Ads By Google

Okinawa EV: ಇನ್ಮುಂದೆ ನಡೆಯಲ್ಲ ಓಲಾ ಮತ್ತು ಅಥೇರ್ ಆಟ, ಕೇವಲ 20 ಸಾವಿರಕ್ಕೆ 150 Km ರೇಂಜ್ ನ Ev ಲಾಂಚ್

Okinawa Dual 100 Electric Scooter price and feature

Image Credit: Original Source

Ads By Google

Okinawa Dual 100 Electric Scooter: ದೇಶಿಯ ಮಾರುಕಟ್ಟೆಯಲ್ಲಿ Electric Car ಹಾಗೂ Bike ಗಳಷ್ಟೇ Electric Scooter ಗಳು ಸಹ ಬೇಡಿಕೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಅಬ್ಬರ ಜೋರಾಗಿದೆ. ವಿವಿಧ ವಾಹನ ತಯಾರಕ ಕಂಪನಿಗಳು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸುತ್ತಿವೆ.

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ Electric Scooter ಗಳು ಪರಿಚಯವಾಗಿವೆ. ಇದೀಗ ಒಕಿನಾವಾ ಲೈಟ್ ಭಾರತದಲ್ಲಿ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿ ಆಗಿದ್ದು ಇದೀಗ ಕೈಗೆಟಕುವ ಬೆಲೆಯಲ್ಲಿ ಉತ್ತಮ ಕಾರ್ಯಕ್ಷಮತೆ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಬಿಡುಗಡೆ ಮಾಡಿದೆ. ಹಾಗಾದರೆ ನಾವೀಗ ಈ ಸ್ಕೂಟರ್ ನ ಬೆಲೆ ಎಷ್ಟು..? ಎಷ್ಟು Mileage ನೀಡುತ್ತದೆ..? ಯಾವೆಲ್ಲ ಫೀಚರ್ ಗಳನ್ನ ಒಳಗೊಂಡಿದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

Image Credit: Financialexpress

ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ನೀಡಲು ರೆಡಿಯಾಗಿದೆ ಈ ನೂತನ EV
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ Electric Scooter ಗಳಿಗೆ ನೇರ ಪೈಪೋಟಿ ನೀಡಲು ಇದೀಗ Okinawa Dual 100 ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಲಭ್ಯವಾಗಿದ್ದು, ಈ ಸ್ಕೂಟರ್ ಹೆಚ್ಚು ಮೈಲೇಜ್ ಹಾಗೂ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

ಒಕಿನಾವಾ ಡ್ಯುಯಲ್ 100 ದೃಢವಾದ 2500W ಮೋಟಾರ್‌ ನೊಂದಿಗೆ ಸಜ್ಜುಗೊಂಡಿದೆ, ಇದು 3000W ನ ಗರಿಷ್ಠ ವಿದ್ಯುತ್ ಉತ್ಪಾದನೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 3.12kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಅನ್ನು ಕೂಡ ಹೊಂದಿದೆ. ಈ ಸ್ಕೂಟರ್ ಗಂಟೆಗೆ 60 ಕಿಲೋಮೀಟರ್ ಗರಿಷ್ಠ ವೇಗ ನೀಡಲಿದ್ದು, ಒಂದೇ ಚಾರ್ಜ್‌ನಲ್ಲಿ 150 ಕಿಲೋಮೀಟರ್ ನೈಲೇಜ್ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

Image Credit: Pluginindia

ಕೇವಲ 20,000 ದಲ್ಲಿ ಸಿಗಲಿದೆ ಭರ್ಜರಿ 150km ನೀಡುವ EV
ಒಕಿನಾವಾ ಡ್ಯುಯಲ್ 100 ಖರೀದಿದಾರರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ. Okinawa Dual 100 ಮಾರುಕಟ್ಟೆಯಲ್ಲಿ ಒಂದೇ ರೂಪಾಂತರದಲ್ಲಿ ಲಭ್ಯವಿದ್ದು, ಆನ್ ರೋಡ್ ಬೆಲೆ ರೂ. 1,26,150 ಆಗಿದೆ. ನೀವು ಈ EV ಬೆಳೆಯ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ.

ಕಂಪನಿಯು ಈ ಸ್ಕೂಟರ್ ಖರೀದಿಗೆ EMI ಆಯ್ಕೆಯನ್ನು ನೀಡುತ್ತದೆ. ನೀವು 20000 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಈ ಸ್ಕೂಟರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇನ್ನು ಮೂರು ವರ್ಷಗಳವರೆಗೆ ಮಾಸಿಕ ಕಂತುಗಳು ರೂ. 3800 ಪಾವತಿಸುವ ಮೂಲಕ ಸಾಲ ಮರುಪಾವತಿ ಮಾಡಿಕೊಳ್ಳಬಹುದು.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in