Old Pension: ದೇಶದ ಎಲ್ಲಾ ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ಪಿಂಚಣಿ ನಿಯಮದಲ್ಲಿ ಐತಿಹಾಸಿಕ ಬದಲಾವಣೆ.
ಪಿಂಚಣಿ ಕುರಿತಂತೆ ಇನ್ನೊಂದು ಆದೇಶ ಹೊರಡಿಸಿದ ಕೇಂದ್ರ ಸರ್ಕಾರ.
Old Pension Scheme Update: ಇತ್ತೀಚಿನ ದಿನಗಳಲ್ಲಿ ಪಿಂಚಣಿಗೆ ಸಂಬಂಧಿಸಿದಂತೆ ಅನೇಕ ಅಪ್ಡೇಟ್ ಗಳು ಹರಿದಾಡುತ್ತಿವೆ. ಇನ್ನು ಇತ್ತೀಚಿಗೆ ಹಳೆಯ ಪಿಂಚಣಿ (Old Pension) ನೀಡುವ ಕುರಿತು ಸಾಕಷ್ಟು ರೀತಿಯ ಸುದ್ದಿಗಳು ಹರಡಿದ್ದವು. ಇದೀಗ ಸರ್ಕಾರ Old Pension ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಪ್ರಸ್ತುತ ಸರ್ಕಾರೀ ನೌಕರರಿಗೆ ಹೊಸ ಪಿಂಚಣಿ ಪದ್ದತಿಯಲ್ಲಿ ಪಿಂಚಣಿ ನೀಡಲಾಗುತ್ತಿದೆ. ಹೀಗಾಗಿ ನೌಕರರು ಹಳೆಯ ಪಿಂಚಣಿ ಪದ್ಧತಿ ಪ್ರಕಾರ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈಗಾಗಲೇ ವಿವಿಧ ರಾಜ್ಯ ಸರ್ಕಾರ Old Pension Scheme ಅನ್ನು ಜಾರಿಗೊಳಿಸಿದೆ. ಎಲ್ಲಾ ರಾಜ್ಯದಲ್ಲೂ ಹಳೆಯ ಪಿಂಚಣಿ ವ್ಯವಸ್ಥೆ ಸದ್ಯದಲ್ಲೇ ಜಾರಿಯಾಗುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಸರ್ಕಾರಿ ನೌಕರರಿಗೆ OPS ಜಾರಿ
ಇನ್ನು 2006 ರ ನಂತರ ನೇಮಕವಾಗಿರುವ ಎಲ್ಲಾ ಸರ್ಕಾರೀ ನೌಕರರು ಮತ್ತು ಅವರ ಅವಲಂಭಿತ ಕುಟುಂಬಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. 7 ನೇ ವೇತನ ಆಯೋಗದ ವರದಿಗಳನ್ನು ಶೀಘ್ರವಾಗಿ ಪಡೆದು ವೇತನ, ಭತ್ಯೆ ಪರಿಷ್ಕರಿಸಬೇಕು ಎಂದು ಸರಕಾರಿ ನೌಕರರು ಮನವಿ ಮಾಡಿದ್ದರು.
ಪ್ರಸ್ತುತ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS ) ನೌಕರರು ಮೂಲ ವೇತನದ 10 % ಮತ್ತು ಸರ್ಕಾರಕ್ಕೆ 14% ರಷ್ಟು ಕೊಡುಗೆ ನೀಡಬೇಕಾಗುತ್ತದೆ. ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ಕೊನೆಯ ವೇತನದ 50 % ಖಾತರಿ ಪಿಂಚಣಿಯಾಗಿ ನೀಡಲಾಗುತ್ತದೆ. ನೌಕರರು ತಮ್ಮ ಕೊನೆಯ ಸಂಬಳದ 40% ರಿಂದ 45% ರಷ್ಟು ಪಿಂಚಣಿಯಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಹಳೆಯ ಪಿಂಚಣಿ ಯೋಜನೆಯ ಕುರಿತು ಬಿಗ್ ಅಪ್ಡೇಟ್
ರಾಷ್ಟ್ರೀಯ ಪಿಂಚಣಿ ಯೋಜನೆಗೆ ಆರ್ಥಿಕ ನೆರವು ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಇನ್ನು ಆಂಧ್ರಪ್ರದೇಶ ಸರ್ಕಾರ ಪಿಂಚಣಿಗಾಗಿ ಹೊಸ ಮಾದರಿಯನ್ನು ಪರಿಚಯಿಸಿದೆ.
ರಾಜ್ಯ ಸರ್ಕಾರೀ ನೌಕರರಿಗೆ ಯಾವುದೇ ಕಡಿತವಿಲ್ಲದೆ ಅವರ ಕೊನೆಯ ಮೂಲ ವೇತನದ ಶೇ. 33 ಕ್ಕೆ ಸಮಾನವಾದ ಖಾತರಿ ಪಿಂಚಣಿ ನೀಡುವ ಪ್ರಸ್ತಾಪಿಸಾಲಾಗಿದೆ. ಹಣಕಾಸು ಕಾರ್ಯದರ್ಶಿ ನೇತೃತ್ವದ ಸಮಿತಿಯು ಹೊಸ ಪಿಂಚಣಿ ವ್ಯವಸ್ಥೆಯ ಅಭಿವೃದ್ಧಿಗೆ ಒತ್ತು ನೀಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ.