OnePlus 12: Oneplus ಈ ಮೊಬೈಲ್ ಖರೀದಿಸಲು ಮುಗಿಬಿದ್ದ ಜನರು, ಬೆಲೆ ಮತ್ತು ಫೀಚರ್ ಕಂಡು ಜನರು ಫಿದಾ
ಬಹುನಿರೀಕ್ಷಿತ OnePlus 12 ಸ್ಮಾರ್ಟ್‌ಫೋನ್ ಖರೀದಿಗೆ ಮುಗಿಬಿದ್ದ ಗ್ರಾಹಕರು, ಇಲ್ಲಿದೆ ಈ ಫೋನ್ ನ ಸಂಪೂರ್ಣ ಮಾಹಿತಿ
OnePlus 12 Smartphone: ದೇಶದಲ್ಲಿ ಒನ್‌ಪ್ಲಸ್ ಫೋನ್‌ಗಳಿಗೆ (OnePlus phone) ಹೆಚ್ಚಿನ ಬೇಡಿಕೆ ಇದ್ದು ಜನರು ಕಾತುರದಿಂದ ಕಾಯುತ್ತಿರುವ OnePlus 12 ಸ್ಮಾರ್ಟ್‌ಫೋನ್ (OnePlus 12 smartphone) ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿದ್ದು, ಸಾಕಷ್ಟು ಜನರು ಈ ಫೋನ್ ಖರೀದಿ ಮಾಡಲು ಮುಂದಾಗಿದ್ದಾರೆ.
ಈಗಾಗಲೇ ಈ ಫೋನ್‌ನ ಪ್ರಮುಖ ಫೀಚರ್ಸ್ ಲೀಕ್ ಆಗಿದ್ದು, ಗ್ರಾಹಕರು ಈ ಫೀಚರ್ಸ್‌ಗೆ ಫಿದಾ ಆಗಿದ್ದಾರೆ. ಈ ಫೋನ್ ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಅಲ್ಲಿನ ಬೆಳವಣಿಗೆ ಪರಿಗಣಿಸಿ ಭಾರತದ ವೇರಿಯಂಟ್ ಬಗ್ಗೆ ಏನನ್ನೆಲ್ಲಾ ನಿರೀಕ್ಷೆ ಮಾಡಬಹುದು, ಈ ಫೋನ್‌ನ ಬೆಲೆ ಹಾಗು ಇನ್ನಿತರ ಮಾಹಿತಿಯನ್ನು ತಿಳಿದುಕೊಳ್ಳೋಣ.
ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಫೀಚರ್ಸ್
ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕಾಣಿಸಿಕೊಳ್ಳಲಿದ್ದು, LTPO ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಫೋನ್ 6.82 ಇಂಚಿನ QHD+ ಡಿಸ್‌ಪ್ಲೇ ಹೊಂದಿರಲಿದ್ದು, 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ.
ಅಲ್ಲದೆ ಈ ಫೋನ್ 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 100W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,400 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಸೋನಿ LYT-808 ಮತ್ತು OIS ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 3x ಆಪ್ಟಿಕಲ್ ಜೂಮ್‌ನೊಂದಿಗೆ 64 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾ ಮತ್ತು 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಹೊಂದಿರಲಿದೆ. ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.
ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಬೆಲೆ
ಒನ್‌ಪ್ಲಸ್ 12 ಭಾರತದಲ್ಲಿ ಎಷ್ಟು ಬೆಲೆ ಹೊಂದಿರಬಹುದು ಎಂಬುದರ ಕುರಿತು ಕೆಲವು ಮಾಹಿತಿಗಳು ಲೀಕ್ ಆಗಿವೆ. ಅದರಂತೆ ಒನ್‌ಪ್ಲಸ್ 12R ನ ಆರಂಭಿಕ ಬೆಲೆಯು ಸುಮಾರು 35,000 ರೂಪಾಯಿಗಳಾಗಿರಬಹುದು ಎಂದು ತಿಳಿದುಬಂದಿದೆ. ಜೊತೆಗೆ ಟಾಪ್ ಮಾಡೆಲ್‌ಗೆ 42,000 ರೂಪಾಯಿ ಬೆಲೆ ಇರಲಿದೆ ಎಂದು ಹೇಳಲಾಗಿದೆ. ಇನ್ನೊಂದು ಕಡೆ ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ 65,000 ರೂ.ಗಳಿಂದ ಪ್ರಾರಂಭವಾಗಲಿದ್ದು, ಅತ್ಯಧಿಕ ವೇರಿಯಂಟ್ 75,000 ರೂ.ಗಳ ಬೆಲೆ ಹೊಂದಿರಬಹುದು ಎಂದು ತಿಳಿದುಬಂದಿದೆ. ಈ ನಡುವೆ ಒನ್‌ಪ್ಲಸ್ 11 ರ ಆರಂಭಿಕ ಬೆಲೆಯ 56,999 ರೂ.ಗಳಾಗಿದೆ.