Old Age Pension In Uttar Pradesh: ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರ ಮಧ್ಯಮ ವರ್ಗದ ಜನರಿಗಾಗಿ ಹಾಗು ಬಡವರಿಗಾಗಿ ಹಲವಾರು ಪಿಂಚಣಿ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಈ ಪಿಂಚಣಿ ಯೋಜನೆಯನ್ನು ಪಡೆದುಕೊಳ್ಳಲು ಹಿರಿಯ ನಾಗರಿಕರು ಸರ್ಕಾರೀ ಕಚೇರಿಗಳ ಸುತ್ತ ಅಲೆದಾಡಬೇಕಿತ್ತು. ಆದರೆ ಇನ್ನುಮುಂದೆ ವೃದಾಪ್ಯ ಪಿಂಚಣಿ ಯೋಜನೆ ಸ್ವಯಂಚಾಲಿತವಾಗಿದೆ. ಈ ವೃದಾಪ್ಯ ಪಿಂಚಣಿ ಯೋಜನೆ ಹಿರಿಯ ನಾಗರಿಕರಿಗೆ ದೊಡ್ಡ ಆಸರೆ ಆಗಿದೆ. ಹಾಗಾದರೆ ನಾವೀಗ ಈ ಸ್ವಯಂಚಾಲಿತ ಪಿಂಚಣಿ ಯೋಜನೆಯನ್ನು ಎಲ್ಲಿ ಜಾರಿಗೆ ತರಲಾಗಿದೆ..? ಯಾರಿಗೆ ಜಾರಿಗೆ ತರಲಾಗಿದೆ ಮತ್ತು ಪಡೆದುಕೊಳ್ಳುವುದು ಹೇಗೆ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವೀಗ ತಿಳಿದುಕೊಳ್ಳೋಣ.
ಸ್ವಯಂಚಾಲಿತ ವೃದಾಪ್ಯ ಪಿಂಚಣಿ ಯೋಜನೆ
ಈ ಸ್ವಯಂಚಾಲಿತ ವೃದಾಪ್ಯ ಪಿಂಚಣಿ ಯೋಜನೆಯನ್ನು ಉತ್ತರಪ್ರದೇಶದಲ್ಲಿ ಜಾರಿಗೆ ತರಲಾಗಿದೆ. ಉತ್ತರ ಪ್ರದೇಶದಲ್ಲಿ ಹಿರಿಯ ನಾಗರಿಕರು ಇನ್ನುಮುಂದೆ ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡುವ ಅಗತ್ಯವಿಲ್ಲ. 60 ವರ್ಷ ತುಂಬಿದ ತಕ್ಷಣ ಕುಟುಂಬ ID ಮೂಲಕ ಸ್ವಯಂಚಾಲಿತವಾಗಿ ಪಿಂಚಣಿ ಲಭ್ಯವಾಗುತ್ತದೆ. ಇದು ಲಕ್ಷಾಂತರ ಹಿರಿಯ ನಾಗರಿಕರ ಸಂತಸಕ್ಕೆ ಕಾರಣವಾಗಿದೆ.
ಯೋಜನೆಯ ಹಿನ್ನೆಲೆ
ಹಿರಿಯರಿಗೆ ಗೌರವಯುತ ಜೀವನ ನೀಡುವುದು ಯೋಗಿ ಆಧಿತ್ಯನಾಥ್ ಸರ್ಕಾರದ ಮುಖ್ಯ ಉದ್ದೇಶ ಆಗಿದೆ. “ಒಂದು ಕುಟುಂಬ ಒಂದು ಗುರುತು (One Family, One Identity)” ಎಂಬ ಕುಟುಂಬ ID ವ್ಯವಸ್ಥೆಯನ್ನು ಬಳಸಿ, 60 ವರ್ಷ ಪೂರೈಸಿದವರನ್ನು ಆಧಾರ್ ಪರಿಶೀಲನೆ ಮೂಲಕ ಗುರುತಿಸಿ, ಪಿಂಚಣಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ (ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ). ಇದರಿಂದ ಪಾರದರ್ಶಕತೆ ಹೆಚ್ಚುತ್ತದೆ ಮತ್ತು ಅನರ್ಹರು ಲಾಭ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗೆ ಅರ್ಹ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಪಿಂಚಣಿ ತಲುಪುತ್ತದೆ.
