Ola Electric Scooter: ಈಗ ಕೇವಲ 70 ಸಾವಿರಕ್ಕೆ ಮನೆಗೆ ತನ್ನಿ 1 ಲಕ್ಷದ ಓಲಾ ಸ್ಕೂಟರ್, ಬಂಪರ್ ಆಫರ್ ಘೋಷಣೆ

ಮಾರಾಟದಲ್ಲಿ ದಾಖಲೆ ಬರೆದ ಓಲಾ ಸ್ಕೂಟರ್

Ola Electric Scooter Sales In 2024: ಭಾರತೀಯ ಆಟೋ ವಲಯದಲ್ಲಿ ಟಿವಿಎಸ್, ಹೀರೋ, ಎಥರ್ ಕಂಪನಿಗಳು ಹೊಸ ಮಾದರಿಯ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸುತ್ತಿರುವ ಬೆನ್ನಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ Ola ಕಂಪನಿಯು ಈಗಾಗಲೇ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ EV ಯನ್ನು ಪರಿಚಯಿಸುವ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ಗಳ ವಿಭಾಗದಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ.

ಇನ್ನು ಮಾರುಕಟ್ಟೆಯಲ್ಲಿ ಓಲಾ ಕಂಪನಿಯ ಸ್ಕೂಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಮಾರಾಟದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಓಲಾ ಮಾರಾಟದಲ್ಲಿ ಯಾವ ಹಂತ ತಲುಪಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Ola Electric Scooter Sales In 2024
Image Credit: Carandbike

ಮಾರಾಟದಲ್ಲಿ ದಾಖಲೆ ಬರೆದ ಓಲಾ ಸ್ಕೂಟರ್
Ola ಸೋಮವಾರ ಜೂನ್ (2024) ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದೆ. ಕಂಪನಿಯು ನಿರೀಕ್ಷೆಗಳನ್ನು ಮೀರಿ ಬೆಳವಣಿಗೆಯನ್ನು ಸಾಧಿಸಿದೆ. ಸರ್ಕಾರಿ ಸ್ವಾಮ್ಯದ ವಾಹನ್ ಪೋರ್ಟಲ್ ಪ್ರಕಾರ, ಓಲಾ ಎಲೆಕ್ಟ್ರಿಕ್ ಕಳೆದ ತಿಂಗಳು (ಜೂನ್, 2024) ಒಟ್ಟು 36,716 ಯುನಿಟ್ ಇ-ಸ್ಕೂಟರ್‌ ಗಳನ್ನು ಮಾರಾಟ ಮಾಡಿದೆ. ಜೂನ್ 2023 ಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 107% ಬೆಳವಣಿಗೆ ಕಂಡಿದೆ. ಕಂಪನಿಯು ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 46% ಪಾಲು ಹೊಂದಿರುವ ಮೂಲಕ ಮೊದಲ ಸ್ಥಾನದಲ್ಲಿದೆ. ಸದ್ಯ ಮಾರುಕಟ್ಟೆಯಲ್ಲಿ Ola S1X Electric Scooter ಹೆಚ್ಚು ಮಾರಾಟವಾಗುತ್ತಿತ್ತು, ಇದರ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಇಲ್ಲಿದೆ.

Ola Electric Scooter
Image Credit: Economictimes

ಒಮ್ಮೆ ಚಾರ್ಜ್ ಮಾಡಿದರೆ 151 Km ಮೈಲೇಜ್
ಇದೀಗ ನಾವು ಹಲವಾರು ವೈಶಿತ್ಯಗಳಿರುವ Ola S1 X Electric Scooter ನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಸ್ಕೂಟರ್ ಅನ್ನು 2 kW, 3 kW ಮತ್ತು 4 kW ಮಾದರಿಗಳಲ್ಲಿ ಖರೀದಿಸಬಹುದು. ವಿನ್ಯಾಸದ ಆಧಾರದ ಮೇಲೆ ರೂ. 69,999, ರೂ. 84,999 ಮತ್ತು ರೂ. 99,999 ಬೆಲೆ ನಿಗದಿಪಡಿಸಲಾಗಿದೆ. ಇನ್ನು S1 X ನಲ್ಲಿನ 2 kWh ಬ್ಯಾಟರಿ ಪ್ಯಾಕ್ ನಿಮಗೆ ಒಂದೇ ಚಾರ್ಜ್‌ ನಲ್ಲಿ 91 ಕಿಮೀ ಮೈಲೇಜ್ ನೀಡುತ್ತದೆ.

ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ಸ್-ರೈಡಿಂಗ್ ಮೋಡ್‌ ಗಳನ್ನು ನೀಡುತ್ತದೆ ಮತ್ತು 85 kmph ವೇಗವನ್ನು ತಲುಪಬಹುದು. ಇನ್ನು 3 kWh ಆವೃತ್ತಿಯು 2 kWh ರೂಪಾಂತರದಂತೆಯೇ ಅದೇ ಚಾರ್ಜಿಂಗ್ ಸಮಯ, ರೈಡಿಂಗ್ ಮೋಡ್‌ ಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಇದು 3.3 ಸೆಕೆಂಡುಗಳಲ್ಲಿ 0 ರಿಂದ 40 ಕಿಮೀ ವೇಗವನ್ನು ಹೊಂದಬಹುದು. 90 ಕಿಮೀ ಗರಿಷ್ಠ ವೇಗವನ್ನು ಹೊಂದಿದೆ ಮತ್ತು 151 ಕಿಮೀ ಮೈಲೇಜ್ ಅನ್ನು ನೀಡುತ್ತದೆ. 4 kWh ರೂಪಾಂತರವು ಅದೇ ಕಾರ್ಯಕ್ಷಮತೆಯ ವಿಶೇಷಣಗಳನ್ನು ಉಳಿಸಿಕೊಂಡಿದೆ. ಆದರೆ 190 ಕಿಮೀ ಮೈಲೇಜ್ ಅನ್ನು ನೀಡುತ್ತದೆ.

Join Nadunudi News WhatsApp Group

Ola Electric Scooter In India
Image Credit: Livemint

Join Nadunudi News WhatsApp Group