Ads By Google

OnePlus Watch 2: 100 ಘಂಟೆಗಳ ಕಾಲ ಚಾರ್ಜ್ ಮಾಡುವ ಅಗತ್ಯ ಇಲ್ಲ, ಈ ಅಗ್ಗದ ಸ್ಮಾರ್ಟ್ ವಾಚ್ ಗೆ ಜನರು ಫುಲ್ ಫಿದಾ

OnePlus Watch 2 Price and feature

Image Credit: Original Source

Ads By Google

OnePlus Watch 2: ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಯುವತಿಯರು ಹೆಚ್ಚಾಗಿ Smart Watch ಇಷ್ಟಪಡುತ್ತಿರುವ ಕಾರಣ ಕೆಲವು ಕಂಪನಿಗಳು ಕಡಿಮೆ ಬೆಲೆಗೆ ಹೆಚ್ಚು ವೈಶಿಷ್ಟ್ಯತೆಯನ್ನು ಹೊಂದಿರುವ Smart Watch ಗಳನ್ನ ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ.

Apple ಕಂಪನಿ ಬಿಟ್ಟರೆ ಅತೀ ಹೆಚ್ಚಿನ ಹೆಚ್ಚು ಜನಪ್ರಿಯತೆಯನ್ನ ಪಡೆದುಕೊಂಡಿರುವ ಕಂಪನಿ ಎಂದು ಹೇಳಿದರೆ ಅದೂ OnePlus ಕಂಪನಿ ಆಗಿದೆ. ಗ್ರಾಹಕರಿಗೆ ಉತ್ತಮವಾದ ಮೊಬೈಲ್ ಗಳನ್ನ ನೀಡುತ್ತಿದ್ದ OnePlus ಇದೀಗ ಸ್ಮಾರ್ಟ್ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಜನರ ಮೆಚ್ಚುಗೆಗೆ ಕಾರಣವಾಗಿದೆ. ಸದ್ಯ ಒನ್ ಪ್ಲಸ್ ಕಂಪನಿ ಬಿಡುಗಡೆ ಮಾಡಿರುವ ಈ ಸ್ಮಾರ್ಟ್ ವಾಚ್ ನ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

Image Credit: Oneplus

OnePlus Watch 2
ಒನ್ ಪ್ಲಸ್ ಮೊಬೈಲ್ ಗಳನ್ನ ಭಾರತದಲ್ಲಿ ಬಿಡುಗಡೆ ಮಾಡುವುದರ ಬಹಳ ಫೇಮಸ್ ಆಗಿದ್ದ ಒನ್ ಪ್ಲಸ್ ಕಂಪನಿ ಈಗ ಒನ್ ಪ್ಲಸ್ ಸ್ಮಾರ್ಟ್ ವಾಚ್ ಭಾರತದ ಬಿಡುಗಡೆ ಮಾಡುವುದರ ಮೂಲಕ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ರೆಡಿ ಆಗಿದೆ. ಇದೀಗ OnePlus ಕಂಪನಿಯು ತನ್ನ ಗ್ರಾಹಕರಿಗಾಗಿ MWC 2024 ರಲ್ಲಿ OnePlus ವಾಚ್ 2 ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ವಾಚ್‌ನಲ್ಲಿ ಹಲವು ವಿಶೇಷತೆಗಳನ್ನು ಪರಿಚಯಿಸಿದೆ.

OnePlus Watch 2 Features
*OnePlus Watch 2 ನಲ್ಲಿ 1.43 ಇಂಚಿನ ಡಿಸ್ಪ್ಲೇ ಅನ್ನು ಅಳವಡಿಸಲಾಗಿದೆ. 466×466 ಪಿಕ್ಸೆಲ್ ಗಳೊಂದಿಗೆ 600 ನೀಟ್ ಹೊಳಪನ್ನು ನೀಡುತ್ತದೆ.

*ಈ ಹೊಸ ವಾಚ್ ನಲ್ಲಿ ನೀವು Snapdragon W5 BES 2700 ಪ್ರೊಸೆಸರ್ ಅನ್ನು ಪಡೆಯುತ್ತೀರಿ.

*OnePlus Watch 2 ಆಂಡ್ರಾಯ್ಡ್ 8.0 ಆವೃತ್ತಿಯ ಬೆಂಬಲದೊಂದಿಗೆ ಬರುತ್ತದೆ.

*100 ವರ್ಕೌಟ್ ಮೋಡ್ ಗಳನ್ನ ಇದರಲ್ಲಿ ನೀಡಲಾಗಿದೆ.

*ಈ ಸ್ಮಾರ್ಟ್ ವಾಚ್ IP68 ವಾಟರ್ ರೆಸಿಸ್ಟೆಂಟ್ ನೊಂದಿಗೆ ಬರುತ್ತದೆ.

Image Credit: gsmarena

*OnePlus Watch 2 ನಲ್ಲಿ 500mAh ಬ್ಯಾಟರಿಯನ್ನು ಅಳವಡಿಸಲಾಗಿದೆ, ಹಾಗೆ ಇದನ್ನು ಸ್ಮಾರ್ಟ್ ಮೋಡ್‌ ನೊಂದಿಗೆ 100 ಗಂಟೆಗಳ ಕಾಲ ಬಳಕೆಮಾಡಬಹುದು.

*ಬ್ಲೂಟೂತ್ ಕರೆಗಳಿಗಾಗಿ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಪಡೆದುಕೊಂಡಿದೆ.

*ಇದಷ್ಟೇ ಅಲ್ಲದೆ ಸ್ಲೀಪ್ ಟ್ರ್ಯಾಕಿಂಗ್, ಹಾರ್ಟ್ ರೇಟಿಂಗ್, ಬ್ಲಡ್ ಆಕ್ಸಿಜನ್ ಸೆನ್ಸಾರ್ ಹಾಗೆ ಇತ್ಯಾದಿ ಫೀಚರ್ ಅನ್ನು ಅಳವಡಿಸಲಾಗಿದೆ.

OnePlus Watch 2 Price
OnePlus ವಾಚ್ 2 ನ ಬೆಲೆಯ ಬಗ್ಗೆ ಮಾತಾಡುದಾದರೆ ಒನ್ ಪ್ಲಸ್ ಕಂಪನಿ ಈ ವಾಚ್ ಅನ್ನು ಭಾರತದಲ್ಲಿ 24999 ಕ್ಕೆ ಬಿಡುಗಡೆ ಮಾಡಿದೆ. ಇದು Black Steel ಮತ್ತು Radiant Steel ಎಂಬ 2 ಬಣ್ಣದ ಆಯ್ಕೆಯಲ್ಲಿ ಗ್ರಾಹಕರ ಕೈ ಸೇರುತ್ತದೆ. ಕಂಪನಿಯ ಅಧಿಕೃತ Website Oneplus ಮತ್ತು OnePlus Store Application ಮತ್ತು online Shopping ಪ್ಲಾಟ್ ಫಾರ್ಮ್ ಗಳಾದ Amazon, Flipkart, Myntra ಮತ್ತು Croma ನಿಂದ ಈ ಸ್ಮಾರ್ಟ್ಖ ವಾಚ್ರೀ ಅನ್ನು ಖರೀದಿಸಬಹುದಾಗಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in