯಿಯ ಗಡಿಗೆ ಹೋಗುವ ಸಾಧ್ಯತೆ ಬಹುತೇಕ ಇದೆ ಎಂದು ತಜ್ಞರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಚಿನ್ನದ ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 43950 ರೂಪಾಯಿ ಆಗಿದ್ದು ಒಂದು ಪವನ್ ಚಿನ್ನದ ಬೆಲೆ ಅಂದರೆ ಎಂಟು ಗ್ರಾಂ ಚಿನ್ನದ ಬೆಲೆ 35160 ರೂಪಾಯಿ ಆಗಿದೆ. ಕಳೆದ ಮೂರೂ ದಿನಗಳಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 950 ರೂಪಾಯಿ ಏರಿಕೆ ಆಗಿದ್ದು ನೂರು ಗ್ರಾಂ ಚಿನ್ನದ ಬೆಲೆ 9500 ರೂಪಾಯಿ ಏರಿಕೆ ಆಗಿದೆ ಎಂದು ಅಂದಾಜು ಮಾಡಲಾಗಿದೆ.
ದೇಶದ ಷೇರು ಮಾರುಕಟ್ಟೆಯಲ್ಲಿನ ದಿಡೀರ್ ಬದಲಾವಣೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆದಕಾರಣ ದೇಶದಲ್ಲಿ ಕೂಡ ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಆಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಚಿನ್ನದ ತಜ್ಞರು ಹೇಳುತ್ತಿದ್ದಾರೆ. ಕಳೆದ ಮೂರೂ ದಿನಗಳಿಂದ ಚಿನ್ನದ ಬೆಲೆ ಪ್ರತಿದಿನ ಏರಿಕೆ ಕಾಣುತ್ತಿದ್ದು ಜನರು ಕೇಂದ್ರ ಸರ್ಕಾರಕ್ಕೆ ಶಾಪವನ್ನ ಕೂಡ ಹಾಕುತ್ತಿದ್ದಾರೆ ಎಂದು ಹೇಳಬಹುದು. ಚಿನ್ನದ ಬೆಲೆ ಏರಿಕೆ ಬಡಜನರ ನಿದ್ದೆ ಕೆಡಿಸಿದೆ. ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಈ ಭಾರಿ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಚಿನ್ನದ ಖರೀದಿ ಮಾಡುವ ಎಲ್ಲರಿಗೂ ತಲುಪಿಸಿ.