HSRP: ಇಂತಹ ನಂಬರ್ ಹಾಕಿಸಿದರೆ 1000 ರೂ ದಂಡ, ಎಲ್ಲಾ ವಾಹನ ಮಾಲೀಕರಿಗೆ ಕೇಂದ್ರದಿಂದ ಹೊಸ ನಿಯಮ.
ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
Vehicle Number Plate Rules: ದೇಶದಲ್ಲಿ ವಾಹನಗಳ ಬಳಕೆ ಹೆಚ್ಚುತ್ತಿದೆ. ಪ್ರತಿನಿತ್ಯ ಲಕ್ಷಾಂತರ ವಾಹನಗಳು ರಸ್ತೆಯಲ್ಲಿ ಓಡಾಡುತ್ತವೆ. ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಇರುವ ಕಾರಣ ಟ್ರಾಫಿಕ್ ಸಮಸ್ಯೆ ಎಲ್ಲೆಂದರಲ್ಲಿ ಹುಟ್ಟಿಕೊಳ್ಳುತ್ತಿದೆ. ಈಗಾಗಲೇ ಕೇಂದ್ರ ಸಾರ್ಕಾರ ಟ್ರಾಫಿಕ್ ಸಮಸ್ಯೆಯನ್ನು ತಡೆಹಿಡಿಯಲು ಸಾಕಷ್ಟು ಕ್ರಮ ಕೈಗೊಂಡಿದೆ. ನೂತನ ತಂತ್ರಜ್ಞಾನಗಳನ್ನು ಬಳಸಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಪ್ರಯತ್ನಿಸುತ್ತಿದೆ. ಆದರೆ ದಿನದಿಂದ ದಿನಕೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತದೆ ಹೊರತು ಕಡಿಮೆಯಾಗುವುದಿಲ್ಲ.
ಇನ್ನು ಇತ್ತೀಚೆಗಷ್ಟೇ ಸಾರಿಗೆ ಇಲಾಖೆ ಹಳೆಯ ವಾಹನಗಳ ನೋಂದಣಿಯ ಬಗ್ಗೆ ಹೊಸ ನಿಯಮವನ್ನು ಅಳವಡಿಸಿತ್ತು. ಹಾಗೆಯೇ 10 ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ಮಹತ್ವದ ಆದೇಶ
ಇನ್ನು 2019 ಏಪ್ರಿಲ್ 1 ರ ನಂತರ ನೋಂದಣಿಯಾಗಿರುವ ವಾಹನಗಳಲ್ಲಿ ಈಗಾಗಲೇ ಅತಿ ಸುರಕ್ಷತೆಯ ನೋಂದಣಿ ಫಲಕವನ್ನು ಅಳವಡಿಸಲಾಗಿದೆ. ಇದೀಗ 2019 ಏಪ್ರಿಲ್ 1 ರ ಮೊದಲು ನೋಂದಣಿಯಾಗಿರುವ ವಾಹನಗಳ ಮಾಲೀಕರಿಗೆ ಸಾರಿಗೆ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಇನ್ನು 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ನವೆಂಬರ್ 17 ರೊಳಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಹೆಚ್ಎಸ್ಆರ್ ಪಿ ಅಳವಡಿಕೆ ಕಡ್ಡಾಯವಾಗಿದೆ.
ನವೆಂಬರ್ 17 ರೊಳಗೆ ಈ ಕೆಲಸ ಮಾಡಬೇಕು
ಸಾರಿಗೆ ಇಲಾಖೆಯ ಆದೇಶದ ಪ್ರಕಾರ, ವಾಹನ ಮಾಲೀಕರು 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳನ್ನು ನವೆಂಬರ್ 17 ರೊಳಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಆದೇಶ ನೀಡಲಾಗಿದೆ. ವಾಹನಗಳಿಗೆ ಹೆಚ್ ಎಸ್ ಆರ್ ಪಿಯನ್ನು ಕಡ್ಡಾಯಗೊಳಿಸಲಾಗಿದೆ. ನಿಗದಿತ ಅವಧಿಯೊಳಗೆ ಅಂದರೆ ನವೆಂಬರ್ 17 ರೊಳಗೆ 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಹೆಚ್ ಎಸ್ ಆರ್ ಪಿ ಅಳವಡಿಕೆ ಕಡ್ಡಾಯವಾಗಿದೆ.
ಈ ನಿಯಮ ಪಾಲಿಸದಿದ್ದರೆ ಕಟ್ಟಬೇಕು ಹೆಚ್ಚಿನ ದಂಡ
ಹೆಚ್ ಎಸ್ ಆರ್ ಪಿ ಅಳವಡಿಸದಿದ್ದರೆ ಅಂತಹ ವಾಹನದ ಮಾಲೀಕರಿಗೆ 500 ರಿಂದ 1000 ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದೆ. ವಾಹನಗಳ ಮಾಲೀಕರು ಶೋರೂಮ್ ಅಥವಾ ಡೀಲರ್ ಗಳಲ್ಲಿ ಹೆಚ್ಎಸ್ಆರ್ ಪಿ ನಂಬರ್ ಪ್ಲೇಟ್ ಗಾಗಿ ಮನವಿ ಸಲ್ಲಿಸಬಹುದು. ನಾಲ್ಕು ಚಕ್ರ ವಾಹನಗಳಿಗೆ 400 ರಿಂದ 500 ರೂ. ಹಾಗೂ ದ್ವಿಚಕ್ರ ವಾಹನಗಳಿಗೆ 250 ರಿಂದ 300 ರೂ. ಶುಲ್ಕ ಪಾವತಿಸಬೇಕಾಗುತ್ತದೆ.