Ola Bike: ಆಗಸ್ಟ್ 15 ಕ್ಕೆ ಲಾಂಚ್ ಆಗಲಿದೆ ಪೆಟ್ರೋಲ್ ಇಲ್ಲದೆ ಓಡುವ ಬೈಕ್, 350 ಕೀ ಮೀ ಮೈಲೇಜ್ ಮತ್ತು ಕಡಿಮೆ ಬೆಲೆ.
ಪೂರ್ಣ ಚಾರ್ಜ್ ಮಾಡಿದರೆ 300 ರಿಂದ 350 ಕಿಲೋಮೀಟರ್ ಮೈಲೇಜ್ ನೀಡುವ ಓಲಾದ ಎಲೆಕ್ಟ್ರಿಕ್ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
Ola S One Electric Bike Price: ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೊಸ ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ.
ಮಾರುಕಟ್ಟೆಯಲ್ಲಿ ಪೆಟ್ರೋಲ್ ಡೀಸೆಲ್ ಗಳ ಬೆಲೆ ಹೆಚ್ಚುತ್ತಿರುವುದರಿಂದ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನವನ್ನು ಖರೀದಿ ಮಾಡುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ ಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಮಾತ್ರವಲ್ಲ ವಾಹನ ಕಂಪನಿಗಳು ಆತಂಕಕ್ಕೆ ಒಳಗಾಗಿದ್ದು ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ. ಈಗ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ.
ಓಲಾ ಎಸ್ ಒನ್ ಎಲೆಕ್ಟ್ರಿಕ್ ಬೈಕ್
ಓಲಾ ಕಂಪನಿ ಶೀಘ್ರದಲ್ಲಿಯೇ ತನ್ನ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಲಿದ್ದು ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆಯಿದೆ. ಓಲಾದ ಎಲೆಕ್ಟ್ರಿಕ್ ಎಸ್ ಒನ್ ಬೈಕ್ ಆಗಸ್ಟ್ 15 ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು ಅದರ ಸಿದ್ದತೆಗಳು ವೇಗವಾಗಿ ನಡೆಯುತ್ತಿವೆ.
ಈ ಬೈಕ್ ನ ಫೀಚರ್ ಗಳನ್ನೂ ನೋಡಿದರೆ ಕಂಪನಿಗೆ ಮಾರುಕಟ್ಟೆಯಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆಯಂತೆ. ಕಂಪನಿಯ ವರದಿಯ ಪ್ರಕಾರ ಪ್ರಸ್ತುತ ಸ್ಕೂಟರ್ ಗೆ ಹೋಲಿಸಿದರೆ ಇದು ಎರಡು ಪಟ್ಟು ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಓಲಾ S One Pro ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 3.97 kwh ಬ್ಯಾಟರಿ ಪಾಕ್ ಅನ್ನು ನೀಡುತ್ತದೆ.
ಓಲಾ ಎಸ್ ಒನ್ ಎಲೆಕ್ಟ್ರಿಕ್ ಬೈಕ್ ನ ಬೆಲೆ
ಓಲಾ ಎಲೆಕ್ಟ್ರಿಕ್ ಬೈಕ್ ನಲ್ಲಿ ಕಂಡುವರುವ ಬ್ಯಾಟರಿ ಪ್ಯಾಕ್ ಸುಮಾರು 8 kwh ಸಾಮರ್ಥ್ಯದೊಂದಿಗೆ ಕಾಣಬಹುದು . ಸಾಮರ್ಥ್ಯದ ಹೊರತಾಗಿ ಗಾತ್ರವು ಎಸ್ ಆನ್ ಪ್ರೊ ಸ್ಕೂಟರ್ ನ ಬ್ಯಾಟರಿಗಿಂತ ಹೆಚ್ಚಾಗಿರುತ್ತದೆ.
ಇನ್ನು ಈ ಬೈಕ್ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 300 ರಿಂದ 350 ಕಿಮೀ ಓಡುತ್ತದೆ. ಇದು ಗಂಟೆಗೆ 110 ರಿಂದ 120 ಕಿ. ಮೀ ಓಡುತ್ತದೆ. ಇನ್ನು ಈ ಬೈಕ್ ನ ಬೆಲೆ 2 ರಿಂದ 2 .5 ಲಕ್ಷ ರೂಪಾಯಿ ಇರಬಹುದು ಎಂದು ಹೇಳಲಾಗುತ್ತಿದೆ.