Ola Ev Car: ಒಮ್ಮೆ ಚಾರ್ಜ್ ಮಾಡಿದರೆ 500 Km ಮೈಲೇಜ್, ಸ್ಕೂಟರ್ ಬೆನ್ನಲ್ಲೇ ಅಗ್ಗದ ಎಲೆಕ್ಟ್ರಿಕ್ ಕಾರ್ ಲಾಂಚ್ ಮಾಡಿದ Ola.
500 Km ರೇಂಜ್ ಎಲೆಕ್ಟ್ರಿಕ್ ಕಾರ್ ಲಾಂಚ್ ಮಾಡಿದ Ola.
Ola Electric SUV: ಓಲಾ ಸ್ಕೂಟರ್ ಹೆಸರನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ಕೇಳೇ ಇರುತ್ತಾರೆ. ಹೌದು ಓಲಾ (Ola) ಸ್ಕೂಟರ್ ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆಯನ್ನ ಮಾಡಿದೆ ಎಂದು ಹೇಳಬಹುದು. ಇದರ ನಡುವೆ ಓಲಾ ಸ್ಕೂಟರ್ ಗೆ ಪೈಪೋಟಿ ಕೊಡಲು ಹಲವು ವಾಹನ ತಯಾರಕ ಕಂಪನಿಗಳು ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನ ಲಾಂಚ್ ಮಾಡುತ್ತಿದೆ ಎಂದು ಹೇಳಬಹುದು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್ ಗಳನ್ನ ಖರೀದಿ ಮಾಡುತ್ತಿದ್ದಾರೆ ಎಂದು ಹೇಳಬಹುದು. ಅನೇಕ ವಾಹನ ತಯಾರಕ ಕಂಪನಿಗಳು ಈಗ ಅತೀ ಹೆಚ್ಚು ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರುಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡುತ್ತಿದ್ದು ಈಗ ಈ ಕ್ಷೇತ್ರಕ್ಕೆ ಓಲಾ ಕೂಡ ಲಗ್ಗೆಯಿಟ್ಟಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಓಲಾ ಸ್ಕೂಟರ್ ಜೊತೆಗೆ ಬಂತು ಓಲಾ ಎಲೆಕ್ಟ್ರಿಕ್ ಕಾರ್
ಹೌದು ಜನರು ಹೆಚ್ಚು ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರುಗಳನ್ನ ಹೆಚ್ಚು ಹೆಚ್ಚು ಖರೀದಿ ಮಾಡುವುದರ ಕಾರಣ ಈಗ ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಓಲಾ ತನ್ನ ನೂತನ ಎಲೆಕ್ಟ್ರಿಕ್ ಕಾರನ್ನ ಮಾರುಕಟ್ಟೆಗೆ ಲಾಂಚ್ ಮಾಡಲು ತಯಾರಿಯನ್ನ ಮಾಡಿಕೊಂಡಿದೆ ಎಂದು ಹೇಳಬಹುದು. ಅತೀ ಹೆಚ್ಚು ಮೈಲೇಜ್ ಕೊಡುವ ಕಾರ್ ಇದಾಗಿರಲಿದ್ದು ಈ ಕಾರ್ ಹೋಂಡಾ, ಟಾಟಾ, ಮಹಿಂದ್ರಾ ಮತ್ತು ಮಾರುತಿ ಕಾರುಗಳಿಗೆ ನೇರವಾಗಿ ಪೈಪೋಟಿ ಕೊಡಲಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಮಾರುಕಟ್ಟೆಗೆ ಬರಲಿದೆ 500 Km ರೇಂಜ್ ನ ಓಲಾ ಕಾರ್
ಹೌದು ಮಾರುಕಟ್ಟೆಗೆ ಸುಮಾರು 500 ಕಿಲೋ ಮೀಟರ್ ಮೈಲೇಜ್ ಕೊಡುವ SUV ಎಲೆಕ್ಟ್ರಿಕ್ ಕಾರ್ ಲಾಂಚ್ ಮಾಡಲು ಈಗ ಓಲಾ ಎಲೆಕ್ಟ್ರಿಕ್ ಮುಂದಾಗಿದ್ದು ಈ ಕಾರ್ ಕಡಿಮೆ ಬೆಲೆಗೆ ಸಿಗಲಿದೆ ಎಂದು ಓಲಾ ಹೇಳಿಕೊಂಡಿದೆ. ಓಲಾ ಎಲೆಕ್ಟ್ರಿಕ್ ಕಾರನ್ನ ನೇರವಾಗಿ ಟೆಸ್ಲಾ ಕಾರಿಗೆ ಪೈಪೋಟಿ ಕೊಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ಫಾಸ್ಟ್ ಚಾರ್ಜ್ ಮೂಲಕ ಚಾರ್ಜ್ ಮಾಡಿದರೆ ಈ ಕೇವಲ 40 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು ಮತ್ತು ಸಾಮಾನ್ಯ ಚಾರ್ಜರ್ ಮೂಲಕ ಚಾರ್ಜ್ ಮಾಡಿದರೆ 4 ಘಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಸದ್ಯ ಕಾರಿನ ಮೈಲೇಜ್ ಮತ್ತು ವಿಶೇಷತೆಯ ಬಗ್ಗೆ ಹೇಳಿಕೊಂಡಿರುವ ಓಲಾ ಕಾರಿನ ಬೆಲೆ ಎಷ್ಟು ಅನ್ನುವುದರ ಬಗ್ಗೆ ಮಾಹಿತಿಯನ್ನ ಇಲ್ಲಿಯತನಕ ನೀಡಿಲ್ಲ.