Okaya EV: ಸಿಂಗಲ್ ಚಾರ್ಜ್ ನಲ್ಲಿ 130 Km ರೇಂಜ್, ಬಡ ಜನರಿಗಾಗಿ ಅಗ್ಗದ ಬೆಲೆಗೆ ಇನ್ನೊಂದು ಎಲೆಕ್ಟ್ರಿಕ್ ಸ್ಕೂಟರ್.

ಉತ್ತಮ ಮೈಲೇಜ್ ನೀಡುವ ಸ್ಕೂಟರ್ ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಲಭ್ಯ.

Okaya Moto Fast EV Price In India: ಸದ್ಯ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಬಹಳ ಏರಿಕೆ ಆಗಿದ್ದು ಜನರು ಎಲೆಕ್ಟ್ರಿಕ್ ವಾಹನಗಳನ್ನ ಖರೀದಿಸಲು ಇಷ್ಟಪಡುತ್ತಿದ್ದಾರೆ. ಇನ್ನು ದೇಶದಲ್ಲಿ ಕೆಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ಕೊಡುವ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗಿ ಬಿಡುಗಡೆಗೊಳ್ಳುತ್ತಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಪ್ರಾಬಲ್ಯ ಹೊಂದಿದ್ದು ಪ್ರತಿದಿನ ಹೊಸ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆಯಾಗುತ್ತಲೇ ಇದೆ. ಇದೀಗ ಮಾರುಕಟ್ಟೆಯಲ್ಲಿ Okaya ಬ್ರಾಂಡ್ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಈ ಸ್ಕೂಟರ್ ಜನರಿಗೆ ಮೈಲೇಜ್ ವಿಷಯವಾಗಿ ಬಹಳ ಬೇಗ ಇಷ್ಟವಾಗಲಿದೆ.

Okaya Moto Fast EV Price
Image Credit: Business-standard

Okaya Moto Fast EV
ಸದ್ಯ ಮಾರುಕಟ್ಟೆಯಲ್ಲಿ Okaya ಕಂಪನಿಯು ತನ್ನ Okaya Moto Fast EV ಪರಿಚಯಿಸಲು ನಿರ್ಧರಿಸಿದೆ. ಸದ್ಯ October 17 ರಂದು ಭಾರತೀಯ ಮಾರುಕಟ್ಟೆಯಲ್ಲಿ Okaya Moto Fast EV ಗ್ರಾಂಡ್ ಎಂಟ್ರಿ ಕೊಡಲಿದೆ. ಈ ಬಗ್ಗೆ ಕಂಪನಿಯು ಅಧಿಕೃತವಾಗಿ ಘೋಷಣೆ ಹೊರಡಿಸಿದೆ. ಹೆಚ್ಚಿನ ವೇಗ ಮತ್ತು ಉತ್ತಮ ಮೈಲೇಜ್ ನೀಡುವ ಈ ಸ್ಕೂಟರ್ ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.

ಒಂದೇ ಚಾರ್ಜ್ ನಲ್ಲಿ 120km ಮೈಲೇಜ್ ನೀಡಲಿದೆ ಈ ಸ್ಕೂಟರ್
Okaya Moto Fast EV ಯಲ್ಲಿ ಶಕ್ತಿಶಾಲಿ ಬ್ಯಾಟರಿಯನ್ನು ಅಳವಡಿಸಲಾಗಿದೆ. ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 120 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಈ ನೂತನ EV ಹೊಂದಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಇನ್ನು 130 ಕಿಲೋಮೀಟರ್ ರೈಡಿಂಗ್ ಶ್ರೇಣಿಯನ್ನು ಹೊಂದಿದ್ದು, ಗಂಟೆಗೆ 60 ರಿಂದ 70 ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

Okaya Moto Faast EV
Image Credit: Economictimes

Okaya Moto Fast EV ಬೆಲೆ
ನೂತನ EV ಯಲ್ಲಿ LFP ಬ್ಯಾಟರಿಯನ್ನು ಅಳವಡಿಸಲಾಗಿದ್ದು ಕೇವಲ 2 ರಿಂದ 3 ಗಂಟೆಗಳಲ್ಲಿ ಸಾಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇನ್ನು Okaya Moto Fast EV ಗ್ರಾಹಕರಿಗೆ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಕಂಪನಿಯು ನೂತನ EV ಮಾರುಕಟ್ಟೆಯ ದರವನ್ನು ಕೂಡ ಬಹಿರಂಗಪಡಿಸಿದೆ. ಹತ್ತು ಹಲವು ವೈಶಿಷ್ಟ್ಯಗಳಿರುವ Okaya Moto Fast EV ಮಾರುಕಟ್ಟೆಯಲ್ಲಿ 1.50 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group