OnePlus 15R Price And Specification: ಇತ್ತೀಚಿನ ತಂತ್ರಜ್ಞಾನ ಮತ್ತು ಅತ್ಯುನ್ನತ ಕಾರ್ಯಕ್ಷಮತೆಯನ್ನು ಪ್ರತಿನಿಧಿಸುವ ಬ್ರ್ಯಾಂಡ್ ನ ಅತ್ಯಾಧುನಿಕ ಮತ್ತು ಪ್ರೀಮಿಯಂ ಮಾದರಿ ಫೋನ್ ಖರೀದಿಸಬೇಕು ಅಂದುಕೊಂಡಿದ್ದರೆ ನಿಮಗೆ ಒಂದೊಳ್ಳೆ ಅವಕಾಶ. OnePlus ಕಂಪನಿ ತನ್ನ ಹೊಸ ಸ್ಮಾರ್ಟ್ ಫೋನ್ ಡಿಸೆಂಬರ್ 17 ರಂದು ಭಾರತದಲ್ಲಿ ಲಾಂಚ್ ಮಾಡಲಿದೆ. OnePlus 15R ಡಿಸೆಂಬರ್ 17 ರಂದು ಭಾರತದಲ್ಲಿ ಬಿಡುಗಡೆ ಆಗಲಿದ್ದು ಈ ಮೊಬೈಲ್ ಐಫೋನ್, Samsung, ವಿವೊ, ಒಪ್ಪೋ ಸೇರಿದಂತೆ ಹಲವು ಸ್ಮಾರ್ಟ್ಫೋನ್ ತಯಾಕರ ಕಂಪನಿಗಳಿಗೆ ಪೈಪೋಟಿ ನೀಡುತ್ತದೆ ಎಂದು ಅಂದಾಜು ಮಾಡಲಾಗಿದೆ.
OnePlus 15R Smart Phone
ಭಾರತದಲ್ಲಿ ಡಿಸೆಂಬರ್ 17, 2025 ರಂದು OnePlus 15R Smart Phone ಬಿಡುಗಡೆ ಆಗಲಿದೆ. OnePlus Pad Go 2 ಜೊತೆಗೆ OnePlus 15R ಕೂಡ ಬಿಡುಗಡೆ ಮಾಡಲು ಕಂಪನಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಡಿಸೆಂಬರ್ 17, 2025 ರಂದು ಬೆಂಗಳೂರಿನಲ್ಲಿ ನೆಡೆಯುವ ಇವೆಂಟ್ ನಲ್ಲಿ ಈ Smartphone ಅನಾವರಣ ಮಾಡಲಾಗುತ್ತದೆ. ಬಿಡುಗಡೆಯಾದ ನಂತರ ಮೊಬೈಲ್ ಸ್ಟೋರ್ ಮತ್ತು ಆನ್ಲೈನ್ ಮೂಲಕ ಮೊಬೈಲ್ ಖರೀದಿ ಮಾಡಬಹುದು.
OnePlus 15R Price
ಭಾರತದಲ್ಲಿ OnePlus 15R Smartphone ಬೆಲೆ ಸುಮಾರು 45,000 ರೂಪಾಯಿಗಳಿಂದ 50,000 ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಚೀನಾದಲ್ಲಿ ಕೇವಲ 33,000 ರೂಪಾಯಿಗೆ ಈ ಮಾದರಿಯ ಫೋನ್ ಲಭ್ಯವಿದೆ. ಆದರೆ ಭಾರತದಲ್ಲಿ ತೆರಿಗೆಗಳ ಕಾರಣ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಬಿಡುಗಡೆಯ ನಂತರ ಅಮೇಜಾನ್ ಮತ್ತು OnePlus ಅಧಿಕೃತ ಸ್ಟೋರ್ ನಲ್ಲಿ ಈ ಸ್ಮಾರ್ಟ್ ಫೋನ್ ಕೊಂಡುಕೊಳ್ಳಬಹುದಾಗಿದೆ. ಬೆಲೆ ಬಗ್ಗೆ ಇನ್ನು ಕೂಡ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ
Display and Battery Capacity
OnePlus 15R Snapdragon 8 Gen 5 ಚಿಪ್ ಸೆಟ್ ನೊಂದಿಗೆ ಬರುತ್ತದೆ. 1.5K ರೆಸಲ್ಯೂಶನ್ ನೊಂದಿಗೆ 165Hz ರಿಫ್ರೆಶ್ ರೇಟ್ ಹೊಂದಿರುವ AMOLED Display ಅಳವಡಿಸಲಾಗಿದೆ. ಗೇಮಿಂಗ್ ಹಾಗು ವಿಡಿಯೋ ಹೆಚ್ಚು ಹೆಚ್ಚು ವೀಕ್ಷಣೆ ಮಾಡಲು ಈ ಮೊಬೈಲ್ ಬೆಸ್ಟ್ ಆಗಿರಲಿದೆ. ಪ್ರಬಲ ಪ್ರೊಸೆಸರ್ ಹೊಂದಿರುದರಿಂದ ಗೇಮಿಂಗ್ ಗೆ ಉತ್ತಮವಾಗಿದೆ. OnePlus 15R ನಲ್ಲಿ 7,400 mAh ಬ್ಯಾಟರಿ ನೀಡಲಾಗಿದೆ. ಇದು ಒನ್ ಪ್ಲಸ್ ಫೋನ್ ಗಳಲ್ಲಿ ದೊಡ್ಡದಾಗಿದೆ. 80W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡಲಾಗಿದೆ.
Camera Quality and Colors
OnePlus 15R ನಲ್ಲಿ 50MP ಮುಖ್ಯ ಕ್ಯಾಮೆರಾ (OIS ಸಹಿತ), 8 MP ಅಲ್ಟ್ರಾ-ವೈಡ್ ಲೆನ್ಸ್ ಇದೆ. 32 MP ಫ್ರಂಟ್ ಕ್ಯಾಮೆರಾ ಸೆಲ್ಫಿ ಗೆ ಉತ್ತಮವಾಗಿದೆ. ಹಾಗೆ ನೀರು ಮತ್ತು ದೂಳಿನಿಂದ ರಕ್ಷಣೆ ನೀಡುತ್ತದೆ. Charcoal Black ಮತ್ತು Minty Green ಬಣ್ಣಗಳ ಆಯ್ಕೆ ನೀವು ಖರೀದಿ ಮಾಡಬಹುದಾಗಿದೆ. ಈ ಫೋನ್ Android 16 ಆಧಾರಿತ OxygenOS 16 ನೊಂದಿಗೆ ಬರುತ್ತದೆ. ಇದು ಸುಗಮ ಮತ್ತು ವೇಗದ ಅನುಭವ ನೀಡಲಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

