Railway Facility: ರೈಲು ಪ್ರಯಾಣಿಕರಿಗಾಗಿ ಹೊಸ ಸೇವೆ ಬಿಡುಗಡೆ, ಒಂದು ನಿಲ್ದಾಣ ಒಂದು ಉತ್ಪನ್ನ ಸೇವೆ ಆರಂಭ.

ರೈಲು ನಿಲ್ದಾಣದಲ್ಲಿ ಒಂದು ನಿಲ್ದಾಣ ಮತ್ತು ಒಂದು ಉತ್ಪನ್ನ ಸೇವೆ ಆರಂಭ.

One Station One Product: ದೂರದ ಪ್ರಯಾಣ ಬಯಸುವವರು ರೈಲು ಪ್ರಯಾಣವನ್ನು ಆರಿಸುತ್ತಾರೆ. ಪ್ರತಿ ನಿತ್ಯ ರೈಲುಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ರೈಲು ಪ್ರಯಾಣವು ಆರಾಮದಾಯಕ ಹಾಗೂ ಸುರಕ್ಷಿತವಾಗಿರುತ್ತದೆ. ಭಾರತೀಯ ರೈಲ್ವೆ (Indian Railway) ತನ್ನ ಪ್ರಯಾಣಿಕರ ಸುರಕ್ಷತೆಗಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ.

ಇನ್ನು ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ ನಿಯಮಗಳು ಸಾಕಷ್ಟು ಬದಲಾಗಿವೆ. ಇನ್ನು ಭಾರತೀಯ ರೈಲ್ವೆ ಇದೀಗ ರೈಲು ಪ್ರಯಾಣಿಕರಿಗಾಗಿ ಹೊಸ ಸೇವೆಯನ್ನು ಬಿಡುಗಡೆ ಮಾಡಿದೆ. ರೈಲು ಪ್ರಯಾಣಿಕರಿಗೆ ನೀಡಲಿರುವ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ.

Railway Facility
Image Credit: railway-technology

ರೈಲು ಪ್ರಯಾಣಿಕರಿಗಾಗಿ ಹೊಸ ಸೇವೆ ಬಿಡುಗಡೆ
ರೈಲ್ವೆ ಇಲಾಖೆಯು ಸಾಕಷ್ಟು ಸೌಲಭ್ಯಗಳ ಜೊತೆಗೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿವೆ. ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ ರೈಲ್ವೆ ಇಲಾಖೆ ವಿಶೇಷ ಸೌಲಭ್ಯವನ್ನು ಒದಗಿಸುತ್ತದೆ. ಇನ್ನು ರೈಲ್ವೆ ಟಿಕೆಟ್ ನಲ್ಲಿ ಕೂಡ ಸಾಕಷ್ಟು ನಿಯಮಗಳು ಬದಲಾಗಿವೆ. ಇದೀಗ ರೈಲ್ವೆ ಸಚಿವಾಲಯವು ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯನ್ನು ಜಾರಿಗೊಳಿಸಿದೆ.

ಒಂದು ನಿಲ್ದಾಣ ಒಂದು ಉತ್ಪನ್ನ
ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿಯಲ್ಲಿ ಮಳಿಗೆಗಳನ್ನು ಪ್ರದರ್ಶಿಸಲು, ಮಾರಾಟ ಮಾಡಲು ಮತ್ತು ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಅಧಿಕೃತ ಹೇಳಿಕೆಯನ್ನು ನೀಡಿದೆ.

one station one product
Image Credit: nammakudlanews

ರೈಲ್ವೆ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ದೇಶದಾದ್ಯಂತ 21 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ 728 ಕೇಂದ್ರಗಳು OSOP ಔಟ್ಲೆಟ್ ಗಳನ್ನೂ ಒಳಗೊಂಡಿದೆ. ಈ OSOP ಮಳಿಗೆಗಳನ್ನು ಏಕರೂಪತೆಗಾಗಿ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯ ಮೂಲಕ ವಿನ್ಯಾಸಗೊಳಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group