Ola EV: ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಹಬ್ಬವೋ ಹಬ್ಬ, ಕಡಿಮೆ ಬೆಲೆಗೆ ಎರಡು ಓಲಾ EV ಲಾಂಚ್, 151 Km ಮೈಲೇಜ್.
ಎರಡು ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಓಲಾ.
Ola S1X And Ola S1x+ Electric Scooter: ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಹೆಚ್ಚು ಸೇಲ್ ಕಾಣುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ವಿವಿದ ಪ್ರತಿಷ್ಠಿತ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ರೂಪಾಂತರವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಕಚ್ಚಾ ತೈಲಗಳ ಬೆಲೆಯ ಏರಿಕೆಯ ಕಾರಣ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನವನ್ನೇ ಖರೀದಿಸುತ್ತಾರೆ.
ದುಬಾರಿ ಹಣ ಕೊಟ್ಟು ಪೆಟ್ರೋಲ್, ಡೀಸೆಲ್ ಚಾಲಿತ ವಾಹನವನ್ನು ಖರೀದಿಸಿದರು ಅದರ ನಿರ್ವಹಣೆ ಜನರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಜನರ ಖರ್ಚನ್ನು ಕಡಿಮೆಗೊಳಿಸಲು ವಿವಿಧ ಕಂಪನಿಗಳು ವಿಭಿನ್ನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಗಳನ್ನೂ ಪರಿಚಯಿಸುತ್ತವೆ. ಇದೀಗ ಮಾರುಕಟ್ಟೆಯಲ್ಲಿ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಓಲಾ (Ola) ಗ್ರಾಹಕರಿಗಾಗಿ ಬಜೆಟ್ ಬೆಲೆಯಲ್ಲಿ ಎರಡು ಮಾದರಿಯ ಸ್ಕೂಟರ್ ಅನ್ನು ಪರಿಚಯಿಸುತ್ತಿದೆ.
ಎರಡು ಹೊಚ್ಚ ಹೊಸ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡಿದ ಓಲಾ
ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ಓಲಾ S1X ಮತ್ತು ಓಲಾ S1X + ಎನ್ನುವ ಎರಡು ರೂಪಾಂತರದ ಸ್ಕೂಟರ್ ಗಳು ಬಿಡುಗಡೆಗೊಳ್ಳಲಿದೆ. ಓಲಾ ಎಲೆಕ್ಟ್ರಿಕ್ ಈ ಎರಡು ರೂಪಾಂತರದ ಸ್ಕೂಟರ್ ನಲ್ಲಿ ವಿವಿಧ ವೈಶಿಷ್ಟ್ಯವನ್ನು ಅಳವಡಿಸಿ ಗ್ರಾಹಕರಿಗೆ ನೀಡಲಿದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮತ್ತು ಮೈಲೇಜ್
ಓಲಾ ಎಲೆಕ್ಟ್ರಿಕ್ ನ ಎರಡು ರೂಪಾಂತರಗಳು ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಓಲಾ S1X ಎಲೆಕ್ಟ್ರಿಕ್ ನ ಬೆಲೆಯೂ 79,999 ರೂ., ಹಾಗೂ S1X + ಎಲೆಕ್ಟ್ರಿಕ್ ರೂಪಾಂತರದ ಬೆಲೆ 99,999 ರೂ. ಆಗಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮೈಲೇಜ್ ನ ಬಗ್ಗೆ ಹೇಳುವುದಾದರೆ ಓಲಾ S1X, 91 ಕಿಲೋಮೀಟರ್ ಹಾಗೂ ಓಲಾ S1X + , 151 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
ಓಲಾ S1X ಎಲೆಕ್ಟ್ರಿಕ್ ಸ್ಕೂಟರ್
ಓಲಾ S1X ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಎರಡು ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಬಿಡುಗಡೆಗೊಳಲ್ಲಲಿರುವ ಈ ನೂತನ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಡಿಸೇಂಬರ್ ನಲ್ಲಿ ವಿತರಣೆ ಪ್ರಾರಂಭವಾಗಲಿದೆ. ಓಲಾ S1X 3 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇನ್ನು ಆಗಸ್ಟ್ 21 ರ ವೆರೆಗೆ ಓಲಾ S1X 2kWh ಬ್ಯಾಟರಿ ಪ್ಯಾಕ್ ಆವೃತ್ತಿಯ ಬೆಲೆಯೂ ರೂ. 79,999 ರೂ. ಆಗಿದ್ದು, ನಂತರ ಇದರ ಬೆಲೆ 89,999 ರೂ. ಆಗಲಿದೆ.
ಓಲಾ S1X + ಎಲೆಕ್ಟ್ರಿಕ್ ಸ್ಕೂಟರ್
ಓಲಾ S1X + ಎಲೆಕ್ಟ್ರಿಕ್ ಸ್ಕೂಟರ್ ಒಂದು ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಓಲಾ S1X + 3 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇನ್ನು ಆಗಸ್ಟ್ 21 ರವೆರೆಗೆ ಓಲಾ S1X 2kWh ಬ್ಯಾಟೆರಿಪ್ಯಾಕ್ ಆವೃತ್ತಿಯ ಬೆಲೆಯೂ ರೂ. 99,999 ರೂ. ಆಗಿದ್ದು, ನಂತರ ಇದರ ಬೆಲೆ 1,09,999 ರೂ. ಆಗಲಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 4.5 kWh ಎಲೆಕ್ಟ್ರಿಕ್ ಮೋಟಾರ್ ಅನ್ನು ಬಳಸಲಾಗಿದೆ.