Old Pension: ಹಳೆಯ ಪಿಂಚಣಿ ಜಾರಿ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆ, ಪಿಂಚಣಿ ಯೋಜನೆ ಪಡೆಯಲು ಈ ಷರತ್ತುಗಳು ಅನ್ವಯ.

ಹಳೆಯ ಪಿಂಚಣಿ ಯೋಜನೆ ಪಡೆಯಲು ಈ ಷರತ್ತುಗಳು ಅನ್ವಯ

Old Pension New Update: ದೇಶದಲ್ಲಿ 7 ನೇ ವೇತನದಡಿ ತುಟ್ಟಿಭತ್ಯೆ ಹೆಚ್ಚಳವನ್ನು ಸರ್ಕಾರ ಘೋಷಿಸಿದೆ. ಹೊಸ ವರ್ಷದಿಂದ ಸರ್ಕಾರೀ ನೌಕರರು ಹೆಚ್ಚಿನ ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ. ತುಟ್ಟಿಭತ್ಯೆ ಹೆಚ್ಚಳ ಘೋಷಣೆಯ ಬೆನ್ನಲೇ ಇದೀಗ ಸರ್ಕಾರೀ ನೌಕರರು ಹಳೆಯ ಪಿಂಚಣಿ (Old Pension Scheme) ಜಾರಿಮಾಡುವ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈಗಾಗಲೇ ಕೆಲ ರಾಜ್ಯದಲ್ಲಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಾಗಿದೆ. ಇದೀಗ ಸರ್ಕಾರ ಇಂತಹ ನೌಕರರಿಗೆ ಮಾತ್ರ ಹಳೆಯ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ. ಇನ್ನುಮುಂದೆ ಸರ್ಕಾರೀ ನೌಕರರು ಹಳೆಯ ಪಿಂಚಣಿಯ ಲಾಭವನ್ನು ಪಡೆಯಬಹುದು. ಆದರೆ ಹಳೆಯ ಪಿಂಚಣಿಯ ಲಾಭವನ್ನು ಪಡೆಯಲು ಈ ಷರತ್ತುಗಳು ಕಡ್ಡಾಯವಾಗಿದೆ.

Old Pension New Update
Image Credit: Informalnewz

ಹಳೆಯ ಪಿಂಚಣಿ ಜಾರಿ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆ
ಹಳೆ ಪಿಂಚಣಿ ಜಾರಿಗೆ ಆಗ್ರಹಿಸಿ ಈಗಾಗಲೇ ಸಾಕಷ್ಟು ಹೋರಾಟಗಳು ನಡೆದಿವೆ. ಇದೀಗ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ಒಪ್ಪಿಗೆ ನೀಡಿದೆ. ಹಳೆ ಪಿಂಚಣಿ ಜಾರಿಗೆ ಒಪ್ಪಿಗೆ ನೀಡುವುದರ ಜೊತೆಗೆ ಅದರ ಬಗ್ಗೆ ಆದೇಶವನ್ನೂ ಹೊರಡಿಸಿದೆ. ಏಪ್ರಿಲ್ 1 ರಂದು ರಾಜ್ಯ ಸರ್ಕಾರದಿಂದ ಮತ್ತೊಂದು ಆದೇಶ ಹೊರಡಿಸಲಾಗಿದ್ದು, ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.

ಇನ್ನು 01.04.2006 ಕ್ಕಿಂತ ಮೊದಲು ನೇಮಕಗೊಂಡ ಮತ್ತು ನಂತರ ಮಂಜೂರಾದ ನೌಕರರನ್ನು ಹಳೆಯ ನಿಶ್ಚಿತ ಪಿಂಚಣಿ ಯೋಜನೆಯಡಿ ತರಲು ರಾಜ್ಯ ಸರ್ಕಾರವು ಮಹತ್ವದ ಆದೇಶವನ್ನು ಹೊರಡಿಸಿದೆ. ಹಳೆಯ ಪಿಂಚಣಿ ವ್ಯವಸ್ಥೆಯನ್ನು ತೆಗೆದುಕೊಳ್ಳುವವರು ಸರಿಯಾದ ಆಯ್ಕೆ ಮಾಡಬೇಕು.