2025 ರಲ್ಲಿ ಸ್ವಯಂಚಾಲಿತ ಪಿಂಚಣಿಯಲ್ಲಿ ದಾಖಲೆಯ ಏರಿಕೆ
2025 ರ ಕಳೆದ ಎಂಟು ತಿಂಗಳಿನಿಂದ ಈ ಯೋಜನೆಯಡಿಯಲ್ಲಿ ಸುಮಾರು 9.83 ಲಕ್ಷ ಹಿರಿಯ ನಾಗರಿಕರು ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ವೃದ್ಧಾಪ್ಯ ವೇತನ ಪಡೆಯುವ ಪಿಂಚಣಿ ಫಲಾನುಭವಿಗಳ ಸಂಖ್ಯೆ 67.50 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು 2025 ರಲ್ಲಿ 3.32 ಲಕ್ಷ ಅನರ್ಹ ಪಿಂಚಣಿದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ.
ಅರ್ಹತೆ
- ಉತ್ತರ ಪ್ರದೇಶದ ಖಾಯಂ ನಿವಾಸಿ ಆಗಿರಬೇಕು
- 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು
- ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ 46,080 ರೂ. ಮತ್ತು ನಗರ ಪ್ರದೇಶದಲ್ಲಿ 56,460 ರೂ.ಗಿಂತ ಕಡಿಮೆ ಇರಬೇಕು.
- ಪ್ರತಿ ತಿಂಗಳು 1000 ರೂ. ಪಿಂಚಣಿಯನ್ನು ಪಡೆದುಕೊಳ್ಳಬಹುದು
- 80 ವರ್ಷ ಮೇಲ್ಪಟ್ಟವರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು
- ಈ ಯೋಜನೆಗೆ ಕುಟುಂಬದ ಏಕೈಕ ಗುರುತಿನ ವ್ಯವಸ್ಥೆಯಾದ ‘ಕುಟುಂಬ ಐಡಿ’ ಕಡ್ಡಾಯವಾಗಿದೆ.
ಯೋಜನೆಯ ಪ್ರಯೋಜನ
- ಹಿರಿಯ ನಾಗರಿಕರು ಗೌರವಯುತ ಜೀವನ ನೆಡೆಸಲು ಸಾಧ್ಯ
- ಅನರ್ಹರನ್ನು ತೆಗೆದುಹಾಕಿ ನಿಜವಾದ ಫಲಾನುಭವಿಗಳಿಗೆ ಹಣ ತಲುಪುತ್ತದೆ
- ಹಿರಿಯರು ಔಷಧಿ, ಆಹಾರ ಮತ್ತು ದೈನಂದಿನ ಖರ್ಚುಗಳಿಗೆ ಈ ಹಣ ಸಹಾಯಕವಾಗುತ್ತದೆ
- ಬಡತನದಿಂದ ಬಳಲುತ್ತಿರುವವರಿಗೆ ಈ ಯೋಜನೆ ದೊಡ್ಡ ಆಧಾರ
- ಹಿರಿಯ ನಾಗರಿಕರು ಸ್ವಾವಲಂಬಿ ಜೀವನ ನೆಡೆಸಬಹುದು
ಈ ಯೋಜನೆ ಸದ್ಯ ಉತ್ತರ ಪ್ರದೇಶ ರಾಜ್ಯದಲ್ಲಿ ಜಾರಿಗೆ ಬಂದಿದೆ ಮತ್ತು ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಾರಿಗೆ ಬರುವ ಸಾಧ್ಯತೆ ಇದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

