Ads By Google

Onion Price: ಬೆಳ್ಳುಳ್ಳಿ ಬೆಲೆ ಏರಿಕೆಯ ಬೆನ್ನಲ್ಲೇ ಈರುಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ, ಗ್ರಾಹಕರಿಗೆ ಇನ್ನಷ್ಟು ಹೊರೆ.

onion price hike in india

Image Credit: Original Source

Ads By Google

Onion Price Hike: ಸದ್ಯ ದೇಶದ ಜನತೆಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ ತಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗುತ್ತಿದ್ದಾರೆ. ಯಾವುದೇ ವಸ್ತುವನ್ನು ಖರೀದಿಸಿದರು ಕೂಡ ಹೆಚ್ಚಿನ ಹಣವನ್ನು ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಅದರಲ್ಲೂ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಪ್ರತಿ ನಿತ್ಯ ಬಳಕೆಗೆ ಬೇಕಾಗುವ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹಾಲು, ಮೊಸರು, ತರಕಾರಿ, ಬೇಳೆಕಾಳು ಸೇರಿದಂತೆ ಎಲ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ಜನರಿಗೆ ಇನ್ನಷ್ಟು ಆರ್ಥಿಕ ಹೊರೆಯನ್ನು ನೀಡುತ್ತಿದೆ.

Image Credit: bnnbreaking

ಗ್ರಾಹಕರಿಗೆ ಇನ್ನಷ್ಟು ಹೊರೆ
ಅಡುಗೆ ಪದಾರ್ಥಗಳ ಬೆಲೆ ಹೆಚ್ಚಿಸಿದರೆ ಜನರಿಗೆ ಹೆಚ್ಚು ಹಣವನ್ನು ನೀಡಿ ಖರೀದಿಸುವುದು ಅನಿವಾರ್ಯವಾಗುತ್ತದೆ. ಇನ್ನು ದೇಶದಲ್ಲಿ ತರಕಾರಿ ಬೆಲೆ ಕೂಡ ಏರಿಕೆ ಆಗುತ್ತಲೇ ಇದೆ. ಪ್ರಸ್ತುತ ಬೆಳ್ಳುಳ್ಳಿ ಕೈಗೆಟುಕದಂತಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳುಳ್ಳಿ ಬೆಲೆ 500 ರೂ. ದಾಟುತ್ತಿದೆ. ಬೆಳ್ಳುಳ್ಳಿ ಬೆಳೆಯ ಏರಿಕೆ ಕಂಡು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಬೆಳ್ಳುಳ್ಳಿ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಮಾರುಕಟ್ಟೆಯಲ್ಲಿ ಮತ್ತೆ ಈರುಳ್ಳಿ ಬೆಲೆ ಕೂಡ ಏರಿಕೆಯಾಗಿದೆ.

ಬೆಳ್ಳುಳ್ಳಿ ಬೆಲೆ ಏರಿಕೆಯ ಬೆನ್ನಲ್ಲೇ ಈರುಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ
ಈ ಹಿಂದೆ ಒಮ್ಮೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಈರುಳ್ಳಿ ಬೆಲೆ ಜನರ ಕಣ್ಣಲ್ಲಿ ನೀರನ್ನು ತರಿಸುತ್ತಿತ್ತು. ಕೆಜಿಗೆ 300 ರಿಂದ 400 ರೂ ವರೆಗೆ ತಲುಪಿದ್ದ ಈರುಳ್ಳಿ ಬೆಲೆ ಕಳೆದ ಕೆಲ ತಿಂಗಳ ಹಿಂದೆ ಯಥಾ ಸ್ಥಿತಿ ತಲುಪಿತ್ತು. ಆದರೆ ಇದೀಗ ಬೆಳ್ಳುಳ್ಳಿ ಬೆಲೆ ಹೆಚ್ಚುತ್ತಿದ್ದ ಬೆನ್ನಲ್ಲೇ ಈರುಳ್ಳಿ ಬೆಲೆ ಕೂಡ ಏರಿಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಹಾಗೂ ಈರುಳ್ಳಿ ಖರೀದಿಗೆ ಜನರಿಗೆ ಕಷ್ಟವಾಗುತ್ತಿದೆ.

Image Credit: Hindustantimes

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆಯಾಗಿದ್ದು ಜನರಿಗೆ ಶಾಕ್ ನೀಡಿದೆ. ಹೌದು, ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧವನ್ನು ಹಿಂಪಡೆದ ಬಳಿಕ ಈ ಬೆಳವಣಿಗೆ ನಡೆದಿದೆ. ದೇಶದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆ ಲಾಸಲ್‌ ಗಾಂವ್, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟ ದರದಲ್ಲಿ ಶೇ. 40 ರಷ್ಟು ಏರಿಕೆಯಾಗಿದೆ. ಈರುಳ್ಳಿ ಬೆಲೆ ಈಗ ಕ್ವಿಂಟಲ್ ಗೆ 1,280 ರೂ.ನಿಂದ 1,400 ರೂ.ಗೆ ಏರಿಕೆಯಾಗಿದ್ದು, ಕನಿಷ್ಠ ಬೆಲೆ 1,000 ರೂ. ಹಾಗೂ ಗರಿಷ್ಠ ಬೆಲೆ ಕ್ವಿಂಟಲ್ ಗೆ 2,100 ರೂ. ಆಗಿದೆ. ಬೆಳ್ಳುಳ್ಳಿ ಬೆಲೆ ಏರಿಕೆ ನಂತರ ಇದೀಗ ಈರುಳ್ಳಿ ಬೆಲೆ ಏರಿಕೆಯಾಗಿದ್ದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in