Money Credit: ಹಲವು ಜನರ ಬ್ಯಾಂಕ್ ಖಾತೆಗೆ ಬಂದಿದೆ ಲಕ್ಷ ಲಕ್ಷ ಹಣ, ನಿಮ್ಮ ಖಾತೆಗೂ ಬಂದಿರಬಹುದು ಈಗಲೇ ಚೆಕ್ ಮಾಡಿ.
ಅಪರಿಚಿತ ಮೂಲಗಳಿಂದ ಜನರ ಬ್ಯಾಂಕ್ ಲಕ್ಷ ಲಕ್ಷ ಹಣ ಜಮಾ.
Odisha Gramya Bank: ಬ್ಯಾಂಕ್ ವ್ಯವಹಾರ (Bank Business) ಈಗ ಬಹಳ ಸುಲಭವಾಗಿ ನಡೆಯುತ್ತಿದೆ ಎಂದು ಹೇಳಬಹುದು. ಹೌದು ಇಂಟರ್ನೆಟ್ ಬ್ಯಾಂಕಿಂಗ್ (Internet Banking, ಮೊಬೈಲ್ ಬ್ಯಾಂಕಿಂಗ್ (Mobile Banking) ಸೇರಿದಂತೆ ಹಲವು ಬ್ಯಾಂಕಿಂಗ್ ಸೇವೆಗಳು ಜಾರಿಯಲ್ಲಿ ಇದ್ದು ಜನರು ಬ್ಯಾಂಕ್ ಸೇವೆಯನ್ನ ಬಹಳ ಚನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಇದರ ನಡುವೆ ಕೆಲವು ಅಪರಿಚಿತ ಮೂಲಗಳಿಂದ ಕೆಲವು ಬ್ಯಾಂಕ್ ಖಾತೆಗೆ (Bank Account) ಹಣ ಜಮಾ ಆಗುತ್ತದೆ. ಕೆಲವು ಹಣ ನಮಗೆ ತಿಳಿಯದಂತೆ ಜಮಾ ಆಗಿ ನಂತರ ಬ್ಯಾಂಕಿನವರು ಆ ಹಣವನ್ನ ಪಡೆದುಕೊಳ್ಳುತ್ತಾರೆ. ಇನ್ನು ಈಗ ದೇಶದ ಸಾವಿರಾರು ಜನರ ಖಾತೆಗೆ ಲಕ್ಷ ಲಕ್ಷ ಹಣ ಜಮಾ ಆಗಿದ್ದು ಈ ಹಣ ಯಾವ ಮೂಲಗಳಿಂದ ಬಂದಿದೆ ಎಂದು ಜನರು ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಹೇಳಬಹುದು.
ಒಡಿಶಾ ಗ್ರಾಮೀಣ ಬ್ಯಾಂಕ್ ಹೊರಗೆ ಸರತಿ ಸಾಲು
ಇದೀಗ ಒಡಿಶಾ ದಲ್ಲಿ ಸಾವಿರಾರು ಜನರ ಖಾತೆಗೆ ಲಕ್ಷಾಂತರ ಹಣ ಜಮಾ ಆಗಿದೆ. ಕೆಲವರ ಅಕೌಂಟ್ ಗೆ 30 ಸಾವಿರ, 40 ಸಾವಿರ, ಇನ್ನು ಕೆಲವರ ಖಾತೆಗೆ 50 ಸಾವಿರ ಜಮಾ ಆಗಿದೆ. ಅಷ್ಟೇ ಅಲ್ಲದೆ ಇನ್ನು ಕೆಲವರ ಖಾತೆಗೆ 1 ರಿಂದ 2 ಲಕ್ಷ ರೂ ಗಾಲ ವರೆಗೆ ಜಮಾ ಮಾಡಲಾಗಿದೆ. ಈ ಹಣವನ್ನು ಜನರು ತಮ್ಮ ಖಾತೆಯಿಂದ ಹೊರ ತೆಗೆಯಲು ಬ್ಯಾಂಕ್ ನ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಇನ್ನು ಬ್ಯಾಂಕಿನ ಕಡೆಯಿಂದ ತನಿಖೆ ನೆಡೆಯುತ್ತಿದೆ
Bank Account ಗೆ ಹಣ ಬಂದಿರುದರಿಂದ ಗ್ರಾಹಕರು ತುಂಬ ಸಂತೋಷಗೊಂಡಿದ್ದಾರೆ. ಆದರೆ ಬ್ಯಾಂಕ್ ಮುಂದೆ ಸರತಿ ಸಾಲು ನೋಡಿ Bank Manager ದಿಗ್ಬ್ರಮೆಗೊಂಡಿದ್ದಾರೆ. ಮಾಧ್ಯಮ ಸಂವಾದದಲ್ಲಿ ಬ್ಯಾಂಕ್ ವ್ಯವಸ್ಥಾಪಕರು 300 ಖಾತೆಗಳನ್ನು ಪರಿಶೀಲಿಸಿದ್ದೇವೆ ಆದರೆ ಹಣ ಯಾವ ಮೂಲದಿಂದ ಬಂದಿದೆ ಎಂದು ತಿಳಿದು ಬಂದಿಲ್ಲ.
ಗ್ರಾಹಕರು ಹಣ ಬಂದಿರುವ ಖುಷಿಗೆ ಖಾತೆಗಳಿಂದ ಹಣವನ್ನು ಹಿಂಪಡೆಯುತ್ತಿದ್ದಾರೆ. ಬ್ಯಾಂಕ್ ಕಡೆಯಿಂದ ಇನ್ನು ತನಿಖೆ ನೆಡೆಯುತ್ತಿದೆ ಮತ್ತು ಹಣವನ್ನು ಈ ಖಾತೆಗಳಿಗೆ ಹೇಗೆ ಮತ್ತು ಏಕೆ ಜಮಾ ಮಾಡಲಾಗಿದೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಒಡಿಶಾ ಗ್ರಾಮ್ಯ ಬ್ಯಾಂಕ್(Odisha Gramya Bank)
ಒಡಿಶಾ ಗ್ರಾಮ್ಯ ಬ್ಯಾಂಕ್ ಸರ್ಕಾರೀ ಬ್ಯಾಂಕ್ ಆಗಿದ್ದು ಒಡಿಶಾದಲ್ಲಿ ಬಹಳ ಜಪ್ರಿಯತೆಯನ್ನು ಪಡೆದಿದೆ. ಬ್ಯಾಂಕ್ ದೇಶದಲ್ಲಿ 549 ಶಾಖೆಗಳನ್ನು ಹೊಂದಿದ್ದು, 155 ATM 2340 ಉದ್ಯೋಗಿಗಳನ್ನು ಹೊಂದಿದೆ. ಬ್ಯಾಂಕ್ ನ ವೆಬ್ ಸೈಟ್ ನಲ್ಲಿ ನೀಡಿದ ಮಾಹಿತಿ ಪ್ರಕಾರ ಈ ಬ್ಯಾಂಕ್ 55 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಪಡೆದಿದೆ.