Ola EV: ಓಲಾ ಸ್ಕೂಟರ್ ಖರೀದಿ ಮಾಡುವವರಿಗೆ ಬಂಪರ್ ಆಫರ್, ಸ್ಕೂಟರ್ ಮೇಲೆ ಭರ್ಜರಿ 20000 ರೂ ಡಿಸ್ಕೌಂಟ್.
ಓಲಾ ಸ್ಕೂಟರ್ ಖರೀದಿಯ ಮೇಲೆ ಭರ್ಜರಿ 20 ಸಾವಿರವರೆಗೆ ಡಿಸ್ಕೌಂಟ್ ಪಡೆಯಬಹುದಾಗಿದೆ
Ola Electric Scooter Offer: ಸದ್ಯ ಮಾರುಕಟ್ಟೆಯಲ್ಲಿ ದ್ವಿಚಕರ ವಾಹನಗಳ ಮೇಲಿನ ಬೇಡಿಕೆ ಹೆಚ್ಚಿದೆ. ಜನರು ಹೆಚ್ಚಾಗಿ ಇಂಧನ ಚಾಲಿತ ವಾಹನಗಳಿಗಿಂತ ಎಲೆಕ್ಟ್ರಿಕ್ ಮಾದರಿಯನ್ನು ಹೆಚ್ಚು ಖರೀದಿಸುತ್ತಿದ್ದಾರೆ.
ಜನರ ಬೇಡಿಕೆ ಅನುಗುನವಾಗಲಿ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಮಾದರಿಯನ್ನು ಹೆಚ್ಚು ಹೆಚ್ಚು ಪರಿಚಯಿಸುತ್ತಿದೆ. ಇನ್ನು Electric Scooter ತಯಾರಿಕೆಯಲ್ಲಿ Ola ಕಂಪನಿಯು ಅಗ್ರಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿ ಓಲಾ ಕಂಪನಿಯ ಆನೇಕ ಸ್ಕೂಟರ್ ಗಳು ಗ್ರಾಹಕರಿಗೆ ಆಯ್ಕೆಗೆ ಲಭ್ಯವಿದೆ. ಜನರು ತಮ್ಮ ಆಯ್ಕೆಗೆ ಅನುಗುಣವಾಗಿ ಯಾವ ಮಾದರಿಯ ಸ್ಕೂಟರ್ ಬೇಕಾದರೂ ಖರೀದಿಸಬಹುದಾಗಿದೆ.
ಓಲಾ ಸ್ಕೂಟರ್ ಖರೀದಿ ಮಾಡುವವರಿಗೆ ಬಂಪರ್ ಆಫರ್
ಓಲಾ ಕಂಪನಿಯು ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೆ ಸ್ಕೂಟರ್ ಗಳನ್ನೂ ಪರಿಚಯಿಸಿವೆ. ಸದ್ಯ ಓಲಾ ಕಂಪನಿಯು ಇದೀಗ ಗ್ರಾಹಕರಿಗೆ ತಮ್ಮ ಸ್ಕೂಟರ್ ಖರೀದಿಯ ಆಸೆಯನ್ನು ನನಸು ಮಾಡಿಕೊಳ್ಳಲು ಉತ್ತಮ ಅವಕಾಶವನ್ನು ನೀಡಿದೆ. ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಯೋಜನೆಯಲ್ಲಿದ್ದಾರೆಯೋಲೇ ಕಂಪನಿಯು ಇದೀಗ ನಿಮಗಾಗಿ ಬೆಸ್ಟ್ ಆಫರ್ ಅನ್ನು ನೀಡಿದೆ. ನೀವು ಈ ಆಫರ್ ಅನ್ನು ಬಳಸಿಕೊಂಡು ಸ್ಕೂಟರ್ ಖರೀದಿಸಿದರೆ ಹೆಚ್ಚಿನ ಹಣವನ್ನು ಉಳಿಸಬಹುದು.
ಸ್ಕೂಟರ್ ಮೇಲೆ ಭರ್ಜರಿ 20000 ರೂ ಡಿಸ್ಕೌಂಟ್
ಕಂಪನಿಯು ತನ್ನ Ola S1 Pro ಮತ್ತು S1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಖರೀದಿಯ ಮೇಲೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಎರಡೂ ಸ್ಕೂಟರ್ ಗಳನ್ನು ರೂ. 6,999 ವರೆಗೆ ವಿಸ್ತೃತ ವಾರಂಟಿಯೊಂದಿಗೆ ನೀಡಲಾಗುತ್ತದೆ. ಗ್ರಾಹಕರು 3,000 ವರೆಗೆ ವಿನಿಮಯ ಬೋನಸ್ ಅನ್ನು ಸಹ ಪಡೆಯಬಹುದು. SA ಎಕ್ಸ್ ಸ್ಕೂಟರ್ ಮೇಲೆ ರೂ. 20,000 ವರೆಗೆ ರಿಯಾಯಿತಿಯೊಂದಿಗೆ, ಎಕ್ಸ್ ಶೋ ರೂಂನಲ್ಲಿ ನೀವು ಈ ಸ್ಕೂಟರ್ ಅನ್ನು ರೂ. ಕೇವಲ 89,999 ಕ್ಕೆ ಖರೀದಿಸಬಹುದು.
ಕೇವಲ ರೂ. 999 ಗೆ ನಿಮ್ಮದಾಗಲಿದೆ ಈ ಎಲೆಕ್ಟ್ರಿಕ್ ಸ್ಕೂಟರ್
ಇವೆಲ್ಲದರ ಜೊತೆಗೆ ಗ್ರಾಹಕರು ಆಯ್ದ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿದರೆ EMI ಮೇಲೆ ರೂ. 5,000 ವರೆಗೆ ರಿಯಾಯಿತಿಯನ್ನು ಪಡೆಯುತ್ತಾರೆ. ಕಂಪನಿಯು ಶೂನ್ಯ ಡೌನ್ ಪೇಮೆಂಟ್, ನೋ-ಕಾಸ್ಟ್ ಇಎಂಐ, ಶೇಕಡಾ 7.99 ರಷ್ಟು ಕಡಿಮೆ ಬಡ್ಡಿ ದರ ಮತ್ತು ಇನ್ನೂ ಅನೇಕ ಕೊಡುಗೆಗಳನ್ನು ಘೋಷಿಸಿದೆ. ಈ ಎಲ್ಲ ಆಫರ್ ಗಳನ್ನೂ ಬಳಸಿಕೊಂಡು ನೀವು ಸಾಕಷ್ಟು ಹಣವನ್ನು ಉಳಿಸಬಹುದು. ಇನ್ನು ಗ್ರಾಹಕರು ಕೇವಲ ರೂ. 999 ಅನ್ನು ಪಾವತಿ ಮಾಡುವ ಮೂಲಕ ಈ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಬುಕ್ ಮಾಡಿಕೊಳ್ಳಬಹುದು.