Old Pension Latest News
Image Credit: ibc24

ಹಳೆಯ ಪಿಂಚಣಿ ಯೋಜನೆ ಪಡೆಯಲು ಈ ಷರತ್ತುಗಳು ಅನ್ವಯ
•ದಿನಾಂಕ:01.04.2006 ರ ಮೊದಲು ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾದ ಮತ್ತು ಆ ದಿನಾಂಕದಂದು ಅಥವಾ ನಂತರ ರಾಜ್ಯ ಸರ್ಕಾರದ ಸೇವೆಗೆ ಸೇರ್ಪಡೆಗೊಂಡ ಸರ್ಕಾರಿ ನೌಕರರು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಯಡಿ ಒಳಗೊಳ್ಳಲು ಬಯಸುವವರು ತಮ್ಮ ಆಸಕ್ತಿಯನ್ನು ನೇರವಾಗಿ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ದಿನಾಂಕ: 30.06.2024 ರೊಳಗೆ ನಿಗದಿತ ನಮೂನೆ ಸಲ್ಲಿಸಬೇಕು. ಈ ಆಯ್ಕೆಯನ್ನು ಒಮ್ಮೆ ಮಾತ್ರ ಚಲಾಯಿಸಲು ಅನುಮತಿಸಲಾಗಿದೆ.

Join Nadunudi News WhatsApp Group

•ಒಮ್ಮೆ ಮಾಡಿದ ಆಯ್ಕೆಯನ್ನು ಬದಲಾಯಿಸಲು ಅವಕಾಶವಿಲ್ಲ.

•ಮೇಲಿನ 1 ರ ಪ್ರಕಾರ ಆಯ್ಕೆಯನ್ನು ಚಲಾಯಿಸಲು ಅರ್ಹರಾಗಿರುವ ಸರ್ಕಾರಿ ನೌಕರರು ನಿಗದಿತ ದಿನಾಂಕದೊಳಗೆ ತಮ್ಮ ಆಯ್ಕೆಯನ್ನು ಚಲಾಯಿಸದಿದ್ದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮುಂದುವರಿಯುತ್ತಾರೆ.

•ದಿನಾಂಕ 01.04.2006 ರ ಮೊದಲು ರಾಜ್ಯ ಸಿವಿಲ್ ಸೇವೆಯಲ್ಲಿನ ಖಾಲಿ ಹುದ್ದೆಗಳಿಗೆ ಹೊರಡಿಸಲಾದ ನೇಮಕಾತಿ ಅಧಿಸೂಚನೆಯನ್ವಯ ಆಯ್ಕೆಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ತದನಂತರ ಸಮುಚಿತ ಮಾರ್ಗದಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಅನ್ಯ ಇಲಾಖೆಯಲ್ಲಿನ ಹುದ್ದೆಗೆ ನೇಮಕಾತಿ ಹೊಂದಿದ ಅರ್ಹ ಸರ್ಕಾರೀ ನೌಕರರು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆ ಸೌಲಭ್ಯ ಪಡೆದುಕೊಳ್ಳಲು ಬಯಸಿದ್ದಲ್ಲಿ ಮನವಿಯನ್ನು ಹಿಂದಿನ ನೇಮಕಾತಿ ಪ್ರಾಧಿಕಾರಕ್ಕೆ ದಿನಾಂಕ 30 .06 .2024 ರೊಳಗಾಗಿ ಸಲ್ಲಿಸಬೇಕಾಗುತ್ತದೆ.

Old Pension New Rules
Image Credit: ibc24

Join Nadunudi News WhatsApp Group