Okinawa: 160 Km ಮೈಲೇಜ್ ಮತ್ತು ಕಡಿಮೆ ಬೆಲೆ, ಬಿಡುಗಡೆ ಕೆಲವೇ ಸಮಯದಲ್ಲಿ ದಾಖಲೆಯ ಬುಕಿಂಗ್.
2023 ರ ಮಾದರಿಯ Okhi -90 ಅನ್ನು ಬಿಡುಗಡೆ ಮಾಡಿದ ಓಕಿನಾವಾ ಅಟೋಟೆಕ್ ಕಂಪನಿ.
Okinawa Okhi-90 e-Scooter : ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ದ್ವಿಚಕ್ರ ವಾಹನಗಳು ಬಿಡುಗಡೆಯಾಗುತ್ತಿದೆ. ಗ್ರಾಹಕರಿಗೆ ಬೇಕಾದ ಬೆಲೆಯಲ್ಲಿ ಅಂದರೆ ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯವರೆಗೂ ದ್ವಿಚಕ್ರ ವಾಹನವನ್ನು ಖರೀದಿ ಮಾಡಬಹುದು.
ಸದ್ಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಬಿಡುಗಡೆ ಆಗಿದ್ದು ಕೆಲವೇ ದಿನಗಳಲ್ಲಿ ದಾಖಲೆಯ ಬುಕಿಂಗ್ ಕೂಡ ಆಗಿರುವುದನ್ನ ನಾವು ಗಮನಿಸಬಹುದಾಗಿದೆ.
Okinawa Okhi -90 ಇ-ಸ್ಕೂಟರ್ ನ ಬೆಲೆ
ಇದೀಗ ಬಿಡುಗಡೆಯಾದ ಎಲ್ಲ ಹೊಸ ಇ- ಸ್ಕೂಟರ್ 2023 ಮಾದರಿಯ Okhi -90 ಅನ್ನು ಬಿಡುಗಡೆ ಮಾಡಿದೆ. ಎಲ್ಲಾ ಹೊಸ ಇ- ಸ್ಕೂಟರ್ ಹೂಸ ಆ ಬ್ಯ್ಯಾಟರಿ ಪ್ಯಾಕ್ನೊಂದಿದೆ ಬರುತ್ತದೆ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಬಹು ನವೀಕರಣಗಳನ್ನು ಹೊಂದಿದೆ. 2023 Okinawa Okhi -90 ಇ-ಸ್ಕೂಟರ್ ನ ಬೆಲೆ 1.86 ಲಕ್ಷ ರೂಪಾಯಿ ಆಗಿದೆ.
ಈ ವರ್ಷದ ಸೀಟೇಬರ್ ನಲ್ಲಿ ಸ್ಕೂಟರ್ ನ ಡೆಲಿವರಿ ಪ್ರಾರಂಭವಾಗುತ್ತದೆ. ಕಂಪನಿಯು ಕಳೆದ ವರ್ಷ ಮೊದಲ ಬಾರಿಗೆ ಓಖೀ 90 ಅನ್ನು ದೇಶದಲ್ಲಿ ಪರಿಚಯ ಮಾಡಿಸಿತು. ಇದುವರೆಗೆ 10,000 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಮಾರಾಟ ಮಾಡಿದೆ ಎಂದು ವರದಿ ಹೇಳಿಕೊಂಡಿದೆ.
Okinawa Okhi -90 ಇ-ಸ್ಕೂಟರ್ ನ ವಿಶೇಷತೆ
ಹೊಸ ಓಕಿನಾವಾ ಓಖೀ 90 ಇ-ಸ್ಕೂಟರ್ ಒಂದೇ ಚಾರ್ಜ್ ನಲ್ಲಿ 160 ಕಿಮೀ ಬ್ಯಾಟರಿ ವ್ಯಾಪ್ತಿಯನ್ನು ಹೊಂದಿದೆ. ಇದು ಗಂಟೆಗೆ 80 ರಿಂದ 90 ಕಿಮೀ ವೇಗವನ್ನು ತಲುಪುತ್ತದೆ. ಇದು ಮೈಕ್ರೋ ಚಾರ್ಜರ್ ನೊಂದಿಗೆ ಬರುತ್ತದೆ. ಇನ್ನು ಈ ಸ್ಕೂಟರ್ 175 ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ಇದು ಸ್ವಯಂ ಕಟ್ ಕಾರ್ಯವನ್ನು ಹೊಂದಿದೆ ಮತ್ತು ಎಲೆಕ್ಟ್ರಾನಿಕ್ ನೆರವಿನ ಬ್ರೇಕಿಂಗ್ ಸಿಸ್ಟಮ್ ಅನ್ನು ನೀಡುತ್ತದೆ. ಈ ಹೊಸ Okinawa Okhi-90 ಇ- ಸ್ಕೂಟರ್ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಕೆಂಪು, ನೀಲಿ, ಬೂದು ಮತ್ತು ಬಿಳಿ ಬಣ್ಣದಲ್ಲಿ ಇ-ಬೈಕ್ ಸಿಗುತ್ತದೆ.