Old Vehicle: ಮನೆಯಲ್ಲಿ ಕಾರ್ ಮತ್ತು ಬೈಕ್ ಹೊಂದಿರುವವರಿಗೆ ಹೊಸ ರೂಲ್ಸ್, ಬದಲಾಗಿದೆ ನೋಂದಣಿ ನಿಯಮ.
ಇದೀಗ ಹಳೆಯ ವಾಹನಗಳ ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.
Old Vehicle Registration Rule: ಟ್ರಾಫಿಕ್(Traffic) ಸಮಸ್ಯೆಯ ನಿಯಂತ್ರಣಕ್ಕೆ ಸರ್ಕಾರ ಹೊಸ ಹೊಸ ನಿಯಮಗಳನ್ನು ಜಾರಿ ಮಾಡುತ್ತಿದೆ. ಈ ಹಿಂದೆ ಸರ್ಕಾರ ಹಳೆಯ ವಾಹನಗಳ ನೋಂದಣಿ ರದ್ದುಗೊಳಿಸಲು ನಿರ್ಧರಿಸಿತ್ತು. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಸಾಕಷ್ಟು ಸಂಚಾರ ನಿಯಮವನ್ನು ಜಾರಿಗೊಳಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಹೆಚ್ಚಿನ ದಂಡವನ್ನು ವಿಧಿಸಲಾಗುತ್ತದೆ.
ಇನ್ನು ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ 10 ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿತ್ತು. ಸಂಚಾರಿ ಪೊಲೀಸರು ಹಳೆಯ ವಾಹನಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದರು. ಇದೀಗ ಹಳೆಯ ವಾಹನಗಳ ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.
ಮನೆಯಲ್ಲಿ ಕಾರ್ ಮತ್ತು ಬೈಕ್ ಹೊಂದಿರುವವರಿಗೆ ಹೊಸ ರೂಲ್ಸ್
ಹಳೆಯ ಖಾಸಗಿ ವಾಹನಗಳ ನೋಂದಣಿ ನಿಯಮಗಳು ಬದಲಾಯಿಸುವ ಬಗ್ಗೆ ನಿರ್ಧರಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳನ್ನು ನವೀಕರಿಸಲು ಸಾರಿಗೆ ಇಲಾಖೆಯ ಅನುಮೋದನೆ ಅಗತ್ಯವಿದೆ. ಹೊಸ ನಿಯಮಗಳ ಪ್ರಕಾರ, ಜಿಲ್ಲಾ ಸಾರಿಗೆ ಅಧಿಕಾರಿ (DTO) ಮತ್ತು ಮೋಟಾರು ವಾಹನ ನಿರೀಕ್ಷಕರು (MVI) MVI ಸಂಬಂಧಿಸಿದ ವಾಹನ ಅಥವಾ ವಾಹನದ ಜಂಟಿ ತಪಾಸಣೆ ನಡೆಸುತ್ತಾರೆ.
ವಾಹನದ ಮಾಲೀಕರ ಮುಂದೆ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಅಂತಿಮ ಅನುಮೋದನೆಗಾಗಿ ಅರ್ಜಿಯನ್ನು ಇಲಾಖೆಗೆ ಕಳುಹಿಸಲಾಗುತ್ತದೆ. ಈ ಹಿಂದೆ ಇಲ್ಲಿಯವರೆಗೆ ಹಳೆ ವಾಹನಗಳ ಎಂವಿಐ ಮಾತ್ರ ವಾಹನ ತಪಾಸಣೆ, ದಾಖಲೆಗಳ ಪರಿಶೀಲನೆ ಕಾರ್ಯ ಮಾಡಲಾಗುತ್ತಿದೆ.
ದಾಖಲೆಗಳ ಪರಿಶೀಲನೆಯ ನಂತರ ಮರು ನೋಂದಣಿ ಸೇವೆಯನ್ನು ನೀಡಲಾಗುತ್ತದೆ. ವಾಹನದ ಮರು ನೋಂದಣಿಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು DTO ಅಂತಿಮ ಅಧಿಕಾರವನ್ನು ಹೊಂದಿರುತ್ತದೆ. ಖಾಸಗಿ ಮತ್ತು ವಾಣಿಜ್ಯೇತರ ವಾಹನಗಳು ಮಾತ್ರ ನೋಂದಣಿ ನವೀಕರಣಕ್ಕೆ ಅರ್ಹವಾಗಿರುತ್ತವೆ.